-
ಗಣಕಯಂತ್ರದಲ್ಲಿ
ಫೋಟೊಶಾಪ್ ನೊಂದಿಗೆ ಯುದ್ಧ ಮಾಡ್ತಿದ್ದೆ..  ನನ್ನ
ಹತ್ತಿರ ಕುಳಿತುಕೊಂಡು ಅಮ್ಮ ಅಪ್ಪನ ದೂರು ಹೇಳ್ತಿದ್ರು, ಮಗಳು ಕಿವಿಗೆ ಸಿಕ್ಕಿಸಿಕೊಂಡು
ತನ್ನಷ್ಟಕ್ಕೇ ಗುನುಗುತ್ತಿದ್ದಳು. ಮಗ ಯಾವುದೋ ಪ್ರೋಗ್ರಾಮ್ ಬರೆಯುತ್ತಿದ್ದ.
’ಪ್ಲೀಸ್ ಪ್ರಥು,
ಒಮ್ಮೆ ಇಲ್ಲಿ ಬಾ. ಈ ಲೇಯರ್ ಏನೋ ಪ್ರಾಬ್ಲೆಮ್ ಕೊಡ್ತಿದೆ.. “
ನನ್ನ ಮಗ ಮಗಳದು
ವಿಚಿತ್ರ ಹವ್ಯಾಸ! ಇಬ್ಬರಿಗೂ ಹಾಡು ಕೇಳದೇ  ಏನೂ
ಮಾಡ್ಲಿಕ್ಕೆ ಗೊತ್ತಾಗೊಲ್ಲ. ಪರೀಕ್ಷೆ ಹೊತ್ತಿಗೂ ಒಂದೇ ಹಾಡನ್ನೇ ಕೇಳ್ತಾ ಕಲಿಯುವುದು. 
ಈಗ್ಲೂ ಅಷ್ಟೇ,
ಅವನಿಗೆ ನಾನು ಬಾಯಿ ಅಲ್ಲಾಡಿಸೋದು ಮಾತ್ರ ಕಾಣಿಸಿತು.. ಮತ್ತೆ ಕೈ ಬಾಯಿ ಸನ್ನೆ ಮಾಡಿ ಕರೆದೆ. (
ಈಗೀಗ ಸನ್ನೆ ಮಾಡಿ ಮಾತಾಡುವುದರಲ್ಲಿ ಎಕ್ಸ್ ಪರ್ಟ್ ಆಗಿಬಿಟ್ಟಿದ್ದೇನೆ.)
ಎದ್ದು ಬಂದವ
ಗಣಕಯಂತ್ರ ನೋಡುತ್ತಲೇ,
“ಅಮ್ಮ, ಅದೇನು
ಮಿದುಳು ಫಿಡ್ಜ್ ನೊಳಗೆ ಇಟ್ಟಿದ್ದಿಯಾ”
ಅನ್ನಬೇಕೆ..
ಅಮ್ಮನಿಗೆ ಕೆಂಡದಂತ ಕೋಪ.. 
“ಏನು ಶಿಕ್ಷಣ
ಕೊಟ್ಟಿದಿಯಾ ಮಕ್ಕಳಿಗೆ! ಹಿರಿಯರು ಅಂತಾ ಮರ್ಯಾದೆನೂ ಇಲ್ಲ.. ಕಿವಿಯಿಂದ ಬಿದ್ದವರ ಹಾಗೆ
ಮಾತನಾಡುತ್ತಾನೆ.. “
ಯಾರಮೇಲೆ ಅಂತಿರಾ,
ಮತ್ಯಾರು ಬಡಪಾಯಿ ನಾನೇ ಎಲ್ಲರಿಗೂ ಕಾಣಿಸೋದು! 
ಸಹಸ್ರನಾಮಾರ್ಚನೆ
ನಂಗೆ.. ಅವರಿಬ್ಬರೂ ಮತ್ತೊಮ್ಮೆ ಕಿವಿಗೆ ಸಿಕ್ಕಿಸಿಕೊಂಡುಬಿಟ್ರು!
ನನ್ನ ಸೆನ್ಸ್ ಆಫ್
ಹ್ಯೂಮರ್ ಬೆಳಕಿಗೆ ಬಂದದ್ದೇ ಮಗನಿಂದ, ಅವನಿದ್ದಾಗಲೆಲ್ಲ ನಮ್ಮ ಮನೆಯಲ್ಲಿ ನಗೆ ಹೊನಲು. ಆಡಿದ
ಮಾತಿನಲ್ಲೆಲ್ಲಾ ಏನಾದರೂ ಕುಟುಕಿ ತೆಗೆದು ನನಗೇ ನಗುಬರುವಂತೆ ಮಾಡುತ್ತಾನೆ.. 
ಇವನ ಸಹವಾಸ
ದೋಷದಿಂದ ಮಗಳು ಶುರುಮಾಡಿದ್ದಾಳೆ.. 
ಕಾಮನ್ ಸೆನ್ಸ್
ನಲ್ಲೇ ಸೆನ್ಸ್ ಆಫ್ ಹ್ಯೂಮರ್ ಅಡಗಿದೆ... 
ದೋಷಗಳನ್ನು
ತಮಾಷೆಯಾಗಿಯೇ ಎತ್ತಿ ತೋರಿಸುವ ಜಾಣ್ಮೆ ಇರಬೇಕು. 
ನಗುವಿಗೆ ಜಾತಿ ಮತ
ಧರ್ಮಗಳ ಬಣ್ಣ ಹಚ್ಚಬಾರದು. 
ಮಾನವೀಯತೆಯ
ಲೇಪವಿರಬೇಕು. 
ಊನವನ್ನು ಹೀನಮಾಡಿ
ನಗುವ ಗುಣಕ್ಕಿಂತ ಹೀನಗುಣ ಯಾವುದೂ ಇಲ್ಲ. 
ನಗು
ಸಾಂಕ್ರಾಮಿಕವಾಗಿ ಹರಡಬೇಕು.. 
ಮನದ ನೋವು
ಹರಿದುಹೋಗಬೇಕು. 
ತನ್ನನ್ನೇ  ಹಾಸ್ಯಮಾಡಿಕೊಳ್ಳುವ ಜಾಣ್ಮೆ ಇರುವವನು ಅದನ್ನು
ಹೊಟ್ಟೆಪಾಡಿಗೆ ಮಾಡುತ್ತಾನೆ, 
ನಗುವ ಗುಣವೂ
ಎಲ್ಲರಿಗೂ ದುರ್ಲಭ! ಕೆಲವರಿರ್ತಾರೆ, ಅದೇನೋ ಆಕಾಶ ತಲೆಗೆ ಬಿದ್ದವರ ಜಗತ್ತಿನ ಪ್ರಾಬ್ಲೆಮ್
ಎಲ್ಲಾ ಅವರದೇ ಅನ್ನೋ ಹಾಗೆ ಆಡ್ತಾರೆ, ತಾವೂ ನಗೊಲ್ಲ.. ನಗುವವರಿಗೂ ಅಡ್ಡಗಾಲು ಹಾಕ್ತಾರೆ.
ನಗೆಗಳಲ್ಲೂ ನವ ವಿಧಯಿವೆಯೇ..
ಇದೆ ಅನ್ನುತ್ತೇನೆ.. 
ನಳಿನಿ ತುಟಿಬಿಚ್ಚದೆ
ಶಬ್ದವಿಲ್ಲದೆ.. ಆಹಾ! ಏನು ಚಂದದ ನಗು!
ಅನಿತಾಳದಂತೂ
ಮುತ್ತಿನಂತ ಹಲ್ಲು, ಹವಳದಂತಹ ತುಟಿಯನ್ನು ಮೆಲ್ಲನೆ ಅರಳಿಸಿ ಅತೀ ಹೆಚ್ಚೂ ಅಲ್ಲ ಅತೀ ಕಡಿಮೆನೂ
ಅಲ್ಲದ ಹೂನಗೆ!
ಅಪರ್ಣಾ, ಏನು ಚಂದ
ಸ್ವರ! ರೇಡಿಯೋ ಲೋಕದಲ್ಲಿದ್ದಾಳೆಂದೋ ಏನೋ ನಂಗೆ ಅವಳ ನಗೆ ನೋಡುವುದಕ್ಕಿಂತ ಕೇಳುವುದಕ್ಕೆ ಖುಷಿ!
ಭಾರತಿ ಅಕ್ಕ, ಅವರು
ನಮ್ಮಂತೆ ಉದ್ವೇಗದವರಲ್ಲ.. ಹಿಡಿತದಲ್ಲಿಟ್ಟುಕೊಂಡು ಮಲ್ಲಿಗೆಯ ಪರಿಮಳದಂತಹ ನಗೆ ಉಣ್ಣಿಸುವವರು!
ಮತ್ತೆ ನನ್ನ
ವೀಣಕ್ಕ.. ಮನಬಿಚ್ಚಿ ನನ್ನಂತೆ ನಗುವವರು! ನಾವಿಬ್ಬರೂ ಸಶಬ್ದ ಹಲ್ಲು ಬಿಟ್ಟು ಯಾರ ಪರಿಯೇ
ಇಲ್ಲದೆ ನಗುವ ಜಾತಿಯವರು! 
ಸಾರಿ ಮನೋಹರ್,
ಅನಿಲ್, ಅವಿನಾಶ್, ಹರ್ಷ, ಮೋಹನ್.. ನೆಕ್ಸ್ ಟೈಮ್ ನಿಮ್ಮ ನಗೆ ಸ್ಟಡಿ ಮಾಡ್ತೇನೆ... ಆಯ್ತಾ!
ಹರಿಯಲಿ ನಗೆ
ಬುಗ್ಗೆ ನಮ್ಮ ಮುಂಜಾವಿನಲಿ ಸದಾ! 
ನೋವೆಲ್ಲ ಮಾಯವಾಗಿ
ನಲಿವು ಜಲಪಾತವಾಗಿ ನಮ್ಮೆಲ್ಲರ ಬದುಕಲಿ ಭೋರ್ಗೆರೆದು ವರ್ಷಪೂರ್ತಿ ಹರಿಯುತ್ತಲೇ ಇರಲಿ!
ಆಮೆನ್!!! 
No comments:
Post a Comment