ಗಕ್ಕನೆ ನಿಂತೆ ನಾ
ಕವಲೊಡೆದ ಹಾದಿಯಲಿ
ಒಲವಿನ ಅರಮನೆಗೆ
ಕೊಂಡೊಯ್ಯುದಾವುದಿದರಲಿ..
ಗಹ ಗಹನೆ ನಕ್ಕರ್ಯಾರೋ
ಮುಗಿಲ ಮರೆಯಿಂದ
ಉಸುರಿತು..
“ಪೆಣ್ಣೇ, ಕಾಣಲೇ ಇಲ್ಲವಲ್ಲ
ನೀ ನಿನ್ನೊಳಗೇ ಅಡಗಿಹ
ಆ ಹಾದಿಯನೊಮ್ಮೆ
ಇಣುಕಿ ನೋಡಂತೆ
ಸಾಲು ಹಣತೆ ಬೆಳಗಿಸಿದ,
ಕೆಂಗುಲಾಬಿ ಪಕಳೆ ಚೆಲ್ಲಿದ,
ಕವಲೊಡೆಯದ, ತಿರುವುಗಳಿಲ್ಲದ
ನೇರ ರಾಜಬೀದಿ,
ದ್ವಾರ ಅಗಲವಾಗಿ
ತೆರೆದಿಟ್ಟು ಕಾದಿದೆ
ನಿನಗಾಗಿಯೇ ನಿನ್ನೊಲವು!"
No comments:
Post a Comment