ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
Showing posts with label ಫೊಟೋಗ್ರಾಫಿ. Show all posts
Showing posts with label ಫೊಟೋಗ್ರಾಫಿ. Show all posts
11 August, 2014
18 April, 2014
ವಿದಾಯ ಚುಂಬನ!
28 October, 2013
ಕಪ್ಪು-ಬಿಳಿ ಪಾಠ..
ಹುಡುಕು
ಕಪ್ಪು-ಬಿಳಿ,
ಛಾಯಾಗ್ರಹಣ,
ಪಾರಿವಾಳ,
ಫೊಟೋಗ್ರಾಫಿ
11 October, 2013
ಬೆಳಕಿನಾಟ!
19 September, 2013
ದೂರದ ಸೈಬೇರಿಯದಿಂದ ನಮ್ಮಂಗಳಕ್ಕೆ ವಲಸೆ ಬಂದ ಪುಟ್ಟ ಹಕ್ಕಿ!
ಅವತ್ತು ಮಟಮಟ ಮಧ್ಯಾಹ್ನ.. ಕಣ್ಮುಚ್ಚಿಕೊಂಡು ಕಿಟಿಕಿಯ ಪಕ್ಕದಲ್ಲಿದ್ದ
ಮಾವಿನಮರದಲ್ಲಿ ಕುಹೂ ಕುಹೂ.. ನಾದಕ್ಕೆ ತಲೆತೂಗುತ್ತಿದ್ದೆ, ಇದ್ದಕ್ಕಿದ್ದಂತೆ
ಮತ್ತೊಂದು ನಾದ.. ಚಿಲಿಪಿಲಿ ಕೇಳಿಸಿತು. ಓಡಿದೆ ನನ್ನ ಮೂರನೆ ಕಣ್ಣು
ಹಿಡ್ಕೊಂಡು. ವಸಂತಕಾಲವದು! ಅಪ್ಪೆಮಿಡಿ ಮಾವಿನ ಸಣ್ಣ ಸಣ್ಣ ಗೊಂಚಲು
ನೇತಾಡುತ್ತಿದ್ದವು! ಎತ್ತರದಲ್ಲಿ ಈ ತನಕ ಕಾಣದ ಅತಿಥಿಗಳು ಚಿಲಿಪಿಲಿಗುಟ್ಟುತ್ತಾ
ಗೆಲ್ಲಿನಿಂದ ಗೆಲ್ಲಿಗೆ ಸುತ್ತುತ್ತಿದ್ದವು. ಅಂತೂ ಕ್ಲಿಕ್ಕಿಸಿದ ಹತ್ತಹದನೈದು ಫೊಟೊಗಳಲ್ಲಿ
ಎರಡೋ ಮೂರರಲ್ಲಿ ಮಾತ್ರ ಕಾಣಿಸಿಕೊಂಡಿವೆ. ಮತ್ತೆ ಗೂಗಲ್ ಮಾಡಿ ಮಾಡಿ
ಸೋತು ಹೋದೆ. ಕೊನೆಗೂ ಡಾ|| ಕೃಷ್ಣ ಮೋಹನರ ಜಾಲತಾಣದಲ್ಲೂ
ಕಾಣಿಸಿಕೊಂಡ ಮಾಹಿತಿಯಿಂದ ಈ ಹಕ್ಕಿಯ ಬಗ್ಗೆ ಮತ್ತಷ್ಟು ತಿಳಿದುಕೊಂಡೆ.
ಇನ್ನು ಮುಂದಿನ ವಸಂತ ಮಾಸದಲ್ಲೂ ಕಾಣಿಸುವವೆಂಬ ನಿರೀಕ್ಷೆ!
ಇವತ್ತು ಮತ್ತೆ ಕಾಡಿತು ನೆನಪು ಈ ಪುಟ್ಟ ಸುಂದರಿಯ!
ದೂರದ ಸೈಬೇರಿಯದಿಂದ ನನ್ನ ಕೋಗಿಲೆಯ ಜತೆ ನಮ್ಮೂರಿನ ವಸಂತಮಾಸ
ಸವಿಯಲು ಬಂದ ಸುಂದರಿ!
Asian Brown Flycatcher!
ಮಾವಿನಮರದಲ್ಲಿ ಕುಹೂ ಕುಹೂ.. ನಾದಕ್ಕೆ ತಲೆತೂಗುತ್ತಿದ್ದೆ, ಇದ್ದಕ್ಕಿದ್ದಂತೆ
ಮತ್ತೊಂದು ನಾದ.. ಚಿಲಿಪಿಲಿ ಕೇಳಿಸಿತು. ಓಡಿದೆ ನನ್ನ ಮೂರನೆ ಕಣ್ಣು
ಹಿಡ್ಕೊಂಡು. ವಸಂತಕಾಲವದು! ಅಪ್ಪೆಮಿಡಿ ಮಾವಿನ ಸಣ್ಣ ಸಣ್ಣ ಗೊಂಚಲು
ನೇತಾಡುತ್ತಿದ್ದವು! ಎತ್ತರದಲ್ಲಿ ಈ ತನಕ ಕಾಣದ ಅತಿಥಿಗಳು ಚಿಲಿಪಿಲಿಗುಟ್ಟುತ್ತಾ
ಗೆಲ್ಲಿನಿಂದ ಗೆಲ್ಲಿಗೆ ಸುತ್ತುತ್ತಿದ್ದವು. ಅಂತೂ ಕ್ಲಿಕ್ಕಿಸಿದ ಹತ್ತಹದನೈದು ಫೊಟೊಗಳಲ್ಲಿ
ಎರಡೋ ಮೂರರಲ್ಲಿ ಮಾತ್ರ ಕಾಣಿಸಿಕೊಂಡಿವೆ. ಮತ್ತೆ ಗೂಗಲ್ ಮಾಡಿ ಮಾಡಿ
ಸೋತು ಹೋದೆ. ಕೊನೆಗೂ ಡಾ|| ಕೃಷ್ಣ ಮೋಹನರ ಜಾಲತಾಣದಲ್ಲೂ
ಕಾಣಿಸಿಕೊಂಡ ಮಾಹಿತಿಯಿಂದ ಈ ಹಕ್ಕಿಯ ಬಗ್ಗೆ ಮತ್ತಷ್ಟು ತಿಳಿದುಕೊಂಡೆ.
ಇನ್ನು ಮುಂದಿನ ವಸಂತ ಮಾಸದಲ್ಲೂ ಕಾಣಿಸುವವೆಂಬ ನಿರೀಕ್ಷೆ!
ಇವತ್ತು ಮತ್ತೆ ಕಾಡಿತು ನೆನಪು ಈ ಪುಟ್ಟ ಸುಂದರಿಯ!
ದೂರದ ಸೈಬೇರಿಯದಿಂದ ನನ್ನ ಕೋಗಿಲೆಯ ಜತೆ ನಮ್ಮೂರಿನ ವಸಂತಮಾಸ
ಸವಿಯಲು ಬಂದ ಸುಂದರಿ!
Asian Brown Flycatcher!
ಹುಡುಕು
asian brown flycatcher,
ಒಲವು,
ಪ್ರಕೃತಿ,
ಪ್ರದರ್ಶನ,
ಫೊಟೋಗ್ರಾಫಿ,
ಸೃಷ್ಟಿ
04 September, 2013
ಮೊಗ್ಗು ಅಂದಿದ್ದು ಸ್ವಗತದಲ್ಲಿ.. ಮೂರನೆಯ ಕಣ್ಣು ಸೆರೆ ಹಿಡಿಯಿತು ಅದರ ಮಾತನ್ನು!
27 June, 2013
ಬೆಳಗುವ ಪುಟ್ಟ ಕೊಡೆ!
23 February, 2013
21 February, 2013
ಛಾಯಾ ಚಿತ್ರಗಳಲ್ಲಿ ಪ್ರಯೋಗಗಳು! Experiments in photography!
14 October, 2012
13 October, 2012
12 October, 2012
ಜೀವದ್ರವ್ಯ ಬತ್ತಿಹೋದ ಮರವೊಂದು ಬಳ್ಳಿಗಾಸರೆಯಾದ ಭಾವಚಿತ್ರಕ್ಕೆ ಆಸುಮನದ ಕಾವ್ಯಸ್ಪಂದನ!
ಅಂದು ಹಸಿರು, ಎಂಥ ವೈಭವ
ದೃಷ್ಟಿ ಬೀಳುವ ತೆರದಲಿ
ಸುಮಂಗಲಿಯಾ ಸಿರಿಯ ವೈಖರಿ
ಮಾಸಿ ವಿಧವೆಯು ಆಗಿದೆ
ಸುತ್ತ ಮುತ್ತಲು ಹತ್ತು ಮರಗಳು
ಹಸಿರನುಟ್ಟು ಕುಣಿಯಲು
ಇದ್ದ ಊರಿನ ಪರಿವೆಯಿಲ್ಲದೆ
ಸ್ಥಬ್ಧಳಾಗಿ ನಿಂತಿದೆ
ಅಂದು ಹಕ್ಕಿಯ ಬಳಗಕೆಲ್ಲ
ಆಯಿತದುವು ಆಲಯ
ಇಂದು ಎಲ್ಲವ ಕಳೆದುಕೊಂಡರೂ
ಮನದಿ ಇಹುದು ಆಶಯ
ಏನೇ ಆದರೂ, ಎಷ್ಟು ಸೋತರೂ
ಧೈರ್ಯಗೆಡದೇ ನಿಂತಿದೆ
ಅಂತ್ಯ ಕಾಲದಲ್ಲಿ ಕೂಡ
ಬಳ್ಳಿಗಾಸರೆ ನೀಡಿದೆ
- ಮತ್ತೊಂದು ಸೂಪರ್ ಕವನ ಪರೇಶ್ ಸರಾಫ್‍ನವರಿಂದ!
ಅಲ್ಲದೆ, ಉಷಾಕಟ್ಟೆಮನೆಯವರು, ಶ್ರೀವತ್ಸ ಕಂಚಿಮನೆಯವರು, ನನ್ನ ಭಾವನ ಮಗ ಅನುಜ್ ನಾಯಕ್, ಜಲಚರ ಬ್ಲಾಗಿನ ಆಝಾದ್ ಅಣ್ಣ, ನನ್ನ ತಮ್ಮ ಕಿರಣ್, ಗೋಪಾಲಕೃಷ್ಣ ಪ್ರಭು ಮತ್ತು ನನ್ನ ಮಗಳು ಮನಿಷಾ ಶೀರ್ಷಿಕೆಗಳನ್ನು ನೀಡಿದ್ದಾರೆ....
Azad IS :ತಾತ್ಕಾಲಿಕವಿದು ಒಣಗಿರುವೆನೆಂದು ಕಡಿಯಬೇಡಿ... ಆದರೂ ನಾನಾಗಿಲ್ಲವೇ ಹಸಿರುಲತೆಗೆ ಜೋಡಿ
Anuj Nayak :'THERE WILL ALWAYS BE HOPE EVEN IN THE SMALLEST THINGS IN THE WORLD'
Manisha Nayak K: You are never too weak to support others
Gopalkrishna Prabhu :Akin to moulting !
Usha Kattemane: ನೀನೊಲಿದರೆ ಕೊರಡು ಕೊನರುವುದಯ್ಯಾ..
Shrivatsa Kanchimane :ಜೀವದ್ರವ್ಯ ಬತ್ತಿದ ಮೇಲೂ ಲತೆಗೆ ಆಸರೆಯಾಗುವ ಒಣಮರದ ನಿಸ್ವಾರ್ಥ ಒಲವು ನನ್ನಲ್ಲೂ ಒಂದಿಷ್ಟು ಒಸರಿದ್ದರೆ......
ನಾಲ್ಕು ತಿಂಗಳ ಹಿಂದೆ ಬೇಸಿಗೆ ಶಿಬಿರಕ್ಕೆ ಭಾಗವಹಿಸಲು ಗಾಂಧಿನಗರದ ಕಡೆಗೆ ಹೋಗುತ್ತಿದ್ದಾಗ ಈ ಒಣಮರ ನನ್ನನ್ನು ಸೆಳೆದಿತ್ತು....ಆಗಲೇ ಆ ಹಸಿರು ಬಳ್ಳಿ ಮರದ ಕಡೆ ಪಯಣ ಬೆಳೆಸಿತ್ತು....ಆ ಸಮಯದಲ್ಲಿ ಛಾಯಾಚಿತ್ರ ತೆಗೆಯಲು ಅಷ್ಟೊಂದು ಧೈರ್ಯವಿರಲಿಲ್ಲ...ಆದರೆ ಮೊನ್ನೆ ಅಲ್ಲಿ ಹೋಗುವ ಕೆಲಸವಿದ್ದ ಕಾರಣ ಕ್ಯಾಮರಾ ತೆಗೆದುಕೊಂಡು ಹೋದೆ ಮತ್ತು ನನ್ನ ಗಣಕಯಂತ್ರದಲ್ಲಿ ಬಂಧಿಸಿಬಿಟ್ಟೆ...
ಹುಡುಕು
ಕವನ,
ಕವಿತೆ,
ಛಾಯಾಗ್ರಹಣ,
ಪರೆಶ್ ಸರಾಫ್,
ಫೊಟೋಗ್ರಾಫಿ,
ಭಾವ
11 October, 2012
Life is not a matter of milestones but of moments! ಬದುಕಿನ ಸುಂದರ ಕ್ಷಣಗಳು!
Life is not a matter of milestones but of moments! - ಬದುಕಿನ ಕೆಲವು ಅಮೂಲ್ಯ ಕ್ಷಣಗಳನ್ನು ಸೆರೆ ಹಿಡಿದು ಅದನ್ನು ವರುಷಗಳ ನಂತರವೂ ನೋಡಿ ಮತ್ತೆ ಆ ಕ್ಷಣಗಳಲ್ಲಿ ಜೀವಿಸುವುದು ನನ್ನ ಪ್ರೀತಿಯ ಹವ್ಯಾಸ. ೩ ವರುಷಗಳ ಹಿಂದೆ ಈ ಬುಲ್‍ಬುಲ್ ಹಕ್ಕಿಗಳ ಜೋಡಿ ಸುಮಾರು ದಿನ ನಮ್ಮ ಅಂಗಳದಲ್ಲೇ ಠಿಕಾಣಿ ಹೂಡಿದ್ದವು...ಅವುಗಳ ಸ್ವಲ್ಪ ಸಮಯದ ಒಡನಾಟ ನನ್ನಲ್ಲಿ ಹೊಸ ಚೇತನವನ್ನು ಹುಟ್ಟು ಹಾಕಿತು. ಆವಾಗ ನಮ್ಮ ಕ್ಯಾಮರಾ ಅಷ್ಟೊಂದು ಒಳ್ಳೆಯದಿರಲಿಲ್ಲ..ಹಾಗಾಗಿ ಚಿತ್ರಗಳ ಗುಣಮಟ್ಟ ಅಷ್ಟು ಚೆನ್ನಾಗಿಲ್ಲ. ಪ್ರಕೃತಿಯನ್ನು ಒಂದಿಷ್ಟೆ ಅರಿಯಲು ನೋಡಿದರೂ ಸಾಕು ಜೀವನ ಪ್ರಿತಿ ಉಳಿಯುವುದು, ಮತ್ತಿಷ್ಟು ಉಕ್ಕಿ ಹರಿಯುವುದು! ( ಬೇಸರದ ವಿಷಯವೆಂದರೆ ಮತ್ತೆ ಅವುಗಳು ನಮ್ಮಲ್ಲಿ ತಮ್ಮರಮನೆಯನ್ನು ಕಟ್ಟಲೇ ಇಲ್ಲ. ಅಲ್ಲದೇ, ಬಹುಶಃ ಹೆಣ್ಣು ಬುಲ್‍ಬುಲ್‍ಗೆ ಈ ಗೂಡು ಹಿಡಿಸಲಿಲ್ಲ..ಹಾಗಾಗಿ ಇದರಲ್ಲಿ ಮೊಟ್ಟೆ ಇಡಲೇ ಇಲ್ಲ...ನಾನು ಮನದಲ್ಲೇ ಗಂಡು ಬುಲ್‍ಬುಲ್‍ಗೆ ಅದರ ಆಲಸ್ಯಕ್ಕೆ ಬಹಳಷ್ಟು ಶಾಪ ಹಾಕಿದೆ. ಆ ಗೂಡು ಗಟ್ಟಿಯಿರಲಿಲ್ಲ..ಹಕ್ಕಿಗಳ ದಾಷ್ಟ್ರತನ ನಮ್ಮ ಹೆಣ್ಣು ಮಕ್ಕಳಿಗೂ ಇದ್ದಿದ್ದರೆ ಅಂತ ಅನಿಸಿದ್ದು ಸುಳ್ಳಲ್ಲ!)
05 October, 2012
ಪಾತರಗಿತ್ತಿ!
08 August, 2012
ಹನಿ ಹನಿ ಚಿತ್ತಾರ!
Subscribe to:
Posts (Atom)




