ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

20 September, 2013

ಭಾವಗಳ ದಾಸ ನನ್ನೀ ಆತ್ಮ!

|| ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ

ನ ಚೈನಂ ಕ್ಲೇದಯನ್ತ್ಯಾಪೋ ನ ಶೋಷಯತಿ ಮಾರುತಃ||

ಯಾವ ಮಂತ್ರಾಸ್ತ್ರಗಳಿಂದಲೂ ತುಂಡರಿಸಲಾಗುವುದಿಲ್ಲವಂತೆ,
 ಪ್ರಜ್ವಲಿಸುವ ಅಗ್ನಿಗೂ ಬೂದಿ ಮಾಡಲಸಾಧ್ಯವಂತೆ,
 ಯಾವುದೇ ಜಲಪಾತದಡಿಯಲ್ಲೂ ಒದ್ದೆಯಾಗುವುದಿಲ್ಲವಂತೆ,
 ಬಿರುಗಾಳಿಯೂ ಒಣಗಿಸಲು ಅಶಕ್ತವಂತೆ..

ನಿಜವಿರಬಹುದೋ ಏನೊ!
ಆದರೆ ಅಂತಹ ಆತ್ಮವೂ ಭಾವಗಳ ದಾಸ!

ಹರಿತಾದ ಬರಹವೊಂದೇ ಸಾಕು, ನೂರಾರು ಹೋಳು ಆ ಆತ್ಮ..
ಸಣ್ಣ ಬೆಂಕಿಕಡ್ಡಿಯಂತಹ ಮಾತೇ ಸಾಕು ಬೂದಿ ಮಾತ್ರ ಉಳಿಯುವುದು..
ಭಾವವಿಲ್ಲದ ನೋಟವೇ ಸಾಕು ಆರ್ದ್ರವಾಗಲು..

ಮೌನವೇ ಸಾಕು ಒಣಗಿ ಹೋಗಲು!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...