ನಿನ್ನೀ
ಅಧರದಿ ಸ್ಪರ್ಶಿಸು
ಅಮರವಾಗಲಿ ನನ್ನೀ ಹಾಡು ||
ನೀ ಎನ್ನ ಇನಿಯಳಾಗು
ಅಮರವಾಗಲಿ ನನ್ನೀ
ಒಲವು ||ಸ್ಪರ್ಶಿಸು||
ಒಲವು ಮೂಡಿದಾಗ ನಮ್ಮಲಿ
ಪ್ರಾಯದ
ಸೀಮೆಯಿರದಿರಲಿ
ಜನುಮಗಳ
ಬಂಧನವಿಲದಿರಲಿ
ಮನದಂಗಳದ ವೈಶಾಲ್ಯ ನೋಡು
ನವ ರೀತಿಯಲಿ
ನಡೆದು ನೀನು
ಅಮರ ಮಾಡು ನಮ್ಮೊಲವನು ||
ನನ್ನೀ ಒಂಟಿ
ಮನದಲಿ
ಮುಗಿಲ ಏಕಾಂತದ ನೋವು
ಗೆಜ್ಜೆ
ನಾದವಾಡುತ್ತಲಿ
ನನ್ನೀ ಬಾಳು ಬೆಳಗು
ಉಸಿರ ನೀಡಿ ಹಸುರು ಬೆಳೆಸಿ
ಅಮರಮಾಡು ನನ್ನೀ
ಹಾಡನು ||
ಕಿತ್ತಿದೆ ನನ್ನಿಂದ
ಈ ಜಗವು
ನನಗೆ
ಪ್ರಿಯವಾದನ್ನೆಲ್ಲವನ್ನೂ
ಎಲ್ಲವನ್ನೂ ನನ್ನಿಂದ
ಗೆಲ್ಲಲಾಯಿತು
ಎಲ್ಲೆಲ್ಲೂ ಸೋತನಾದರೂ ನಾನು
ನಿನ್ನೀ ಮನವನ್ನು ನನಗೊಪ್ಪಿಸು
ಅಮರವಾಗಲಿ ನನ್ನೀ
ಗೆಲುವು || ಸ್ಪರ್ಶಿಸು ||
1 comment:
ನನ್ನ ಇಷ್ಟದ ಗಜಲ್ ಅನ್ನು ಅಷ್ಟೇ ಭಾವಪೂರ್ಣವಾಗಿ ಅಭಿವ್ಯಕ್ತಿಗೊಳಿಸಿದ್ದೀರ.
ವಂದನೆಗಳು
ಶ್ರೀಕರ್
Post a Comment