ಒಲವೇ,
ನೀ ಹಾಡಿದರೆ ನನಗಾಗಿ..
ನಾನಾಗುವೆನಲ್ಲ ರಾಗ ತಾಳ ಪಲ್ಲವಿ
ನಾ ಮೆತ್ತಬಲ್ಲೆನಲ್ಲ ರಂಗನು ಪಾತರಗಿತ್ತಿಗೆ
ನಾ ತುಂಬಬಲ್ಲೆನಲ್ಲ ಕಂಪನು ಸಂಪಿಗೆಯಲಿ
ನಾ ನೀಡಬಲ್ಲೆನಲ್ಲ ಬೆಳಕನು ಭಾನುವಿಗೆ
ನಾ ನಿತ್ಯ ಕಳುಹಿಸಬಲ್ಲೆನಲ್ಲ ಚಂದ್ರಿಕೆಯನು ಚಂದಿರನರಮನೆಗೆ
ನೀ ನನಗಾಗಿ ಹಾಡುವೆಯೆಂಬ
ಕಲ್ಪನೆಯಲೇ ಸೃಷಿಕರ್ತನ ಪಟ್ಟವನೇರಿದ
ನನ್ನೀ ಮರುಳಿಗೆ ಹೆದರಿ
ನೀ ಮೂಕನಾದೆಯಾ!
No comments:
Post a Comment