ರಭಸದಿ ತಿರುಗುತಿದೆ
ಬೀಸುಗಲ್ಲು, ಕಬೀರನ ಕಣ್ಣಲ್ಲಿ ನೀರು
ಅಯ್ಯೋ, ದ್ವಂದ್ವ
ಚಕ್ರಗಳೆಯಡೆಯಲಿ ಬದುಕು ನುಚ್ಚುನೂರು!
ದಪ್ಪ ದಪ್ಪ
ಗ್ರಂಥಗಳನು ಅರೆದು ಮಿದುಳಿಗೆ ತಿಕ್ಕಿದರೂ ಆಗಲಿಲ್ಲ ಪಂಡಿತ
ಅರಿತರೆ ಸಾಕಿತ್ತು,
ಒಲವೆಂಬ ಮೂರು ಅಕ್ಷರಗಳ ಮಹಿಮೆ ಕಿಂಚಿತ್!
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?