ಒಲವೇ,
ನಿನಗೊಂದು ಹೆಸರಿಡಬೇಕೆ!
ಭೂತಳದುದ್ದಕ್ಕೂ ಅಲೆಗಳ ಚೆಲ್ಲಿದ ಅನುರಾಗದ ಕಡಲೇ
ಚರಾಚರಗಳ ನಾಡಿ ಮಿಡಿಯುವ ರಸಿಕ ಪ್ರಾಣವಾಯುವೇ
ಹೊನ್ನ
ಬೆಳಕು ಚೆಲ್ಲುತ್ತಾ ಮೈ ಬಿಸಿ ಮಾಡುವ ಅಗ್ನಿಯೇ
ಜಠರ ಭೋಗವನಿಂಗಿಸುತಾ ಕಾಯದಲಿ ತರಂಗವನಬ್ಬಿಸುವ ಕಂಪು ಮಣ್ಣೇ
ಭಾನು ಶಶಿ ಚುಕ್ಕಿಗಳನಾಡಲು ಬಿಟ್ಟು ಭಾವ ಕೆಣಕುವ ಮುಗಿಲೇ
ನನಗ್ಯಾಕೆ ಬೇಕು ಹೆಸರಿಡುವ ಉಸಾಬರಿ..
ನನ್ನೊಳಗೇ ಇರುವೆಯೆಂದ ಮೇಲೆ ನಾನೇ ನೀನಲ್ಲ!
No comments:
Post a Comment