ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

19 September, 2013

ದೂರದ ಸೈಬೇರಿಯದಿಂದ ನಮ್ಮಂಗಳಕ್ಕೆ ವಲಸೆ ಬಂದ ಪುಟ್ಟ ಹಕ್ಕಿ!

ಅವತ್ತು ಮಟಮಟ ಮಧ್ಯಾಹ್ನ.. ಕಣ್ಮುಚ್ಚಿಕೊಂಡು ಕಿಟಿಕಿಯ ಪಕ್ಕದಲ್ಲಿದ್ದ 

ಮಾವಿನಮರದಲ್ಲಿ ಕುಹೂ ಕುಹೂ.. ನಾದಕ್ಕೆ ತಲೆತೂಗುತ್ತಿದ್ದೆ, ಇದ್ದಕ್ಕಿದ್ದಂತೆ 

ಮತ್ತೊಂದು ನಾದ.. ಚಿಲಿಪಿಲಿ ಕೇಳಿಸಿತು. ಓಡಿದೆ ನನ್ನ ಮೂರನೆ ಕಣ್ಣು 

ಹಿಡ್ಕೊಂಡು. ವಸಂತಕಾಲವದು! ಅಪ್ಪೆಮಿಡಿ ಮಾವಿನ ಸಣ್ಣ ಸಣ್ಣ ಗೊಂಚಲು

 ನೇತಾಡುತ್ತಿದ್ದವು! ಎತ್ತರದಲ್ಲಿ ಈ ತನಕ ಕಾಣದ ಅತಿಥಿಗಳು ಚಿಲಿಪಿಲಿಗುಟ್ಟುತ್ತಾ 

ಗೆಲ್ಲಿನಿಂದ ಗೆಲ್ಲಿಗೆ ಸುತ್ತುತ್ತಿದ್ದವು. ಅಂತೂ ಕ್ಲಿಕ್ಕಿಸಿದ ಹತ್ತಹದನೈದು ಫೊಟೊಗಳಲ್ಲಿ

 ಎರಡೋ ಮೂರರಲ್ಲಿ ಮಾತ್ರ ಕಾಣಿಸಿಕೊಂಡಿವೆ. ಮತ್ತೆ ಗೂಗಲ್ ಮಾಡಿ ಮಾಡಿ

 ಸೋತು ಹೋದೆ. ಕೊನೆಗೂ ಡಾ|| ಕೃಷ್ಣ ಮೋಹನರ ಜಾಲತಾಣದಲ್ಲೂ 

ಕಾಣಿಸಿಕೊಂಡ ಮಾಹಿತಿಯಿಂದ ಈ ಹಕ್ಕಿಯ ಬಗ್ಗೆ ಮತ್ತಷ್ಟು ತಿಳಿದುಕೊಂಡೆ.


 ಇನ್ನು ಮುಂದಿನ ವಸಂತ ಮಾಸದಲ್ಲೂ ಕಾಣಿಸುವವೆಂಬ ನಿರೀಕ್ಷೆ!

ಇವತ್ತು ಮತ್ತೆ ಕಾಡಿತು ನೆನಪು ಈ ಪುಟ್ಟ ಸುಂದರಿಯ!

ದೂರದ ಸೈಬೇರಿಯದಿಂದ ನನ್ನ ಕೋಗಿಲೆಯ ಜತೆ ನಮ್ಮೂರಿನ ವಸಂತಮಾಸ


 ಸವಿಯಲು ಬಂದ ಸುಂದರಿ!



Asian Brown Flycatcher!




No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...