ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
ಮೊಗ್ಗು ಅಂದಿದ್ದು ಸ್ವಗತದಲ್ಲಿ.. ಮೂರನೆಯ ಕಣ್ಣು ಸೆರೆ ಹಿಡಿಯಿತು ಅದರ ಮಾತನ್ನು!
ನಾಳಿನ
ಮುಂಜಾವಿಗಾಗಿ ಕಾಯುವಿಕೆ...
ಅರಳಿ ಬೆಳಗಲು
ಮತ್ತೆ
ಮುಸ್ಸಂಜೆ ಅಳಿದು...
ಮರುಹುಟ್ಟು ಪಡೆಯಲು!
No comments:
Post a Comment