ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

12 September, 2013

ಒಂದು ಫೋನು.. ತಂದ ಅನುಭೂತಿ!“ಅಂಟಿ, ನೀವು ಲಕ್ಕಿ.. ನಿಮ್ಮ ಮಗ ನಿಜವಾಗಿ ಒಂದು ಜೆಮ್! ಅವನು ಒಂದು ದಿನ ಇಲ್ಲದಿದ್ದರೂ ನಮಗಿಲ್ಲಿ ಬೀಕೋ ಅನಿಸುತ್ತೆ.. “

ಒಂದು ಕ್ಷಣ ಯಾರು ಮಾತನಾಡುವುದು, ಏನು ಹೇಳ್ತಾಳೆ ಇವಳು ಅಂತ ಅರ್ಥ ಆಗಲಿಲ್ಲ.
.
Aunty, me Jeeva! Prajwal’s colleague!”
ಜೀವ ಹೇಳಿದಾಗ ನನ್ನ ಕಣ್ಣಲ್ಲಿ ಆನಂದಭಾಷ್ಪ!

ಮಗ ಸನ್ನೆ ಮಾಡಿ ಹೇಳ್ತಿದ್ದಾನೆ.. ಅವಳು ನನ್ನ ಜತೆ ಕೆಲಸ ಮಾಡುವ ಹುಡುಗಿ!

ಜೀವ ಮುಂದುವರಿಸಿದಳು,

“ಆಂಟಿ, ನಾವೆಲ್ಲ ನಮ್ಮ ಜತೆಗಿರುವ ಹುಡುಗರನೆಲ್ಲರನ್ನೂ bro.. ಅಂತಾನೇ ಸಂಬೋಧಿಸ್ತೀವಿ.. ಹೆಚ್ಚಿನವರಿಗೆಲ್ಲ ಅದು ಹಿಡಿಸೊಲ್ಲ.. ನಮಗೆಲ್ಲ ಗೊತಾಗುತ್ತೆ.. ಆದರೆ ನಿಮ್ಮ ಪ್ರಜ್ವಲ್ ಮಾತ್ರ ಹಾಗಲ್ಲ... ಕರೆದ ಹಾಗೆ ನಮ್ಮ ಸಹೋದರನಂತೇ ಇದ್ದಾನೆ.. ಅವನಿಲ್ಲದಿದ್ದರೆ ನಮಗೆ ಯಾವ picnicನೂ ಒಳ್ಳೆದಾಗೊಲ್ಲ! ನಾವೆಲ್ಲ ಅವನಿಗೆ ತುಂಬು ಹೃದಯದಿಂದ ರಾಖಿ ಕಟ್ಟಿದ್ದೀವಿ. ನಮ್ಮ ಮನೆಯವರು ಇದೀಗ ನಿಶ್ಚಿಂತರು. ನಾವಿಲ್ಲಿ ಅಪರಿಚತರು.. ತುಂಬಾ ಹೆದರಿಕೆ ಇತ್ತು.. ಮನೆಯವರಿಗೂ ನಮ್ಮ ಬಗ್ಗೆ ಚಿಂತೆಯಾಗ್ತಿತ್ತು.. ಆದರೆ ಈಗೇನೂ ಇಲ್ಲ. ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳನ್ನು ಪ್ರಜ್ವಲ್ ನಮಗೆಲ್ಲ ತೋರಿಸಿದ್ದಾನೆ. ನಮ್ಮ ಕಣ್ಮಣಿ ಅವನೀಗ.. ಆಂಟೀ.. ನಿಮ್ಮ ಮಗ great!"

"He is such a gem.. We find it difficult to stay here without him even for two days.. He is witty.. he is humorous, at the same time he takes care of us! He is a good artist too… ! Oh! My! My! You are very lucky aunty!”

Jeeva, You know you made my day! Of course, I know he is a very good person.. who would know him better than me. ಹೌದು, ನನ್ನ ಮಗ ಒಂದು ಅನಘ್ರ್ಯ ರತ್ನ.. ನನಗೊತ್ತು! ಆದರೆ ಅದನ್ನು ನಿನ್ನ ಬಾಯಿಯಿಂದ ಕೇಳಿದಾಗ ನಾನು ಅನುಭವಿಸಿದ ಧನ್ಯತೆ, ಅನುಭೂತಿ ಅನನ್ಯ! ನಾನು ಇಪ್ಪತ್ತು ವರ್ಷದಿಂದ ಪಟ್ಟ ಶ್ರಮವೆಲ್ಲಾ ಸಾರ್ಥಕವಾಯಿತು! ಬದುಕಿನಲ್ಲಿ ಇದಕ್ಕಿಂತ ದೊಡ್ಡ ಉಡುಗೊರೆ ಮತ್ಯಾವುದಿದೆ ಹೇಳು ಅಮ್ಮನಿಗೆ!”

ಎರಡು ತಿಂಗಳ ನಂತರ ಮನೆಗೆ ಬಂದ ಮಗನ ಜತೆ ಕುಶಲೋಪರಿ ಮಾತುಕತೆ ನಡೆಯುತ್ತಿದ್ದಾಗ ಜೀವಳ ಫೋನು ಬಂದು ಈ ಬರವಣಿಗೆಗೆ ಕಾರಣವಾಯಿತು!No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...