ತರಲಿದೆಯೆ ನಿನ್ನದೊಂದು ಓಲೆ..
-------------------------
ಅಂದು ನನ್ನೊಳಗೆ ಅವಿತಿದ್ದ ನೀನು
ಇಂದೆಲ್ಲಿ ಮಾಯವಾದೆ ಒಲವೇ?
ಹುಡುಕಾಟದ ಗತಿ ಆಮೆಯಂತಾದರೊಮ್ಮೆ
ಚಿರತೆಯ ಧಾವಂತ ಮತ್ತೊಮ್ಮೆ
ಹೆಪ್ಪುಗಟ್ಟಿದ ಕಣ್ಣು ಕಾದಿದೆ
ಆಗಲೋ ಈಗಲೋ ಹನಿಯಲು..
ಅರಸುವ ಬಂಧನವೇ ಇಲ್ಲದೆ
ಕಾಯಕೋ ತಣ್ಣಗಿನ ಭಾವ..
ನನಗೇ ಗೊಂದಲ, ಏನಿದು ಸೋಜಿಗ
ಏನೀ ವಿಶ್ವಾಸ ನನ್ನೀ ಆತ್ಮಕ್ಕೀಗ
ಹುಡುಕುತಿದೆ ನನ್ನೊಳಂತರ್ಗತ
ನನ್ನೊಲವಿನ ಒಲುಮೆಗಾಗಿ
ಆತ್ಮ ಕಾಯಗಳ ಭಿನ್ನತೆ
ಎಲ್ಲಿ ಕುಂಟಿ, ಕುರುಡಿಯಾಗುವೆನೆ
ಇಲ್ಲವಲ್ಲ, ಯಾವ ಅಂಜಿಕೆಯೂ
ಅಂಬೆಗಾಲಲ್ಲೂ ಸಾಗಬಲ್ಲೆ
ಕತ್ತಲಲ್ಲೂ ಕಾಣಬಲ್ಲೆ
ಅನುರಾಗದ ಸುಗಂಧದಲೊಡ್ಡಿದ
ಮಾತು, ಮೌನ ಎಲ್ಲವನೂ
ನಿನಗರ್ಪಿಸಿ ನನ್ನೊಲವೇ
ಕಾದಿರುವೆನು ನಿನ್ನದೊಂದು ನೋಟಕಾಗಿ
ಆಸೆಯಿಂದ ಕಾದಿರುವೆ..
ಪ್ರಾಣ ವಾಯು ಒಯ್ಯುತಿದೆ
ನಿನ್ನೆಡೆ ನನ್ನೆದೆಯ ಸಂದೇಶ
ತರಲಿದೆಯೆ ನಿನ್ನದೊಂದು ಓಲೆ..
-------------------------
ಅಂದು ನನ್ನೊಳಗೆ ಅವಿತಿದ್ದ ನೀನು
ಇಂದೆಲ್ಲಿ ಮಾಯವಾದೆ ಒಲವೇ?
ಹುಡುಕಾಟದ ಗತಿ ಆಮೆಯಂತಾದರೊಮ್ಮೆ
ಚಿರತೆಯ ಧಾವಂತ ಮತ್ತೊಮ್ಮೆ
ಹೆಪ್ಪುಗಟ್ಟಿದ ಕಣ್ಣು ಕಾದಿದೆ
ಆಗಲೋ ಈಗಲೋ ಹನಿಯಲು..
ಅರಸುವ ಬಂಧನವೇ ಇಲ್ಲದೆ
ಕಾಯಕೋ ತಣ್ಣಗಿನ ಭಾವ..
ನನಗೇ ಗೊಂದಲ, ಏನಿದು ಸೋಜಿಗ
ಏನೀ ವಿಶ್ವಾಸ ನನ್ನೀ ಆತ್ಮಕ್ಕೀಗ
ಹುಡುಕುತಿದೆ ನನ್ನೊಳಂತರ್ಗತ
ನನ್ನೊಲವಿನ ಒಲುಮೆಗಾಗಿ
ಆತ್ಮ ಕಾಯಗಳ ಭಿನ್ನತೆ
ಎಲ್ಲಿ ಕುಂಟಿ, ಕುರುಡಿಯಾಗುವೆನೆ
ಇಲ್ಲವಲ್ಲ, ಯಾವ ಅಂಜಿಕೆಯೂ
ಅಂಬೆಗಾಲಲ್ಲೂ ಸಾಗಬಲ್ಲೆ
ಕತ್ತಲಲ್ಲೂ ಕಾಣಬಲ್ಲೆ
ಅನುರಾಗದ ಸುಗಂಧದಲೊಡ್ಡಿದ
ಮಾತು, ಮೌನ ಎಲ್ಲವನೂ
ನಿನಗರ್ಪಿಸಿ ನನ್ನೊಲವೇ
ಕಾದಿರುವೆನು ನಿನ್ನದೊಂದು ನೋಟಕಾಗಿ
ಆಸೆಯಿಂದ ಕಾದಿರುವೆ..
ಪ್ರಾಣ ವಾಯು ಒಯ್ಯುತಿದೆ
ನಿನ್ನೆಡೆ ನನ್ನೆದೆಯ ಸಂದೇಶ
ತರಲಿದೆಯೆ ನಿನ್ನದೊಂದು ಓಲೆ..
No comments:
Post a Comment