ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
Showing posts with label ಚಿತ್ರ ವಿಚಿತ್ರ. Show all posts
Showing posts with label ಚಿತ್ರ ವಿಚಿತ್ರ. Show all posts
03 January, 2013
ಕೊರೆತ!
ಹೀಗೆ ಒಂದು ಆಲೋಚನೆ..
______________________
ಸಂಸ್ಕೃತಿ ಎಂದರೇನು! ಮಾನವನು ಭೂಮಿಯಲ್ಲಿ ಕಾಣಿಸಿಕೊಂಡಾಗ ಅವನ್ಯಾವ ಸಂಸ್ಕೃತಿಯನ್ನು ಪಾಲಿಸುತ್ತಿದ್ದನಪ್ಪಾ! ಕ್ರಮೇಣ ಹಿಂದು, ಮುಸ್ಲಿಮಾನ್, ಕ್ರೈಸ್ತ, ಪಾಶ್ಚಿಮಾತ್ಯ, ಪೌರಾತ್ಯ... ಹೀಗೆ ಅನೇಕ ಸಂಸ್ಕೃತಿಗಳು ಹುಟ್ಟಿಕೊಂಡವು. ಎಲ್ಲವೂ ಇಂದಿಗೂ ತಮ್ಮದೇ ಶ್ರೇಷ್ಟ ಸಂಸ್ಕೃತಿ ಎಂದೇ ನಂಬಿಕೊಂಡಿವೆಯಷ್ಟೇ. ಆದರೆ ನಿಧಾನವಾಗಿ ಎಲ್ಲಾ ಸಂಸ್ಕೃತಿಗಳು ಬೆರಕೆಗೊಂಡವು... ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ತಮಗೆ ಬೇಕಾದುದನ್ನು ಅಳವಡಿಸಿಕೊಂಡರು... ಅಲ್ಲಲ್ಲಿ ಕ್ಷೀಣವಾಗಿ ಸಂಸ್ಕೃತಿ ಹಾಳಾಗುತ್ತಿದೆ ಗೊಣಗಾಟ ಕೇಳಿಬರುತ್ತಿದ್ದಂತೆಯೇ ಜಾಗತೀಕರಣದಿಂದಾಗಿ ಇಂದಿನ ಯುವಜನಾಂಗ ತಮ್ಮದೇ ಆದ ಹೊಸ ಸಂಸ್ಕೃತಿಯನ್ನು ಹುಟ್ಟು ಹಾಕಿತು.. ಮತ್ತು ಆಚೆಯೂ ಈಚೆಯೂ ಸಲ್ಲದ ನಮ್ಮಂಥವರು ಡೋಲಾಮಾನದ ಮನಸ್ಸಿನಿಂದ ನಮ್ಮ ಮಕ್ಕಳ ಜೊತೆಗೆ ನಿಲ್ಲಬೇಕಾದ ಪರಿಸ್ಥಿಯು ಕಾಣಿಸಿದೆ.
ನಮ್ಮ ಮಕ್ಕಳು ತಪ್ಪು ದಾರಿಯಲ್ಲಿ ನಡೆದರೆ ನಾವು ಖಂಡಿತ ಅವರನ್ನು ತಾಳ್ಮೆಯಿಂದ ತಿದ್ದಿತರಬೇಕು, ಇದು ಪ್ರತಿಯೊಂದು ಹೆತ್ತವರ ಕರ್ತವ್ಯವೂ ಹೌದು.. ಹಾಗಂತ ನಮ್ಮ ಸಂಸ್ಕೃತಿಯಲ್ಲಿ ಹೇಳಿದಂತೆ ನೀನು ಕಾಸಿನಗಲ ಕುಂಕುಮ, ಕೈತುಂಬ ಬಳೆ, ಸದಾ ಮೈಮುಚ್ಚುವಂತೆ ಸೀರೆಯುಡಬೇಕು ಎಂದು ಆಶಿಸುವುದು ಎಷ್ಟು ಸರಿ... ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಅನ್ವಯಿಸುವುದೇ ಹಿಂದು ಸಂಸ್ಕೃತಿ... ಮತ್ತೆ ತಮಗೆ... ತಾವೆಲ್ಲ ಜುಬ್ಬ, ದೋತಿ ಹಾಕಿ ಆಫೀಸಿಗೆ ಹೋಗುವಿರಾ! ಪಾಶ್ಚಿಮಾತ್ಯರ ದೇಣಿಗೆ ಈ ಸೆಲ್ ಫೋನು, ವಾಶಿಂಗ್ ಮೆಶಿನ್, ಗಣಕ ಯಂತ್ರ.. ಅವನೆಲ್ಲಾ ತಾವು ಯಾಕೆ ಉಪಯೋಗಿಸುವಿರಾ ನಮ್ಮ ಸಂಸ್ಕೃತಿ ರಕ್ಷಕರೇ?
ಜೀನ್ಸ್ ಪ್ಯಾಂಟಿಗೆ ಕುಂಕುಮ ಹೂವು ಹೊಂದುವುದಿಲ್ಲ... ಇನ್ನು ಜೀನ್ಸ್ ಪ್ಯಾಂಟ್ ಹಾಕಬೇಡಿ ಅನ್ನಬೇಡಿ ಮಾರಾಯರೆ. ಕೈಗೆಟುಕುವ ದರದಲ್ಲಿ ಸಿಗುವಿಕೆ, ಆರಾಮದಾಯಕತನ ಎರಡೂ ಅದನ್ನು ಬರೇ ಯುವ ಜಾನಾಂಗದಲ್ಲಿ ಮಾತ್ರವಲ್ಲ ನನ್ನಂಥಹ ಮಧ್ಯ ವಯಸ್ಕರೂ ಇಷ್ಟಪಡುವಂತಾಗಿದೆ. ಅಸಭ್ಯವಲ್ಲದಾದುದರಿಂದ ಅದ್ಯಾಕಪ್ಪಾ ಅದನ್ನೂ ಹಾಕಲು ಅಡ್ಡಿಮಾಡುವಿರಿ ರಾಯರೆ?
ಕೊನೆಯದಾಗಿ ತಾವು ಬೇರೆಯವರಿಗಿಂತ ಭಿನ್ನರೆಂದು ತೋರುವ ಯತ್ನದಲ್ಲಿ ತಾವು ಪರರ ಖುಷಿಯನ್ನು ಕಿತ್ತುಕೊಳ್ಳಲು ಹೋಗುವಿರಲ್ಲಾ! ಇದಕ್ಕೆ ಹಿಂದು ಸಂಸ್ಕೃತಿಯಲ್ಲಿ ಮನ್ನಣೆ ಕೊಡಲಾಗಿದೆಯೇ? ಒಟ್ಟಾರೆ ಈ ಸಂಸ್ಕೃತಿ ಅನ್ನೋದು "ಮಂಗನ ಕೈಯಲ್ಲಿ ಮಾಣಿಕ್ಯ"ವೆಂಬ ಮಾತನ್ನು ನನಗೆ ನೆನಪಿಸಿದೆ!
********************************
ಹಿಂದು, ಮುಸ್ಲಿಮ್, ಕ್ರೈಸ್ತ- ಇವುಗಳನ್ನು ಧರ್ಮಗಳೆಂದು ಎಂದು ಗುರುತಿಸುತ್ತಾರೆ... ಮತ್ತು ಅವು ತಮ್ಮದೇ ಆದ ಸಂಸ್ಕೃತಿಯನ್ನು ಹೊಂದಿವೆ .( ಇಲ್ಲಿ ಸಂಸ್ಕೃತಿಯನ್ನು ಸಹ ತಿರುಚಲಾಗಿದೆ. ಅದನ್ನು ಆಚರಣೆ ಅಥವಾ ಸಂಪ್ರದಾಯ ಅಂತ ಗುರುತಿಸುವುದು ಒಳ್ಳೆಯದು ಅಂತ ನನ್ನ ಅಭಿಪ್ರಾಯ.) ಅಂದರೆ ನಮ್ಮಲ್ಲಿ ಸಾಮಾನ್ಯವಾಗಿ ಹೇಳುವ ಹಾಗೆ ಹಿಂದೂ ಸಂಸ್ಕೃತಿ... ಅದಕ್ಕಾಗಿ ನಾನು ಅಲ್ಲಿ ಧರ್ಮ ಶಬ್ದವನ್ನು ಉಪಯೋಗಿಸಿರಲಿಲ್ಲ. ಅಲ್ಲದೆ ನನ್ನ ಮಟ್ಟಿಗೆ ಧರ್ಮವೆಂದರೆ ಇರುವುದೊಂದೇ; ಅದುವೇ ಮಾನವ ಧರ್ಮ. ಜಾತಿ- ಮನುಷ್ಯ ಜಾತಿ.. ಅದರಲ್ಲೂ ಎರಡೆ- ಗಂಡು, ಹೆಣ್ಣು. ಮತ್ತು ಪ್ರಾಣಿ ಸಂಕುಲವೊಂದು ಜಾತಿ.
ಸಂಸ್ಕೃತಿಯೆಂದರೆ ನಮ್ಮ ನಡತೆ- ನಾವು ಹೇಗೆ ಸಮಾಜದಲ್ಲಿ ಬೆರೆತು, ಎಲ್ಲರನ್ನೂ ಸಮಾನ ಮನಸ್ಸಿನಿಂದ ಗೌರವಿಸಬೇಕಾಗಿರುವುದು. ಹಿರಿಯರ ಮೇಲೆ ಭಕ್ತಿ, ಮಕ್ಕಳ ಮೇಲೆ, ಸಮವಯಸ್ಕರ ಮೇಲೆ ಪ್ರೀತಿ, ಗಂಡು ಹೆಣ್ಣು ಬೇಧ ಭಾವ ತೋರದೆ ಸಮಗೌರವ ಕೊಡುವುದು, ಜಾತಿ, ಅಂತಸ್ತುಗಳನ್ನು ಎಣಿಸದೆ ಬಂದ ಅತಿಥಿಗಳನ್ನು ಒಂದೇ ರೀತಿಯಲ್ಲಿ ಸತ್ಕರಿಸುವುದು, ಅಸಹಾಯಕರಿಗೆ ಸಹಾಯ ಹಸ್ತ ನೀಡುವುದು ಮೊದಲಾವುಗಳು- ಇವುಗಳನ್ನೇ ಉತ್ತಮ ಸಂಸ್ಕೃತಿಯೆಂದು ಗುರುತಿಸಬಹುದೆಂದು ನನ್ನ ಅಭಿಪ್ರಾಯ.
ಕೆಲವು ವರ್ಷಗಳ ಹಿಂದೆ ನನಗೂ ನನ್ನ ಮಗಳಿಗೂ ಈ ಹಣೆಗೆ ಬಿಂದಿ ಇಡುವ ವಿಷಯದಲ್ಲಿ ಚರ್ಚೆ ನಡೆದಿತ್ತು. ಆಗ ನಾನು ಸಹ ಇದನ್ನು ನಮ್ಮ ಸಂಸ್ಕೃತಿ ಪಾಲಿಸಬೇಕಾದದ್ದು ನಮ್ಮ ಧರ್ಮವೆಂದು ಅವಳ ಬಳಿ ವಾದ ಮಾಡಿದ್ದೆ. ಆದರೆ... ನಿಧಾನವಾಗಿ ನನಗೆ ಹೊಳೆದಿತ್ತು... ಅವೇ ನಾನು ಈ ಮೇಲೆ ಬರೆದ ಮಾತುಗಳು. ಹಣೆಯಲ್ಲಿರುವ ಚಕ್ರವನ್ನು ಉತ್ತೇಜಿಸಲು ಕುಂಕುಮವಿಡುವ ಅಭ್ಯಾಸವನ್ನು ನಮ್ಮ ಪೂರ್ವಜರು ಮಾಡಿರಬಹುದು. ಬಹುಶಃ ಸ್ತ್ರೀಯರು ಪುರುಷರೂ ನಿಯಮ ಬದ್ಧವಾಗಿ ಮಾಡಲ್ಪಟ್ಟ ಕುಂಕುಮವನ್ನು ಇಡುತ್ತಿದ್ದರು ಎಂದು ಕಾಣುತ್ತದೆ. ಕಾಲ ಕ್ರಮೇಣ ಸ್ತ್ರೀಯರು ಇದನ್ನು ಸೌಂದರ್ಯ ವರ್ಧಕವಾಗಿ ಇಡುತ್ತಿರಬಹುದು.. ಹೀಗೆ ಅದೊಂದು ನಿಯಮವೇ ಆಗಿಬಿಟ್ಟಿದೆ. ಆದರೆ ಇಂದಿನ ಹುಡುಗಿಯರಿಗೆ ಇದರ ಅಗತ್ಯ ಕಾಣುವುದಿಲ್ಲ...
****************************************
ಇದರ ಜತೆ ಈ ಹೊಸ ವರ್ಷಾಚರಣೆ ಬಗ್ಗೆಯೂ ಅಲ್ಲಲ್ಲಿ ಅಪಸ್ವರದ ಹೇಳಿಕೆ ಓದಿ ಬೇಸರವಾಯಿತು.. ತಮಗೆ ಬೇಡವಾದರೆ ಆಚರಿಸಬೇಡಿ.. ಪರರ ಸಂತೋಷಕ್ಕೆ ಅಡ್ಡಗಾಲು ಹಾಕಬೇಡಿಯಪ್ಪಾ. ನಾನೆಂದೂ ಹೊಸವರ್ಷ ಅಂತ ಯಾವಾಗಲೂ ಸಂಭ್ರಮದಿಂದ ಆಚರಿಸಿದಿಲ್ಲ.. ನನ್ನ ಮಟ್ಟಿಗೆ ಯುಗಾದಿಯೇ ಹೊಸ ವರ್ಷ.. ಆದರೆ ಈ ವರ್ಷ ನನ್ನ ಎಫ್ ಬಿ ಮಿತ್ರರ ಸಂಭ್ರಮದಲ್ಲಿ ನಾನೂ ಸಂತೋಷದಿಂದ ಭಾಗಿಯಾದೆ... ಇಲ್ಲಿ ನನ್ನ ವಿದ್ಯಾರ್ಥಿಗಳ ಜತೆಯಲ್ಲೂ ಸಂಭ್ರಮದಿಂದ ೨೦೧೩ನ್ನು ಬರಮಾಡಿಕೊಂಡೆ!
*****************************
ದೆಹಲಿಯಲ್ಲಿ ನಡೆದ ಪೈಶಾಚಿಕ ಕೃತ್ಯವನ್ನು ಪ್ರತಿಭಟಿಸಿ ಎಫ್ ಬಿಯಲ್ಲಿ ಮಾನವೀಯತೆಯ ನೆಲೆಯಲ್ಲಿ ಅನೇಕ ಮಿತ್ರರು ಕಪ್ಪು ಬಿಂದುವನ್ನು ತಮ್ಮ ಚಿತ್ರವನ್ನಾಗಿ ಮಾಡಿಕೊಂಡಿದ್ದರು... ಕ್ರಮೇಣ ಅದನ್ನು ಬದಲಾಯಿಸಿದರು.. ಯಾವುದೇ ವಿಷಯವನ್ನು ನಾವು ವಿಪರೀತವಾಗಿ ಮನಸ್ಸಿಗೆ ಹಚ್ಚಿಕೊಂಡರೆ ಅದು ನಮ್ಮ ಮನಸ್ಸಿಗೆ ವಿಷವಾಗುವುದು ಎಂದೇ ನನ್ನ ನಂಬಿಕೆ. ಹೌದು ಪ್ರತಿಭಟಿಸುತ್ತಲೇ ಇರಬೇಕು. ಹಾಗಂತ ನಮ್ಮ ದೈನಂದಿನ ಜೀವನವನ್ನೂ ನಡೆಸಬೇಕು ತಾನೆ. ಇವತ್ತು ನನ್ನ ಮಿತ್ರರೊಬ್ಬರ ಸ್ಟೇಟಸ್ಸಿಗೆ ಅವರ ಮಿತ್ರರೊಬ್ಬರು ಈ ಬಗ್ಗೆ ವ್ಯಂಗವಾಗಿ ಬರೆದಿದ್ದರು. ಖಂಡಿತವಾಗಿ ಆ ದುರ್ಘಟನೆ ಅಷ್ಟು ಬೇಗ ನಮ್ಮ ಮನಸ್ಸಿನಿಂದ ಅಳಸಿ ಹೋಗುವುದಿಲ್ಲ.. ಹೋಗಲೂಬಾರದು; ಹಾಗಂತ ನಾವು ನಿತ್ಯವೂ ಅಳುತ್ತಲೇ, ಬೊಬ್ಬೆಹಾಕುತ್ತಲೇ ಇರಲಾಗದಷ್ಟೇ.. ನಮ್ಮದೇ ರೀತಿಯಲ್ಲಿ ನಮ್ಮಿಂದಾದಷ್ಟು ಸಹಾಯ ಹಸ್ತವನ್ನು ನೀಡುವೆವು. ಏನನ್ನುವಿರಾ ಸಹಮನಸ್ಕರೆ?
05 August, 2012
ಅಪರೂಪದ ಚಿತ್ರ!!!
ನನ್ನ ಮಟ್ಟಿಗೆ ಇದು ಬಹಳ ಅಪರೂಪದ ಚಿತ್ರ. ಬಹುಶಃ ಛಾಯಾಚಿತ್ರಗ್ರಹಣಕಾರರು ಇಂತಹ ಚಿತ್ರ ಪಡೆಯಲು ಕಾಡು-ಮೇಡು ಸುತ್ತುತ್ತಾರೆ. ಪ್ರತೀದಿನ ಬಣ್ಣ ಬಣ್ಣದ ಚಿಟ್ಟೆಗಳು ನಮ್ಮ ತೋಟದ ವಿಹಾರಕ್ಕಾಗಿ ಬರುವುದಾದರೂ ಒಮ್ಮೆಯಾದರೂ ಅವುಗಳನ್ನು ಕ್ಲಿಕ್ಕಿಸಲಾಗಲಿಲ್ಲ. ಮೊನ್ನೆ ಶುಕ್ರವಾರ ಸುಮಾರು ಏಳು ಗಂಟೆಗೆ ಅಮ್ಮನಿಗೆ ಹಾಲು ಕೊಡಲು ಹೊರಟವಳಿಗೆ ಧ್ಯಾನ ಮಾಡುತ್ತಿರುವ ಚಿಟ್ಟೆಯ ದರ್ಶನವಾಯಿತು. ಅರೇ ಇದೇನಿದು, ಸುಮ್ಮನೆ ರೆಕ್ಕೆ ಮಡಚಿ ಕುಳಿತಿದೆ ಅಂತ ಆಶ್ಚರ್ಯವಾಯಿತು...ಕೂಡಲೇ ಕ್ಯಾಮರ ತಂದು ಫೋಟೊ ತೆಗೆದೆ. ಮನೆಪಾಠಕ್ಕೆ ಮಕ್ಕಳು ಬಂದಿದ್ದಾರೆ...ಮತ್ತೆ ಗಣಕಯಂತ್ರದಲ್ಲಿ ಹಾಕಿದರಾಯಿತು ಅಂತ ಅಂದುಕೊಂಡು ನನ್ನ ಡ್ಯೂಟಿಯಲ್ಲಿ ಮುಳುಗಿದೆ.... ಆ ವಿಷಯ ಮರೆತೇ ಹೋಗಿತ್ತು. ನನ್ನ ಕೆಲಸವೆಲ್ಲ ಮುಗಿದಾಗ ಅಪರಾಹ್ನ ೧.೪೫..ನೆನಪಾಯಿತು..ನೋಡಿದರೆ ಆಶ್ಚರ್ಯ..ಆ ಚಿಟ್ಟೆಯ ಜೊತೆ ಅದರ ಕೋಶವೂ ಚಿತ್ರದಲ್ಲಿ ಕಾಣುತ್ತಿದೆ...ಅರೇ ಅದು ಅದೇ ತಾನೆ ಕೋಶದಿಂದ ಹೊರಬಂದ ಚಿಟ್ಟೆ..ಹಾಗಾಗಿ ಹಾರದೆ ಅಲ್ಲಿ ಒಂದಿಷ್ಟು ಧ್ಯಾನ ಮಾಡುವವರಂತೆ ಕುಳಿತಿತ್ತು. ನನ್ನ ಅದೃಷ್ಟವನ್ನು ನೋಡಿ ನನ್ನ ಖುಷಿಗೆ ಪಾರೇ ಇಲ್ಲ. ಅಷ್ಟೆಲ್ಲ ಆದ ಮೇಲೆ ಅದನ್ನು ಬ್ಲಾಗನಲ್ಲಿ ಬರೆಯಲಾಗದೇ ಇದ್ದರೆ ಆದಿತೇ!!!
ಹುಡುಕು
ಚಿಟ್ಟೆ,
ಚಿತ್ರ ವಿಚಿತ್ರ,
ಛಾಯಾಗ್ರಹಣ,
ಪ್ರಕೃತಿ,
ಫೊಟೋಗ್ರಾಫಿ
21 February, 2012
ನನ್ನ ಬಗ್ಗೆ ವಿಶೇಷ ಬರಹ- ಡೆಕ್ಕನ್ ಹೆರಾಲ್ಡನಲ್ಲಿ! - ಇದು ಕನಸೋ ನನಸೋ?
ಗಾಂಧಿ ಪಾರ್ಕಿನಲ್ಲಿ ಆ ಪತ್ರಕರ್ತೆ ನನ್ನ ಮನೆಗೆ ಬರುತ್ತಾಳೆಂದು ಹೇಳಿದಳೇನೋ ಹೌದು...ಆದರೆ ನಾನು ಖಂಡಿತ ಬರುವಳೆಂದು ಅಂದುಕೊಂಡಿರಲಿಲ್ಲ..ಆದರೆ ಈ ವರ್ಣ ವನಿತಾ ನಡೆದ ಎರಡೇ ದಿನದ ನಂತರ ನನಗೊಂದು ಕಾಲ್ ಬಂತು...ಅಪರಿಚತ ಅಂಕೆ! ಸರಿ ಎತ್ತಿದ ಕೋಡಲೇ " ನಾನು ಡೆಕ್ಕನ್ ಹೆರಾಲ್ಡ್ನಿಂದ ಅಕ್ಷತಾ, ಮಧ್ಯಾಹ್ನ ೨.೩೦ ಹತ್ತಿರ ಮನೆಗೆ ಬರಬಹುದೇ" ಎಂದಾಗ ನನ್ನ ಕಿವಿಯನ್ನೇ ನಂಬಿರಲಿಲ್ಲ...ಸುಧಾರಿಸಿಕೊಂಡು ನನಗೆ ಅಷ್ಟು ಹೊತ್ತಿಗೆ ನನ್ನ ತರಗತಿ ಪ್ರಾರಂಭವಾಗುವುದರಿಂದ ಸಾಧ್ಯವಾಗುವುದಿಲ್ಲವೆಂದಾಗ. ೧೧.೩೦ಹೊತ್ತಿಗೆ ಬರಬಹುದೇ ಎಂದಳು. ( ನನಗೆಕೋ ಆಕೆಯನ್ನು ಏಕವಚನದಲ್ಲೇ ಸಂಬೋಧಿಸುವಷ್ಟು ಮನಸ್ಸಿಗೆ ಹಿಡಿಸಿದಳು. ಈಕೆ ಮಾತ್ರವಲ್ಲದೆ ಆ ಪಾರ್ಕಿನಲ್ಲಿ ನಮ್ಮ ಛಾಯಾ ಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದ ಇನ್ನೊಂದು ಹುಡುಗಿ ಕೂಡ ತುಂಬಾನೆ ಇಷ್ಟವಾದಳು. )
ಅಕ್ಷತಾ ಹೇಳಿದ ಸಮಯಕ್ಕೆ ಸರಿಯಾಗಿ ಬಂದಳು..ಈ ಗುಣ ಹಾಗೆ ಕಾಪಿಕೊಂಡು ಬಂದರೆ ಒಂದು ದಿನ ಆಕೆ ಖಂಡಿತ ಉನ್ನತ ಸ್ಥಾನಕ್ಕೆ ಏರಬಲ್ಲಳು. ಆಗಲೂ ನನಗೆ ಈ ಸಂದರ್ಶನ ಅಥವಾ ಲೇಖನ ಪೇಪರಿನಲ್ಲಿ ಪ್ರಕಟವಾಗುತ್ತದೆ ಎಂದು ನಂಬಿಕೆ ಇರಲಿಲ್ಲ..ಹಾಗಾಗಿ ನಾನು ನನ್ನ ದಿನ ನಿತ್ಯದ ವಸ್ತ್ರದಲ್ಲೇ ಇದ್ದೆ..ನನಗೋ ನನ್ನ ಕತೆ ಕೇಳುವರು ಬೇಕಿತ್ತೋ ಏನೋ ..ಆಕೆಯಲ್ಲಿ ನನ್ನ ಬದುಕಿನ ಕೆಲ ಹಾದಿಯನ್ನು ಬಿಚ್ಚಿಟ್ಟೆ. ಈ ಹಾದಿಯೇನು ಸುಗಮವಾಗಿರಲಿಲ್ಲ...ಆದರೂ ಹಟಬಿಡದ ತ್ರಿವಿಕ್ರಮನಂತೆ ಮತ್ತೆ ಮತ್ತೆ ಪ್ರಯತ್ನ ಮಾಡಿ ಇವತ್ತು ಒಂದಿಷ್ಟು ಗೆಲುವುಗಳನ್ನು ನನ್ನ ಸೆರಗಿನೊಳಗೆ ಬಚ್ಚಿಟ್ಟುಕೊಂಡಿದ್ದೇನೆ. ಅದೆಷ್ಟೋ ಸಲ ಏಣಿಯ ತುದಿ ಮುಟ್ಟಿ ಹಾವಿನ ಮೂಲಕ ಪಾತಾಳಕ್ಕೆ ಜಾರಿದ್ದೇನೆ..ಮತ್ತೆ ಮೈ ಒದರಿ, ನನ್ನ ಅದೃಷ್ಟಕ್ಕೆ ಛಲವೊಡ್ಡಿ ನಡೆದಿದ್ದೇನೆ. ಒಂದಂತೂ ನಿಜ..ನನ್ನ ನಂಬಿಕೆಗಳನ್ನು, ನನ್ನ ತತ್ವಗಳನ್ನು ಪಾಲಿಸುವಲ್ಲಿ ರಾಜಿಮಾಡಿಕೊಳ್ಳದೆ ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆದು ನನ್ನ ಕಸುವು ಒಂದಿಷ್ಟು ಸವೆದರೂ ಕನಸನ್ನು ನನಸು ಮಾಡಿಕೊಳ್ಳುವ ಛಲ ಬಿಡುವುದಿಲ್ಲ. ಎಂಟನೆಯ ವಯಸ್ಸಿನಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಕತೆಗಳತ್ತ ಆಕರ್ಷಿತಳಾದ ನನಗೆ ಇಂದೂ ಅವು ನನ್ನ ಜೀವನವನ್ನು ರೂಪಿಸುವಲ್ಲಿ ಪಾತ್ರವಹಿಸಿವೆ ಎಂದು ಹೇಳಿಕೊಳ್ಳುವುದರಲ್ಲಿ ಹೆಮ್ಮೆಯೆನಿಸುತ್ತದೆ. ಅದರಲ್ಲೂ ಗೋಪಾಳನ ಕತೆ- ( ಬೆಂಗಾಳಿ ಭಾಷೆಯ ಬಳಕೆಯಂತೆ ಳ ಬಳಸಿದ್ದೇನೆ.) ಇನ್ನೊಂದು ಭಕ್ತನ ಕನಸಿನಲ್ಲಿ ಬಂದು ಅವನ ಕಷ್ಟದಲ್ಲಿ ಸಹಾಯ ಮಾಡುವ ದೇವರು. ಇನ್ನೊಂದು ಪೋಸ್ಟಿನಲ್ಲಿ ಈ ಕತೆಗಳನ್ನು ಹಾಕುತ್ತೇನೆ.
ಶನಿವಾರ ಬೆಳಿಗ್ಗೆ ಬಹುಶಃ ಹನ್ನೊಂದು ಗಂಟೆ ಕಾಣುತ್ತದೆ...ನನ್ನ ಮಾಮನ ಫೋನು...ನಿನ್ನ ಬಗ್ಗೆ ಪೇಪರಿನಲ್ಲಿ ಆರ್ಟಿಕಲ್ ಬಂದಿದೆ...ಸಂತೋಷವಾಯಿತು...ಹತ್ತೇ ನಿಮಿಷದಲ್ಲಿ ಓರಗಿತ್ತಿಯ ಮೆಸೇಜ್- ತ್ರಿಲ್ಡ್! ನಿನ್ನ ಬಗ್ಗೆ ಓದಿ...ನಮ್ಮ ಮನೆಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವುದು...ನನಗೋ ನಂಬಲಾಗುತ್ತಿಲ್ಲ...ಪೇಪರ್ ಇನ್ನೂ ನೋಡೇ ಇಲ್ಲ...ಸರಿ ಇನ್ನು ಉಳಿದವರಿಗೆ ಓರಗಿತ್ತಿ ತಿಳಿಸುವಳು ಎಂದು ಸುಮ್ಮನಾಗಿಬಿಟ್ಟೆ....ನನ್ನ ಫೇಸ್ ಬುಕ್ ಮಿತ್ರರಿಗೆ ಮೆಸೇಜ್ ಕೊಟ್ಟೆ...ಹೆಚ್ಚಿನವರು ತಟಸ್ತರಾಗಿದ್ದರು...ಆಸು ಸರ್ ಕೂಡಲೇ ಅಂತರ್ಜಾಲ ಪತ್ರಿಕೆ ಓದಿ ಶೇರ್ ಮಾಡಿಬಿಟ್ಟರು...ನನ್ನ ಮಕ್ಕಳಿಗೂ ಹೊಸ ಬಗೆಯ ಆನಂದ...ಬಹುಶಃ ಪ್ರತಿಕ್ರಿಯಿಸಲೂ ತಿಳಿಯುತ್ತಿಲ್ಲ...ನನ್ನ ಅಮ್ಮನಂತೂ ಆಕಾಶದಲ್ಲಿ ತೇಲಾಡುತ್ತಿದ್ದಾರೆ...ಕಷ್ಟಪಟ್ಟು ಆ ಲೇಖನ ಓದಿ ನನಗೆ ಹೇಳಿದಾಗ ನನ್ನ ದಿನ ಸಾರ್ಥಕವಾಯಿತೆಂದು ಅನಿಸದೇ ಹೋದರೆ ಹೇಗೆ?
ಸರಿ ಎಲ್ಲರೊಂದಿಗೆ ಹಂಚಿಕೊಂಡು ಆನಂದವನ್ನು ದುಪ್ಪಟ್ಟು ಮಾಡಿಕೊಂಡಿದ್ದೇನೆ..ಇನ್ನು ಬ್ಲಾಗ್ ಮಿತ್ರರೊಂದಿಗೆ ಹಂಚಿಕೊಳ್ಳಲಾಗಿರುತ್ತಲಾಗುತ್ತದೆಯೇ! ಹಾಗಾಗಿ ಈ ಬರಹದ ಮೂಲಕ ಅದನ್ನು ಹೇಳಿದ್ದೇನೆ...ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ!!!!!
ಹುಡುಕು
ಆಧ್ಯಾತ್ಮಿಕ ಅನುಭೂತಿ,
ಚಿತ್ರ,
ಚಿತ್ರ ವಿಚಿತ್ರ,
ವರ್ತಮಾನ
Location: ಭಾರತ
Mannagudda Rd, Mangalore, Karnataka, India
26 May, 2011
ಬೇಸಿಗೆಯ ಕಲಾ ಶಿಬಿರ
Location: ಭಾರತ
Kudroli Rd, Mangalore, Karnataka, India
15 December, 2007
ಹರಕೆಯ ಕುರಿ- ಕಾಮಧೇನು!
ಈ ಪ್ರಪಂಚದಲ್ಲಿ ಚಿತ್ರ ವಿಚಿತ್ರ ಪರಂಪರೆಗಳು, ನಂಬಿಕೆಗಳು ಇನ್ನೂ ಚಾಲ್ತಿಯಲ್ಲಿವೆ ಎಂದರೆ ಆಶ್ಚರ್ಯವಾಗುತ್ತದೆ. ಒಂದುಕಡೆ ಬಹಳ ಮುಂದುವರೆದ ಆಧುನಿಕ ಜನಾಂಗ ಇನ್ನೊಂದೆಡೆ ಮೂಡ ನಂಬಿಕೆಯೋ, ಮತ್ತೇನೋ ಅಥವಾ ಪವಾಡಗಳೋ ಎನ್ನುವಂತಹ ಉತ್ಸವಗಳು. ಹಳೆಯ ತರಂಗವನ್ನು ತಿರುವುತ್ತಿದ್ದಾಗ ಈ ಲೇಖನವು ನನ್ನನ್ನು ಸೆಳೆಯಿತು. ನನ್ನ ಬ್ಲಾಗಿನ ಹೆಸರೇ ತಿಳಿಸುವಂತೆ ನನ್ನ ಚಿತ್ತವನ್ನು ಕದಡುವ ಅಥವಾ ಪ್ರಸನ್ನಗೊಳಿಸುವ ಯಾವುದೇ ಸಂಗತಿಯನ್ನು ಇಲ್ಲಿ ದಾಖಲಿಸಬಯಸುತ್ತೇನೆ. ಹಾಗಾಗಿ ಈ ಲೇಖನ. ಇದೇ ೨೦೦೭ರ ಎಪ್ರಿಲ್ ತರಂಗದಲ್ಲಿ ಕಿಶನ್ ರಾವ್ ಕುಲಕರ್ಣಿ ಕುಪ್ಪಗಿಯವರ ಲೇಖನಿಯಿಂದ ಮೂಡಿ ಬಂದ ಈ ಲೇಖನದಿಂದ ಸಂಕ್ಷಿಪ್ತವಾಗಿ ಆಯ್ದು ಪ್ರಸ್ತುತ ಪಡಿಸಿದ್ದೇನೆ.
ಬೈಲಕೂರ ಎಂಬ ಊರು,. ಬಹುಶಃ ಉತ್ತರ ಕರ್ನಾಟಕದ ಒಂದು ಹಳ್ಳಿ. ಎಲ್ಲಾ ಊರಿನಲ್ಲಿ ನಡೆಯಿವಂತೆ ಈ ಊರಿನಲ್ಲೂ ಒಂದು ಜಾತ್ರೆ ನಡೆಯುತ್ತದೆ. ಆದರೆ ಈ ಜಾತ್ರೆಯು ಎಲ್ಲಾ ಕಡೆಯಲ್ಲಿ ಇರುವಂತೆ ರಥೋತ್ಸವವೋ ಅಥವಾ ದೀಪಾರಾಧನೆಯಿಂದಲೋ ಕಳೆಕಟ್ಟುವುದಿಲ್ಲ.......ಆದರೆ ಪೊರಕೆ ಏಟಿನಿಂದ, ಅದೂ ಖುಷಿಯಿಂದ ತಿನ್ನುವ ಏಟುಗಳಿಂದ ಕಳೆಕಟ್ಟುತ್ತದೆ. ಆದರೆ ನನ್ನನ್ನು ಸೆಳೆದದ್ದು ಇದಲ್ಲ. ಇಲ್ಲಿಯೇ ಪಾದುಕೆ ಸೇವೆ ಎಂದು ಮತ್ತೊಂದು ಹರಕೆಯ ಸೇವೆಯನ್ನು ಭಕ್ತರು ಹೊತ್ತುತ್ತಾರೆ. ಅದೂ ಯಾವ ದೇವರಿಗೆ ಅಂತಿರಾ....ಪವನಪುತ್ರ ಹನುಮಾನನಿಗೆ! ಇದರಲ್ಲೇನು ವಿಚಿತ್ರ ಎಂದುಕೊಳ್ತಿರಾ? ಸರಿ ಬಿಡಿ, ಇಂತಹ ಹರಕೆಗಳು ಭಾರತದ ಉದ್ದಗಲಕ್ಕೂ ನಡೆಯುತ್ತಿರುವುದರಿಂದ ಅದರಲ್ಲೇನೂ ಆಶ್ಚರ್ಯವೂ ಇಲ್ಲ ವಿಚಿತ್ರವೂ ಇಲ್ಲ. ವಿಪರ್ಯಾಸವಿರುವುದು ಭಕ್ತರು ಹರಕೆಯೆಂದು ಒಪ್ಪಿಸುವ ಪಾದುಕೆಯಲ್ಲಿ.
ಈ ಪಾದುಕೆಗಳು ಸುಮಾರು ಒಂದು ಅಡಿಅಗಲ ಮತ್ತು ಎರಡು ಅಡಿ ಉದ್ದವಾಗಿದ್ದು ಮುತ್ತು, ಹವಳ, ಬಣ್ಣ ಬಣ್ಣದಬಟ್ಟೆ, ಗೆಜ್ಜೆ, ಮಿರಿಮಿರಿ ಮಿಂಚುವ ಕಾಗದಗಳಿಂದ ಅಲಂಕೃತಗೊಂಡಿರುತ್ತದೆ. ಹರಕೆಹೊತ್ತವರು ಮಾರುತಿಯ ಗುಡಿಗೆ ತಮ್ಮ ತಲೆಯ ಮೇಲೆ ಈ ಪಾದುಕೆಗಳನ್ನು ಹೊತ್ತು ತರುತ್ತಾರೆ. ಇಲ್ಲಿ ಹರಕೆಯ ಕಥೆ ಮುಗಿಯುವುದಿಲ್ಲ. ಈ ಪಾದುಕೆಗಳಿಂದ ಮೈಯಲ್ಲ ಹೊಡಕೊಳ್ಳುತ್ತಾರೆ. ಹೀಗೆ ಮಾಡಿದರೆ ಮೈ- ಕೈ ನೋವು, ಕೆಮ್ಮು, ದಮ್ಮು, ನೆಗಡಿಯಂತಹ ಕಾಯಿಗಳು ವಾಸಿಯಾಗುತ್ತದೆ ಅಲ್ಲದೆ ಭೂತ- ದೆವ್ವಗಳ ಕಾಟವೂ ಮಾಯವಾಗುತ್ತದೆ ಎಂದು ನಂಬುತ್ತಾರೆ.
ನಾ ಓದಿದಂತೆ ಕ್ರೂರತನವಿರುವುದು ಪಾದುಕೆಯಲ್ಲಿ. ಈ ಪಾದುಕೆಗಳನ್ನು ತಯಾರಿಸಲು ಕೊಂಬು, ಕಿವಿ, ಬಾಲ, ಹಲ್ಲು ಮುಕ್ಕಾಗಿರದ ಆರೋಗ್ಯವಂತ ಕಪಿಲೆ ಇಲ್ಲವೇ ಬಿಳಿ ಆಕಳಿನ ಚರ್ಮವೇ ಬೇಕು. ಈ ಮೆಟ್ಟನ್ನು ಗುಡಿಗೆ ಒಪ್ಪಿಸುವಾಗ ಅದನ್ನು ತಯಾರಿಸಿದ ಚಮ್ಮಾರನಿಗೆ ಕಬ್ಬು, ಐದು ಬಗೆಯ ಧಾನ್ಯ, ದಕ್ಷಿಣೆ, ಹೋಳಿಗೆಯ ಉಲ್ಪಿ ಕೊಡುವುದು ಮಾತ್ರವಲ್ಲದೆ ಒಂದು ಪ್ರಾಣಿಯನ್ನು ಬಲಿ ನೀಡಿ ಪ್ರಸ್ಥ ಮಾಡಿಸಬೇಕು. ಇದಕ್ಕೆಲ್ಲಾ ಸುಮಾರು ಹದಿನೈದು ಸಾವಿರ ರೂಪಾಯಿ ಖರ್ಚು ಆಗುವುದೆಂದು ಲೇಖನ ಬರೆದ "ಕಿಶನ್ ರಾವ್ ಕುಲಕರ್ಣಿ ಕುಷ್ಟಗಿ" ಬರೆದಿದ್ದಾರೆ.
ಬೇಸರವೆಂದರೆ ಈ ಹರಕೆಯನ್ನು ಪೂರೈಸಲು ಒಂದು ಆರೋಗ್ಯವಂತ ದನವು ಬಲಿಯಾಗಬೇಕಾಗುತ್ತದೆ. ಇಂತಹ ಪರಂಪರೆಯ ಅಗತ್ಯ ನಮಗಿದೆಯೇ? ಎಂಬುದುದು ನನ್ನ ಪ್ರಶ್ನೆ. ನಮ್ಮ ರಾಜ್ಯದಲ್ಲಿ ಈಗಾಗಲೇ ಆಕಳುಗಳನ್ನು, ಅಪರೂಪದ ತಳಿಗಳನ್ನು ರಕ್ಷಿಸುವಂತಹ ಕಾರ್ಯಗಳು ನಡೆಯುತ್ತಿವೆ. ಗೋಮೂತ್ರದಿಂದ ಔಷಧ ಮಾತ್ರವಲ್ಲದೆ ಕೀಟನಾಶಕಗಳನ್ನೂ ತಯಾರಿಸುತ್ತಿದ್ದಾರೆ ಮತ್ತು ಅದರ ಪ್ರಚಾರವೂ ಆಗಿ ಜನರು ಇದರ ಪ್ರಯೋಜನವನ್ನೂ ಪಡೆಯುತ್ತಿದ್ದಾರೆ. ಈ ಬೈಲಕೂರಿನ ಜನತೆಗೆ ತಿಳಿ ಹೇಳಿ ಆರೋಗ್ಯವಂತ ದನದ ಹತ್ಯೆಯ ಪರಂಪರೆಯನ್ನು ದೂರಮಾಡಿಸುವ ಪ್ರಯತ್ನಗಳು ನಡೆಯಬೇಕು.
ಕಾಮಧೇನುವನ್ನು ಪೂಜಿಸುವಂತ ಹಿರಿಮೆಯನ್ನು ಹೊತ್ತಿದ ಹಿಂದೂ ನಾಡಿನಲ್ಲೇ ಹರಕೆಯ ಹೆಸರಿನಲ್ಲಿ ಹಸುವಿನ ಕ್ರೂರ ಹತ್ಯೆ......ಎಂತಹ ವಿಪರ್ಯಾಸ.
ಅಂದ ಹಾಗೆ ಇದೇ ಊರಿನಲ್ಲಿ ನಡೆಯುವ ಪೊರಕೆ ಜಾತ್ರೆಯೂ ಏನೂ ಕಡಿಮೆ ವಿಚಿತ್ರದಲ್ಲ. ಒಂದು ಸಮಾಧಾನವೆಂದರೆ ಇದರಲ್ಲಿಯಾವುದೇ ಪ್ರಾಣಿಯನ್ನು ಬಲಿ ಕೊಡುವುದಿಲ್ಲ. ಆ ವರ್ಣನೆ ಇನ್ನೊಂದು ಕಂತಿನಲ್ಲಿ.

Subscribe to:
Posts (Atom)