ಕೂಡಿಸಿ, ಗುಣಿಸಿ, ಭಾಗಸಿ, ಕಳೆದು.. ಕೊನೆಗೂ ಈ
ಪುಸ್ತಕದ ಲೆಕ್ಕಕ್ಕೇನೋ ಉತ್ತರ ಸಿಕ್ಕಿತು
ಮನದ ಮೂಲೆ ಮೂಲೆಯಲ್ಲೂ ಹೀಗೇ ಕೂಡಿಸಿ, ಕಳೆದು, ಭಾಗಿಸಿ,
ಗುಣಿಸಿದ ಲೆಕ್ಕಗಳು ಚೆಲ್ಲಾಪಿಲ್ಲಿ..
ಎಲ್ಲವನ್ನೂ ಪೇರಿಸಿ ಹೆಣಗಾಡಿ..
ಉತ್ತರವೇನೋ ಸಿಕ್ಕಿತು
ಸರಿ ತಪ್ಪು ಹೇಳಬೇಕಾದವಳು ನೀ ಮಾತ್ರ ಮೌನಿ
ನಾಳೆ ಮತ್ತೆ ಬರುವಿಯಲ್ಲ..
ಉತ್ತರ ಹೇಳದೇ ಮರಳಲು ಬಿಡುವುದಿಲ್ಲ ಮುಸ್ಸಂಜೆ ನಿನ್ನ!
No comments:
Post a Comment