ಮತ್ತೆ ಬಂದಳವಳು..
ನಮ್ಮವಳು ಮುಸ್ಸಂಜೆ!
------------------------------------
ನಸುಗೆಂಪು, ಹಳದಿ,
ಕೇಸರಿ, ನೇರಳೆ..
ರಂಗು ರಂಗಿನ
ತೆಳ್ಳಗಿನ ಲೆಹಂಗ..
ಹಸುರು ಹೊನ್ನ
ಕುಸುರಿ ಕುಪ್ಪಸ..
ತೂಗಾಡುತಿರುವ
ಹರಳಿನ ಝುಮುಕಿ..
ತುಂಬಿದೆದೆಯ ಮೇಲೆ
ಭಾರದ ಕೆಂಪು ಪದಕ..
ತೆಳು ಸೊಂಟಕೆ
ಬಿಗಿದ ಮುತ್ತಿನ ಜಾಲರಿ..
ಘಮ ಘಮ ಮಂಗಳೂರು
ಮಲ್ಲಿಗೆ ಸುತ್ತಿದ ನೀಲವೇಣಿ..
ಬೆಳ್ಳಿಗೆಜ್ಜೆಗಳ
ಝಲ್ ಝಲ್ ನಾದ,..
ಬಂದಳು ಮತ್ತೆ
ನಮ್ಮವಳು.. ಅವಳೇ,
ಮುಸ್ಸಂಜೆ
ಮನದಂಗಳದಲಿ ಅರಳಿದಳು!
No comments:
Post a Comment