“ನೀನು, ನಿನ್ನ ಬರಹ, ಚಿತ್ರ, ಛಾಯಾಚಿತ್ರಗಳೆಲ್ಲ ಪೊಟ್ಟು ಬ್ಲಾಗ್ ಲೋಕ ಮತ್ತು ಫೇಸ್ ಬುಕ್ಕಿಗೇ ಸರಿ!”
----------------------------------------------------------------------------
“ಓಯ್ ಏನೇ, ಹೇಗಿದ್ದಿ?”
ಬಹಳ ದಿನದ ನಂತರ ಇವಳಿಗೆ ನನ್ನ ನೆನಪು.. ಏನೋ ಖುಷಿಯ ವಿಷಯ ಇರಬೇಕು!
“ನಂಗೇನೇ ಚೆನ್ನಾಗೇ ಇದ್ದೇನೆ. ಇತ್ತೀಚಿಗಂತೂ ಒಂದು ಮೂರು ಕಿಲೋ ಆದ್ರೂ ಹೆಚ್ಚಿದ್ದೇನೆ! ಮತ್ತೆ ಏನು ವಿಶೇಷ ಸಮಾಚಾರ?”
“ನನ್ನ ಲೇಖನ. ಕತೆ ಪೇಪರ್ ವಾರ ಪತ್ರಿಕೆಗಳಲ್ಲಿ ಪ್ರಕಟವಾಗ್ತಿವೆ! ನಿಂದು ಏನಾದ್ರೂ?”
ನಗು ಬಂತು! ಅಲ್ಲ, ಪತ್ರಕರ್ತರು, ಸಂಪಾದಕರ ಜತೆ ಚೆನ್ನಾಗಿ ವ್ಯವಹರಿಸುವವಳ ಮಾತು ಕೇಳದೇ ಹೋದ್ರೆ ಆಗುತ್ತಾ!!!
“ಇಲ್ವೆ! ನಂದು ಪತ್ರಿಕೆಗಳಲ್ಲಿ ಬರುವಷ್ಟು ಮಟ್ಟದ ಬರಹಗಳು ಅಲ್ಲ ಅಂತ ಅನಿಸುತ್ತೆ. ಹಾಗಾಗಿ ನಾನೇ ಕಳಿಸಿಲ್ಲ!”
“ಅದು ಹೌದನ್ನು, ಅದೇ ಹಳಸಲು ಒಲವು, ಪ್ರೇಮ, ಪ್ರೀತಿ ಬಿಟ್ಟು ನಿಂಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೀಲಿಕ್ಕೆ ಗೊತ್ತಾಗೊಲ್ಲ.. ನೀನೊಂದು ಇಮೋಷನಲ್ ಫೂಲ್! ಹಸಿವು, ಜಾತಿ, ಬುದ್ಧ.. ರಾಜಕೀಯ ಮೋದಿ ರಾಹುಲ್.. ಎಷ್ಟೆಲ್ಲಾ ವಿಸ್ತಾರದ ವಿಷಯಗಳನ್ನು ಆರಿಸಿಕೊಳ್ಳೆ ಅಂದ್ರೆ ನಂಗೆ ಗೊತ್ತಾಗೊಲ್ಲ ಅಂತಿಯಾ.. ನೀನು ಈ ಪೊಟ್ಟು ಬ್ಲಾಗ್ ಲೋಕ, ಫೇಸ್ ಬುಕ್ಕಿಗೆ ಸರಿ!”
’ಅದು ಹೌದು.. ಸಾಹಿತಿ ಅಂದ್ರೆ ಯಾವ ವಿಷಯ ಕೊಟ್ರೂ ಕೂಡಲೇ ಆ ಭಾವಕ್ಕೆ ಪರಕಾಯ ಮಾಡಿ ಓದುಗನನ್ನು ಸೆಳೆವಂತೆ ಬರೆಯುವ ಸೃಜನಶೀಲತೆ ನನ್ನಲ್ಲಿ ಇಲ್ಲ! ಅಲ್ಲ, ನಾ ಯಾವಾಗ ನನ್ನನ್ನು ಸಾಹಿತಿ ಅಂತ ಹೇಳ್ಕೊಂಡಿದ್ದೇನೆ!
"ನಿಮ್ಮ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ" ಅಂತ ಬಂದ ಮೂರು ನಾಲ್ಕು ಆಮಂತ್ರಣಕ್ಕೂ ನಾನು ವಿನಯಪೂರ್ವಕವಾಗಿ ನಿರಾಕರಣೆಯ ಉತ್ತರ ಕೊಟ್ಟಿದ್ದೇನೆ! ಇದೆಲ್ಲಾ ಇವಳಿಗೆ ಹೇಳಿ ಪ್ರಯೋಜನವಿಲ್ಲ! ನಾ ಕೇಳದೇ, ಹೇಳದೇ ಎರಡು ಬಾರಿ ವಿಜಯ ಕರ್ನಾಟಕದಲ್ಲಿ ನನ್ನ ಬ್ಲಾಗ್ ಬರಹ ಬಂದಿದೆ. ಡೆಕ್ಕನ್ ಹೆರಾಲ್ಡ್ ನನ್ನ ಕಲೆಯ ಬಗ್ಗೆ ಅರ್ಧ ಪುಟ ನನ್ನ ಬಗ್ಗೆ ಪುಟ್ಟ ಲೇಖನ ಪ್ರಕಟಿಸಿದೆ. ನಾ ಹಾಕುವ ಛಾಯಚಿತ್ರಗಳನ್ನು, ಬರಹಗಳನ್ನು ಮೆಚ್ಚಿ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಅಣ್ಣಂದಿರು, ತಮ್ಮ ತಂಗಿಯಂದಿರು, ಮಿತ್ರರು, ಮುಂಜಾವಿಗರು.. ಇದ್ದಾರೆ! ಇದಕ್ಕಿಂತ ದೊಡ್ಡ ಓದುಗರ ಗಣ ಬೇಕೆ.. ನನ್ನ ಬರಹದ ಮೌಲ್ಯ ಮಾಪನೆ ನಾನೇ ಮಾಡುತ್ತೇನಲ್ಲ.. ಅವುಗಳ ಬೆಲೆ ನನಗೆ, ನನ್ನವರಿಗೆ ಗೊತ್ತು, ಅವು ಒರಿಜಿನಲ್.. ಯಾರ್ಯಾರ ಭಾವ, ಮಾತು ಹೆಕ್ಕಿ ಬರೆದದಲ್ಲ! ಅಷ್ಟು ಸಾಕು ನನಗೆ!’
ಕಾಕತಾಳೀಯವಾಗಿ ಇವತ್ತು ವಿಜಯ ಕರ್ನಾಟಕದ ಬ್ಲಾಗಿಲುನಲ್ಲಿ ಕೆಲವೇ ತಿಂಗಳುಗಳ ಅಂತರದಲ್ಲಿ ಎರಡನೆಯ ಬಾರಿ ನನ್ನ ಬ್ಲಾಗ್ ಬರಹ ಪ್ರಕಟವಾದದ್ದು ಮಿತ್ರರಿಂದ ತಿಳಿದು ಬಂತು!

No comments:
Post a Comment