ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
01 December, 2013
ಸುಭಾಷಿತ
ನ ದೇವಾ ದಂಡಮಾದಾಯ ರಕ್ಷಂತಿ ಪಶುಪಾಲವತ್|
ಯಂ ತು ರಕ್ಷಿತುಮಿಚ್ಛಂತಿ ಬುದ್ಧ್ಯಾ ಸಂವಿಭಜಂತಿ
ತಮ್||
ಪಶುಪಾಲರಂತೆ ಸ್ವತಃ ಬೆತ್ತವನ್ನು ಹಿಡಿದು ಹಾದಿ
ತಪ್ಪದಂತೆ ನೋಡಿಕೊಳ್ಳುವುದಿಲ್ಲ ಭಗವಂತ|
ಯಾರನ್ನು ಅವನು ರಕ್ಷಿಸಲಿಚ್ಛಿಸುತ್ತಾನೋ ಅವನಿಗೆ
ಬುದ್ಧಿಯನ್ನು ದಯಪಾಲಿಸುತ್ತಾನೆ||
No comments:
Post a Comment