ನುರಿತ ಚಿತ್ರಗಾರನಂತೆ ರಂಗುಗಳ ಹದವಾಗಿ ಬೆರೆಸಿ..
ಅಲ್ಲಲ್ಲಿ ಚೆಲ್ಲಿ, ಚೌಕಟ್ಟಿಲ್ಲದ ವಿಸ್ತಾರದ ಕ್ಯಾನ್ವಾಸಿನಲಿ ತನ್ನ ಸಹಿ ಮಾಡಿ ಅತ್ತ ನಡೆವ ಅವಸರ
ಅವನಿಗೆ..
ಮಾಗಿಯ ಚಳಿಯಲಿ ತನ್ನ ಪೂರ್ಣ ಮೊಗ ತೋರಿ ನಲ್ಲ
ನಲ್ಲೆಯರಿಗೆ ನಶೆಯೇರಿಸುವ ಹಂಬಲದಿ ಉದಯಿಸುವ ಅವಸರ ಇವನಿಗೆ..
ಮನದ ಅಂಗಣಕೆ ಬಡಿದು ನವಿರು ಕಂಪನ ಕೊಡುವ ಭಾವಲೆಗಳ ಹೊಡೆತದ ಕಾಟ ಕಳಚುವ ಅವಸರ
ಇವಳಿಗೆ..
ಈ ವೇದಿಕೆಯಲಿ ಅವನಿವನು, ಅವಳಿವಳು ತನ್ನ ಬಣ್ಣಿಸುವ ಕಾವ್ಯವರ್ಷದಲಿ ಮುಳುಗೇಳಿ, ಗೆಜ್ಜೆ ಕಟ್ಟಿ “ತಕಿಟ ತಕಿಟ ಧಿಂ ಧಿಮಿತ ತಕಿಟ ತಾಂ” ಕುಣಿದು ದಣಿಯುವ ತವಕ
ಅವಳಿಗೆ,
ಅದೇ ನಮ್ಮ ಮುದ್ದು ಮುಸ್ಸಂಜೆಗೆ!
No comments:
Post a Comment