ಅಮ್ಮ ಸುಶ್ರಾವ್ಯವಾಗಿ ತಾಳ ಹಾಕುತ್ತಾ ಭಜನೆ
ಹಾಡುತ್ತಿದ್ದರು..
ತಾಳುವಿಕೆಗಿಂತನ್ಯ ತಪವು ಇಲ್ಲ |
ಕೇಳಬಲ್ಲವರಿಗೆ ಪೇಳುವೆನು ಸೊಲ್ಲ ||ಅನು||
ದುಷ್ಟ ಮನುಜರು ನುಡಿವ ನಿಷ್ಟುರದ ನುಡಿ ತಾಳು|
ಕಟ್ಟುಬುತ್ತಿಯ ಮುಂದೆ ಉಣಲುಂಟು ತಾಳು ||೧||
ಹಳಿದು ಹಂಗಿಸುವಂಥ ಹಗೆಯ ಮಾತನು ತಾಳು |
ಸುಳಿ ನುಡಿ ಕುಹಕತನ ಮಂತ್ರವನು ತಾಳು|
ಅಳುಕದಲೆ ಬಿಂಕದ ಬಿರುಸು ಮಾತನು ತಾಳು|
ಹಲಧರಾನುಜನನ್ನು ಹೃದಯದೊಳು ತಾಳು ||೨||
ನಕ್ಕು ನುಡಿವರ ಮುಂದೆ ಮುಕ್ಕರಿಸದೆ ತಾಳು|
ಅಕ್ಕಸವ ಮಾಡುವವರ ಅಕ್ಕರದಿ ತಾಳು|
ಉಕ್ಕು ಹಾಲಿಗೆ ನೀರ ಇಕ್ಕುವಂದದಿ ತಾಳು|
ಲಕ್ಷ್ಮೀಶನ ವದನ ಶರಣೆಂದು ಬಾಳು ||೩||
No comments:
Post a Comment