ವಿದ್ಯಾಸಾಗರ- “ಏಕೆ ಭಗವಂತನನ್ನು ಕರೆಯಬೇಕು? ಚಂಗೆಸ್
ಖಾನ್ ಲೂಟಿ ಮಾಡಿ ಲಕ್ಷದಷ್ಟು ಸೈನಿಕರನ್ನು ಸೆರೆಹಿಡಿದ.. ’ಇವರಿಗೆಲ್ಲ ಅನ್ನ ಹಾಕುವುದು ಹೇಗೆ..
ಸ್ವತಂತ್ರವಾಗಿಯೂ ಬಿಡುವ ಹಾಗಿಲ್ಲ. ಏನು ಮಾಡೋಣ ?’ ಎಂದು ಸೇನಾಪತಿ ಕೇಳಿದಾಗ, “ಎಲ್ಲರನ್ನೂ
ಕೊಂದುಹಾಕು!” ಹುಕುಂ ಮಾಡಿಬಿಟ್ಟ. “ಕಚ್ ಕಚ್” ಅಂತ ಎಲ್ಲರ ಹತ್ಯೆ ಆಯಿತು.
ಭಗವಂತ ಈ ಹತ್ಯೆಯನ್ನು ನೋಡಿದ ತಾನೆ! ಅದನ್ನು ತಡೆಯುವ ಯಾವ ಪ್ರಯತ್ನವನ್ನೂ ಆತ ಮಾಡಲಿಲ್ಲ.. ಆತ ಇದ್ದರೂ ಒಂದೇ, ಸತ್ತರೂ ಒಂದೇ. ನನಗೆ ಅಂತವನ ಅವಶ್ಯಕತೆ ಇಲ್ಲ. ಅಂತವನಿಂದ ನನಗೆ ಯಾವ ಉಪಕಾರವೂ ಆಗುವ ಹಾಗಿಲ್ಲ!”

ಶ್ರೀರಾಮಕೃಷ್ಣರು- “ಭಗವಂತನ ಕಾರ್ಯವನ್ನು, ಅಂದರೆ ಆತ
ಯಾವ ಉದ್ದೇಶದಿಂದ ಏನು ಏನು ಮಾಡುತ್ತಾನೆ ಎಂಬುದನ್ನು ತಿಳಿಯಲು ಸಾಧ್ಯವೇ? ಆತ ಸೃಷ್ಟಿಯ ಪಾಲನೆ
ಸಂಹಾರ ಎಲ್ಲವನ್ನೂ ಮಾಡುತ್ತ ಇದ್ದಾನೆ. ಆತ ಏತಕ್ಕೆ ಸಂಹಾರ ಮಾಡುತ್ತಾನೆ ಎಂಬುದನ್ನು ನಮಗೆ ಅರಿತುಕೊಳ್ಳಲು
ಸಾಧ್ಯವೆ?
ನಾನು ಭಗವತಿಗೆ ಹೇಳುತ್ತೇನೆ, ’ ಹೇ ತಾಯೇ, ನನಗೆ ಅದನ್ನು ಅರಿತುಕೊಳ್ಳುವ ಅವಶ್ಯಕತೆಯೇನೂ ಇಲ್ಲ. ದಯವಿಟ್ಟು ನಿನ್ನ ಪಾದಪದ್ಮಗಳಲ್ಲಿ ನನಗೆ ಭಕ್ತಿ ನೀಡು.’ ಮಾನವ ಜನ್ಮದ ಉದ್ದೇಶ ಭಕ್ತಿಯನ್ನು ದೊರಕಿಸಿಕೊಳ್ಳುವುದೇ. ಉಳಿದವುಗಳ ಸಂಬಂಧವಾಗಿ ನಮಗೆ ಯಾವುದು ಶ್ರೇಯಸ್ಕರವಾದದ್ದು ಎಂಬುದು ತಾಯಿಗೆ ಗೊತ್ತು.
ನಾನು ತೋಟಕ್ಕೆ ಬಂದಿರುವುದು ಮಾವಿನಹಣ್ಣು ತಿನ್ನುವುದಕ್ಕೆ. ಮರಗಳೆಷ್ಟಿವೆ, ಕೊಂಬೆಗಳೆಷ್ಟಿವೆ, ಎಷ್ಟೊಂದು ಕೋಟಿ ಎಲೆಗಳಿವೆ, ಇವುಗಳ ಲೆಕ್ಕಾಚಾರ ನನಗೇಕೆ? ನಾನು ಕೇವಲ ಮಾವಿನಹಣ್ಣು ಮಾತ್ರ ತಿನ್ನುತ್ತೇನೆ: ಮರ, ಕೊಂಬೆ, ಎಲೆಗಳ ಲೆಕ್ಕಾಚಾರ ನನಗೆ ಬೇಕಾಗಿಲ್ಲ.”

-
ಶ್ರೀರಾಮಕೃಷ್ಣ ವಚನವೇದ
No comments:
Post a Comment