ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

04 June, 2014

ಶಾಯರಿ ಭಾವಾನುವಾದ

ತುಟಿ ಬಿರಿದು ನಗುತ್ತಿದ್ದ ಅವಳಿಗೆ
ಕಣ್ಣಿನ ಆರ್ದ್ರತೆ ನನ್ನಿಂದ ಮರೆಮಾಚಲಾಗಲಿಲ್ಲ...
ಅಸಹಾಯಕತೆ ಎದೆಗಿರಿದು ಕಣ್ಣುಗಳನು ತೋಯಿಸಿತ್ತೇನೋ..
ಛಾಯಾಚಿತ್ರದಲ್ಲಿದ್ದ ನಾನು ನುಚ್ಚು ನೂರಾದರೂ, ಅವಳೊಳಗಿನ
ನನ್ನ ಬಿಂಬ ಅಖಂಡವಾಗಿಯೇ ಉಳಿದಿದೆಂಬ ಸತ್ಯ ಮುಚ್ಚಿಡಲಾಗಲಿಲ್ಲ!

-ಭಾವಾನುವಾದ

Wo roye to bahut, par mujhse muh mod kar roye
Koyi majburi  hogi to dil tod kar roye
Mere saamne kardiye mrer e tasveer ke tukude,

 Pata chala mere piche wo unhe jod kar roye!

1 comment:

Kiran H. Rao said...

your translation is nice, but it doesn't do justice to the original.


ಬಹಳ ಅತ್ತಳೇನೋ ನಿಜ, ನನ್ನ ಕಣ್ಣ ತಪ್ಪಿಸಿ ಅತ್ತಳಾಕೆ
ಒತ್ತಾಯವೇನಿತ್ತೋ ಏನೋ ನನ್ನ ಮನಸ್ಸ ಮುರಿದು ಅತ್ತಳಾಕೆ
ನನ್ನ ಕಣ್ಣ ಮುಂದೆ ನನ್ನ ಫೋಟೋಕಟ್ಟ ಒಡೆದಳಾದರೂ, ಕಡೆಗೆ
ನನ್ನ ಬೆನ್ನ ಹಿಂದೆ ಅವುಗಳನೇ ಜೋಡಿಸಿ ಅತ್ತಳಾಕೆ

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...