’ಮಮಮ, don’t worry! God is my friend. ದೇವು ಮಿಗೆಲೊ ಫ್ರೆಂಡ್
ಮಮಮ!”
ವರ್ಷದ ಕೆಳಗೆ ಕೆಲಸದ ಸಲುವಾಗಿ ಬೆಂಗಳೂರಿಗೆ ಸೇರಿಕೊಂಡ
ಮೊಮ್ಮಗ ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಟ್ರೆಕ್ಕಿಂಗ್, ಕಾಡು, ಮೇಡು ಎಂದು ಹೀಗೆ ಪ್ರತಿ
ಶನಿವಾರ ಆದಿತ್ಯವಾರ ಸಮಾನ ಮನಸ್ಕ ಗೆಳೆಯರನ್ನು ಕಟ್ಟಿಕೊಂಡು ತಿರುಗುತ್ತಿರುವುದನ್ನು ನೋಡಿ
ನನ್ನಮ್ಮ ನಿನ್ನೆ ಉಡುಪಿ, ಜೋಗ, ಮುರ್ಡೇಶ್ವರ್, ಸಾಗರ..
ಭೇಟಿಯಾಗುವ ನೆವದಲ್ಲಿ ಊರಿಗೆ ಬಂದವನಿಗೆ ಜಾಗ್ರತೆ ಹೇಳುತ್ತಾ ದಿವಸಕ್ಕೆ ಒಮ್ಮೆಯಾದರೂ
ಪ್ರಾರ್ಥನೆ ಮಾಡುವಂತೆ ಹೇಳಿದಾಗ ಪ್ರಥು ತುಂಟ ನಗೆ ಸೂಸುತ್ತಾ ಹೇಳಿದ.
ಅವತ್ತು ಇಪ್ಪತ್ತೆರಡರ ತರುಣಿ ನಾನು, ನನ್ನಮ್ಮ ಅದೇನೋ
ನನಗೆ ಹೇಳಿದಾಗ ಹೀಗೆ ನನ್ನ ಮತ್ತು ಶ್ರೀರಾಮನ ಮಧ್ಯದ ಬಂಧವನ್ನು ಸ್ನೇಹ ಬಂಧವಾಗಿ ಬದಲಾಯಿಸಿದ್ದ ನಾನೂ
ಇಂತಹುದೇ ಆತ್ಮವಿಶ್ವಾಸದಿಂದ ಇದೇ ಮಾತನ್ನು ಹೇಳಿದ್ದೆ. ನಿನ್ನೆ ಇಪ್ಪತ್ತೆರಡರ ಮಗನ ಬಾಯಿಯಿಂದಲೂ
ಅದೇ ಮಾತು ಕೇಳಿದಾಗ ಮನಸ್ಸಿಗೆ ನೆಮ್ಮದಿ ಸಮಾಧಾನ!
ಆ ಸ್ನೇಹ ಬಂಧದ ಮಹತ್ವ ನನಗೆ ಚೆನ್ನಾಗಿ ತಿಳಿದಿದೆ.
No comments:
Post a Comment