ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

05 June, 2014

ಅವಳ ಡೈರಿಯ ಅರೆಬರೆ ಮಾತುಗಳ ಆಧಾರಿತ - ತೀಸ್ ಸಾಲ್ ಬಾದ್!

ತೀಸ್ ಸಾಲ್ ಬಾದ್!
------------------

ನಿನಗೆ ನನ್ನ ಬಗ್ಗೆ ತಿರಸ್ಕಾರವಿತ್ತು... ನಮ್ಮಿಬ್ಬಿರ ಅಂತಸ್ತಿನಲ್ಲಿ ಬಹಳ ವ್ಯತ್ಯಾಸವಿತ್ತು. ನನ್ನ ರೂಪದ ಬಗ್ಗೆಯೂ ಅದೇ ಭಾವವಿದ್ದಿರಬಹುದೆಂದು ನನಗಾಗ ಅನಿಸಿತ್ತು. ಇಷ್ಟೆಲ್ಲ ಅಡೆತಡೆ ಇದ್ದರೂ ನಿನಗೆ ನನ್ನ ಪ್ರೀತಿಯನ್ನು ಮನಗಾಣಿಸುವೆನು ಎಂಬ ಧೈರ್ಯ ನನ್ನಲ್ಲಿತ್ತು. ಆದರೆ.. ಆದರೆ.. ಹ್ಮ್, ಇನ್ನೇನು ಪ್ರಯೋಜನ!”

ನಿರ್ಲಿಪ್ತತೆಯನ್ನು ತೋರಲು ಯತ್ನಿಸುತ್ತಿದ್ದರೂ ಅವನದರಲ್ಲಿ ಸಫಲವಾಗಲಿಲ್ಲ. ಅವನ ಕಣ್ಣುಗಳಲ್ಲಿ ಚಿಮ್ಮುತ್ತಿದ್ದ ಒಲುಮೆಯನ್ನು ಮರೆಮಾಚಲಾಗಲಿಲ್ಲ.

ಅವಳು ಏನಾದರೂ ಹೇಳಲಿ ಎಂದು ಕಾದಿದ್ದನು.

ಅವಳು ಅವಳ ಟ್ರೇಡ್ ಮಾರ್ಕ್ ಆದ ಗಾಂಭೀರ್ಯವನ್ನು ಬಿಟ್ಟುಕೊಡಲಿಲ್ಲ.

’ಅಹಂಕಾರವೆಂದುಕೊಳ್ಳಲಿ, ಪರವಾಗಿಲ್ಲ. ಏನಿದ್ದರೂ ಕಾಲ ಮೀರಿ ಹೋಗಿದೆ! ನನ್ನ ಅಸಹಾಯಕತೆ, ವಿಧಿಯ ವಂಚನೆ.. ಮತ್ತೆ ಅವನ ತಪ್ಪೂ ಇವೆ! ಅರ್ಥ ಮಾಡಿಕೊಳ್ಳಲು ಅವನಿಗೆ ಅಂದು ಸಾಧ್ಯವಾಗಲಿಲ್ಲ, ಇಂದೂ ಸಾಧ್ಯವಾಗುವುದೂ ಇಲ್ಲ.’

“ಮೂವತ್ತು ವರ್ಷದ ನಂತರ ನೀನು ನನ್ನ ತಪ್ಪು ಹೇಳಲೆಂದೇ ಭೇಟಿಯಾಗಲು ಬಂದಿಯಾ?”

ಅಷ್ಟು ಮಾತ್ರ ಹೇಳಲು ಅವಳಿಗೆ ಸಾಧ್ಯವಾಯಿತು.

“ಒಹ್! ನೀನೇನೂ ಹೇಳದಿದ್ದರೂ ಆಗ ನೀನು ನನ್ನಿಂದ ಮರೆಮಾಚಿದ್ದ ಭಾವವನ್ನು ಇಂದಿಗೆ ನಾನು ಓದಿದೆ! ಸಾಕು, ನನಗೆ ಬೇಕಾದದ್ದು ತಿಳಿಯಿತು! ಮುಂದಿನ ಜನ್ಮದಲ್ಲಿ ನನ್ನಿಂದ ತಪ್ಪಿಸಿಕೊಳ್ಳಲಾರೆ! “
ಅಂದಿನ ದಿನಗಳಲ್ಲಿ ಕುತ್ತಿಗೆ ಅಡ್ಡ ಹಾಕಿದಂತೆ ಹಾಕುತ್ತಾ ತುಂಟನಗೆ ನಕ್ಕನು.

ಐವತ್ತು ವರ್ಷದ ಪ್ರೌಢನು ಇದ್ದಕ್ಕಿದ್ದಂತೆ ಚಿಗುರು ಮೀಸೆಯ ಯುವಕನಾದಂತೆ ಕಂಡನು!

’ಆಮೆನ್!’

ಬೆಳ್ಳಿಕೂದಲ ನಲ್ವತ್ತೈದರ ಯುವತಿ ಅವನಿಗೆ ಬೆನ್ನು ಹಾಕಿ ಮತ್ತೆ ಹಿಂದಿರುಗಿ ನೋಡದೇ ನಡೆದಳು! ಆದರೂ ಅವಳ ಕಣ್ಣಂಚಿನ ಹನಿ ಅವನಿಗೆ ಕಂಡಿತ್ತು!

-ಅವಳ ಡೈರಿಯ ಅರೆಬರೆ ಮಾತುಗಳ ಆಧಾರಿತ


1 comment:

SANTOSH KULKARNI said...

Tumba chennagi barediddira shiela ravare...
e ghatane pratiyobbara balinalli prokshavagi nadeyuvanthadde....

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...