“ಅವರು”, “ಇವರ ಬಗ್ಗೆ ಎಚ್ಚರವಿರು” ಅಂತ ಎಲ್ಲರಿಗೂ
ಹೇಳುತ್ತಿರುವರಂತೆ,
ಆ ಎಲ್ಲರೂ “ಇವರಿಗೆ” ಅದನು ಹೇಳಿದರಂತೆ,
“ಇವರು” ಅದನ್ನೆಲ್ಲ ಕೇಳಿಯೂ ಮನಸ ಕೆಡಿಸದೆ “ಅವರ”
ಮಾತುಗಳಿಗೆ ಮೆಚ್ಚುಗೆ ಪ್ರತಿಕ್ರಿಯೆಗಳನು ಎಂದಿನಂತೆ ನೀಡುತ್ತಿರುವರಂತೆ.
ಅದ್ಯಾಕೆ “ಇವರು” ನೇರವಾಗಿ “ಅವರ” ಬಳಿ ಹೀಗೆಲ್ಲಾ
ಮಾಡುವಿಯೇಕೆ ಎಂದು ಕೇಳುವುದಿಲ್ಲವೇಕಂತೆ,
ನಡೆಯುವುದನ್ನೆಲ್ಲಾ ನೋಡಿ ಅರಿತೆ ಇದೆಲ್ಲಾ ಮೇಲಿನವನ
ಆಟವಂತೆ!
No comments:
Post a Comment