ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

12 June, 2014

ಆಹ್ವಾನ ತಗೊಳ್ಳಿ, ನೋಡಿ ಗಂಡು ಹೆಣ್ಣು ಒಬ್ಬರೊಳಗೆ ಒಬ್ಬರಿದ್ದು ಹೇಗೆ ಭಾವಗಳ ತಿಕ್ಕಾಟ ನಡೆವುದು..

ಜಗವೊಂದು ನಾಟಕ ಮಂದಿರ, ಮತ್ತು "ಗಂಡು" "ಹೆಣ್ಣು" ಇಲ್ಲಿ ಸಮಾನ ಪಾತ್ರಧಾರಿಗಳು. ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸಲು ಬರುತಾರೆ ಮತ್ತು ನಿರ್ಗಮಿಸುತ್ತಾರೆ. ಗಂಡು ತನಗಿತ್ತ ಸಮಯದಲ್ಲಿ ಅನೇಕ ಪಾತ್ರಗಳನ್ನು ಅಭಿನಯಿಸುತ್ತಾನೆ, ಪ್ರೇಕ್ಷಕ ಬಂಧುಗಳೇ, ಸಾವಧಾನವಾಗಿ ಕೇಳಿ ತನ್ನೊಳಗಿರುವ ನಯ ನಾಜೂಕು ಭಾವಗಳ ಮೂರ್ತಿಯಾದ ಹೆಣ್ಣಿನ ಪಾತ್ರವನ್ನೂ ಸಹ ಆತ ಚೆನ್ನಾಗಿ ನಿರ್ವಹಿಸುತ್ತಾನೆ.

ಎಲ್ಲಾ ಹೆಣ್ಣಿನೊಳಗೂ ಗಂಡಿನ ಧೈರ್ಯ, ಶೌರ್ಯ,ಬಲವೂ ಅಡಗಿದೆ ಎಂಬುದು ಹೆಚ್ಚಿನವರು ಅರಿಯರು.. ಹೆಣ್ಣಿನೊಳಗೊಂದು ಗಂಡು, ಬಾಲಕಿಯೊಳಗೊಂದು ಬಾಲಕ... ಹ್ಮ್,ಇದೇ ಕಾರಣವಿರಬಹುದೇ, ಆಕೆ ತನ್ನೊಳಗೆ ಬೆಳೆಯುವ ಗಂಡು ಗರ್ಭಗಳಿಗೂ ತನ್ನ ನಾಜೂಕು ಭಾವಗಳ ಸಿಂಚನ ಮಾಡಿರುವುದು!

ಹಾಗಾದರೆ ಗಂಡು ಗಂಡೇ, ಹೆಣ್ಣು ಹೆಣ್ಣೇ.. ಎನ್ನಲಾಗುವುದಿಲ್ಲವಲ್ಲ!

ಅರೇ ಇದನ್ನು ಹೇಗೆ ನಿರೂಪಿಸುವಿರಿ ಎಂದು ಕೇಳುವಿರಾ...

ತಡಿರಿ, ತಡಿರಿ,

ಮಂಗಳ ಗ್ರಹದಿಂದಿಳಿದ ಗಂಡು ಮತ್ತು ಶುಕ್ರ ಗ್ರಹದಿಂದಿಳಿದ ಹೆಣ್ಣೇ ಹೇಳ್ತಾರೆ,

ಒಟ್ಟಾರೆ ನಿಮ್ಗೆ ತಾಳ್ಮೆ ಮತ್ತು ಸಮಯ ಬೇಕು.

ಇದೆ ಅನ್ತಿರಾ..

ಹಂಗಾರೆ,

"ಹೆಜ್ಜೆ", ಬೆಂಗಳೂರು ಪ್ರಸ್ತುತ ಪಡಿಸುವ
ಮುಂಬೈನ "ಶಬ್ದ ಗುಚ್ಛ" ತಂಡದ ನಾಟಕ

"ಮಾಯಾವಿ ಸರೋವರ"

ನೋಡಲು ಬನ್ನಿ!

ಮೂಲರಚನೆ; ಡಾ. ಶಂಕರ್ ಶೇಷ್
ಕನ್ನಡಕ್ಕೆ; ನಟರಾಜ
ನಿರ್ದೇಶನ; ಅಹಲ್ಯಾ ಬಲ್ಲಾಳ್

ತಾರೀಕು 21-06-2014
ಸ್ಥಳ; ಕೆ.ಎಚ್. ಕಲಾಸೌಧ, ಬೆಂಗಳೂರು
ಸಮಯ; ಸಂಜೆ ಗಂಟೆ 7.00

{ಮಿತ್ರ ಮನೋಹರ್ ನಾಯಕ್ ಅವರ ಮೂಲ ಆಂಗ್ಲ ಮಾತನ್ನು ಕನ್ನಡದಲ್ಲಿ ಭಾವಾನುವಾದ ಮಾಡಿದ ಈ ಪಾಮರಳ ತಪ್ಪೇನಾದರೂ ಇದ್ದರೆ ಕ್ಷಮಿಸಿ, ಮತ್ತು ನಾಟಕ ನೋಡಿ ಪ್ಲೀಸ್, ತಂಡದಲ್ಲಿ ದೃಶ್ಯ ರೂಪದಲಿ ಇಲ್ಲದಿದ್ದರೂ ಅದೃಶ್ಯವಾಗಿಯೆ ಇದ್ದು ಭಾಗಿಯಾಗಿರುತ್ತೇನೆ. ನನ್ನೊಡೆಯನು ಯಶಸ್ಸನ್ನು ನೀಡಲಿ ಎಂದೇ ಸವಿನಯದ ಪ್ರಾರ್ಥನೆ}1 comment:

santosh kulkarni said...

indirect agi nataka prachara mado kelasa madtidira e blogdinda....Good work...

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...