ದ್ವಂದ್ವ ನೀತಿಗಳು!!!
----------------
“ಅವಳಿಗೆ ಇಂಗ್ಲಿಷ್ ಸರಿಯಾಗಿ ತಿಳಿದಿಲ್ಲ.”
ಸ್ವರದಲ್ಲಿ ತಿರಸ್ಕಾರದ ಭಾವ ಎದ್ದು ತೋರುತಿತ್ತು!
’ಅರೇ! “ಕನ್ನಡ ನನ್ನ ಪ್ರಾಣ” ಎಂದವರು ಇವರೇ ತಾನೇ! “
ಹ್ಮ್, ದ್ವಂದ ಹೇಳಿಕೆಗಳು! ತೋರಿಕೆಗೆ, ಸ್ಟೇಟಸ್ಸಿಗೆ
ಕನ್ನಡ ಪ್ರೀತಿ... ಒಳಒಳಗೆ ಪರಭಾಷಾ ವ್ಯಾಮೋಹ!
“ಹಲೋ, ನಾನೂ ನಿಮ್ಮದೇ ಜಾತಿ!”
ಸುಮ್ಮನೆ ನಸುನಕ್ಕೆ ಈ ಮೆಸೇಜಿಗೆ.
ಕೆಲವು ದಿನಗಳ ನಂತರ ಓದಿದ ಅವರ ಸ್ಟೇಟಸ್-
“ಯಾಕಪ್ಪಾ ಇವರೆಲ್ಲ ಮೇಲ್ಜಾತಿ ಕೀಳ್ಜಾತಿ ಅಂತ
ಬಡ್ಕೊಳ್ತಾರೋ.. ನನಗಿದರಲೆಲ್ಲ ನಂಬಿಕೆ ಇಲ್ಲ.... “
ಇನ್ನೂ ಏನೆಲ್ಲಾ ಬರೆದಿದ್ದರು, ಓದುವ ತಾಳ್ಮೆ
ನನಗಿರಲಿಲ್ಲ.
“ಕೆಲವರು ಫೇಸ್ ಬುಕ್ ಅಂದರೆ ಕ್ರಿಮಿ ಕೀಟ, ಪ್ರಾಣಿ
ಪಕ್ಷಿ, ಹೂಗಳ ಛಾಯಾ ಚಿತ್ರ ಹಾಕಿ ಮೆಚ್ಚುಗೆ ಗಳಿಸುವ ತಾಣ ಅಂದ್ಕೊಂಡಿದ್ದಾರೆ..”
ನನಗೆ ಅನ್ವಯವಾಗುವಂತೆ ಸ್ಟೇಟಸ್ !
ಅವರ ಹೊಗಳಿಕೆಗೆ ಮಾರುಹೋಗದೆ ನಿರ್ಲಿಪ್ತತನ
ತೋರಿಸಿದಕ್ಕೆ ಸೇಡಿನ ಸ್ಟೇಟಸ್!
ಕೆಲವೇ ದಿನಗಳ ನಂತರ
ಮಹಿಳೆಯೊಬ್ಬರು ಹಾಕಿದ ಹೂವಿನ ಚಿತ್ರಕ್ಕೆ ವ್ಹಾ ವ್ಹಾ... ಗಳ ಸುರಿಮಳೆ!
ಹ್ಮ್,
ಕಲಿಯಲು ತುಂಬಾ ಇದೆ,, ನಲ್ವತ್ತೈದು ವರ್ಷಗಳಲ್ಲಿ ಕಲಿಯಲಾಗದನ್ನು ಫೇಸ್ ಬುಕ್ ಎರಡೇ ವರ್ಷಗಳಲ್ಲಿ
ಕಲಿಸಿದೆ!
No comments:
Post a Comment