ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

14 October, 2013


  

  
ಕವನಗಳ ಬರೆದೆನೆನ್ನುವ ಮೂಢ(ಢಿ) ನಾನು!
-------------------------------

ಹಸಿರೆಲೆ ಪೊತ್ತು ಮುದ ಕೊಡುವವಳೇ
ಸುಂದರ ಕವನವನು ಇವಳಂತ್ಯಾರೂ ಬರೆದಿರುವರೇ

ಒತ್ತೊತ್ತಾಗಿ ಒಡಲಲಿ ಬಚ್ಚಿಟ್ಟುಕೊಂಡಿರುವ ಹಸಿವು
ಸಿಹಿಯಾಗಿ ಹರಿಯುತಿರುವ ನೆಲಕೆ ಮುದವೀಯುವುದು

ಅವನ ನೋಡುತ ನಿತ್ಯ ಆಗಸದತ್ತ ನೋಟ
ಹಸಿರೆಲೆಯ ಬಾಹುಗಳ ಜೋಡಿಸುತ ನಮನ

ವೈಶಾಖದಲಿ ಹಗಲಿಡೀ ಉರಿಯುವ ರವಿ
ದೃಷ್ಟಿಗೆ ಉದುರಿದವು ಎಲೆಗಳು ಬೆದರಿ

ಗುಬ್ಬಿಗಳ ಗೂಡು ಅವಳ ಮುಡಿಯಲಿ
ಮಾಗಿಗುದುರುವ ಮಂಜಿನ ಮುತ್ತು ಹನಿಗಳಲಿ

ಮುಸಲ ಧಾರೆಗೆ ಎದೆಯೊಡ್ಡಿ ಒಲವಿನಲಿ
ಮತ್ತೆ ಹಸಿರು ಮೊಳಕೆ ಮಡಿಲಲಿ

ಕವನಗಳ ಬರೆದೆನೆನ್ನುವ ಮೂಢ ನಾನು
ಅವನೋ ಹಸಿರೆಲೆಗಳ ಸಂಕುಲವನೇ ಸೃಷ್ಟಿಸಿದವನು!

I think that I shall never see
A poem as lovely as a tree.

A tree whose hungry mouth is prest
Against the earth’s sweet flowing breast;

A tree that looks at God all day,
And lifts her leafy arms to pray;

A tree that may in summer wear
A nest of robins in hair;

Upon whose bosom snow has lain
Who intimately lives with rain

Poems are made by fools like me,
But only God make a tree.
-Joyce Kilmer


2 comments:

ಮನದಾಳದಿಂದ............ said...

ತುಂಬಾ ಸುಂದರವಾಗಿ ಅನುವಾದ ಮಾಡಿದ್ದೀರಿ. ಅರ್ಥಪೂರ್ಣ ಹಾಗು ಭಾವಪೂರ್ಣವಾದ ಪದಗಳ ಜೋಡಣೆ.

Very Nice

Sheela Nayak said...

ಎಲ್ಲರೂ ಬರೆಯುವವರೇ ಆಗಿ ಓದುಗರೇ ಕಮ್ಮಿಯಾಗಿಬಿಟ್ಟಿದ್ದಾರೆನ್ನುವ ಭಾವದಲ್ಲಿದ್ದಾಗ.. ಪ್ರವೀಣ್ ನೀವು ನನ್ನ ಬರಹಗಳನ್ನು ಓದುದಷ್ಟೇ ಅಲ್ಲದೆ ನಾಲ್ಕು ಮೆಚ್ಚುಗೆ ಮಾತೂ ಬರೆಯುತ್ತಿದ್ದಿರಿ! ಸಾಕು ನನಗೆ, ನನ್ನಂತವರಿಗೆ! ತುಂಬು ಮನದ ಧನ್ಯವಾದ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...