ಅನುಭವದ ಮೂಸೆಯಿಂದ ಮತ್ತಿಷ್ಟು ಪುಟವಿಟ್ಟಂತಾಗುವಿ ಕೂಸೆ!
---------------------------------------------------
“ಅಮ್ಮಾ, ಹಳದಿ ಹುಡಿ, ಕಾಫಿ ಪೌಡರ್, ಪೆನ್ ಟಾರ್ಚ್, ನಿಂಬೆ ಹಣ್ಣು, ಹಿಂಗು.. ಎಲ್ಲಾ ರೆಡಿ ಮಾಡಿ ಇಡ್ತಿಯಾ ಪ್ಲೀಸ್? “
ಮಗಳು ಕೇಳಿದಾಗ,
“ಏನೇ, ಪ್ರಾಕ್ಟಿಕಲ್ ಎಕ್ಸಾಮ್ ಅಂದ್ರೆ ಪೇಶೆಂಟಿಗೆ ಕಾಫಿ, ನಿಂಬೆ ಜ್ಯೂಸು, ತಿಂಡಿ ತೀರ್ಥ.. ಎಲ್ಲಾ ಮಾಡಿಕೊಡ್ಲಿಕ್ಕೆ ಉಂಟಾ! ಅಲ್ಲ, ಮನೇಲಿ ಒಂದು ಕೆಲಸ ಮಾಡು ಅಂದ್ರೆ ಮುಖ ಊದಿಸ್ತಿಯಾ! ಈಗ ಅಡುಗೆ ಸಾಮಾನೆಲ್ಲ ಕಾಲೇಜಿಗೆ ತೆಗೆದುಕೊಂಡು ಹೋಗಿ ಏನ್ ಮಾಡ್ತಿಯಾ! “
ಅಂದ್ರೆ ಮತ್ತೆ ಮುಖ ಊದಿಸಿದ್ಲು!
“ಮೊನ್ನೆನೇ ಅಂದಿದ್ದೆ ನಿಂಗೆ! ನಂಗೆ ಪೇಶೆಂಟ್ ಸೆನ್ಸ್ ಟೆಸ್ಟ್ ಮಾಡ್ಲಿಕ್ಕೆ ಅವೆಲ್ಲಾ ಬೇಕಾಗುತ್ತೆ ಅಂತ.. ನೀನೋ ನಿನ್ನ ಸ್ಟೇಟಸ್ ಅಪ್‍ಡೇಟ್ ಮಾಡ್ತಿದ್ದಿ! ತಲೆ ಅಲ್ಲಾಡಿಸಿದ್ದಿ ಮತ್ತೆ.. ನಂಗೆ ಡೌಟಿತ್ತು, ನೀನು ನಾನು ಹೇಳಿದ್ದು ಕೇಳಿದ್ದಿಯಾ ಇಲ್ವಾ ಅಂತ!”
“ಒಹ್!”
ನನ್ನ ತಲೆ ನಾನೇ ಕುಟ್ಕೊಂಡೆ! ಹೌದು ಅವಳು ಹೇಳಿದ್ಲು, ನಾನೇ ಮರೆತಿದ್ದೆ!
ಎಲ್ಲಾ ತಯಾರು ಮಾಡಿಕೊಟ್ಟೆ..
“ಅಮ್ಮಾ! “
ಸಂಜೆ ಮನೆಗೆ ಬಂದವಳೇ.. ಬ್ಯಾಗ್‍ನ್ನು ದೊಪ್ ಅಂತ ಮಂಚದ ಮೇಲೆ ಒಗ್ದು,
“ಇದು ನಮಗೆ ಮೊದಲನೆ ಬಾರಿ ಅಂತ ಗೊತ್ತಿದ್ದರೂ ಹುರಿದು ಮುಕ್ಕುತ್ತಾರೆ..!”
ನಿರಾಸೆ, ಕೋಪ, ದುಃಖ ಎಲ್ಲಾ ಕಣ್ಣಲ್ಲಿ ಮಡುಗಟ್ಟಿತ್ತು.. ಪೇಲವವಾಗಿತ್ತು ಮುಖ!
ಮೌನವಾಗಿ ಅವಳತ್ತ ಮುಂದುವರಿಸು ಎಂಬಂತೆ ನೋಡಿದೆ!
“ನಂಗೆ ಒಬ್ಬ ಸ್ಟ್ರೋಕ್ ಅಟಾಕ್ ಆದ ಅಜ್ಜ ಪೇಶೆಂಟ್! ಅವನಿನ್ನೂ ಔಷಧಿಗಳ ಅಮಲಿನಲ್ಲಿದ್ದ.. ಮೊದಲೇ ನರ್ವಸ್ ಆಗಿದ್ದೆನ್ನಲ್ಲ,
ಅವನ ಮಗನನ್ನು ಯಾವಾಗಿನಿಂದ physio treatment ಶುರು ಆಗಿದೆ ಅಂದ್ರೆ ಸರಿ ಉತ್ರ ಇಲ್ಲ.. ಏನು ಕೇಳಿದ್ರು ಸರಿ ಗೊತ್ತಿಲ್ಲ. ಕೊನೆಗೆ Patient history ನೋಡಿದ್ರೆ ಅದು ಇನ್ನೂ confusion..!”
“ಕೈಯ ಮೇಲಿನ ಭಾಗ ಮುಟ್ಟಿ ಕೇಳಿದೆ, ನೋವುಂಟ.. ತಲೆ ಅಲ್ಲಾಡಿಸಿದ್ರು.. ಕೆಳಭಾಗ ಮುಟ್ಟಿದ್ರೆ- ಮತ್ತೆ ನನ್ನ ಮುಖ ಸುಮ್ನೆ ನೋಡಿದ್ರು.. ಮತ್ತೆ ಬೆರಳು ಮುಟ್ಟಿದ್ರೆ, ಏನೋ .. ಅಂದ್ರು!
ಕಾಫಿ ಪೌಡರ್, ಹಳದಿ ಹುಡಿ, ನಿಂಬೆ ಎಲ್ಲಾ ಮೂಸ್ಲಿಕ್ಕೆ ಕೊಟ್ಟೆ.. ಪಾಪ ಮೂಸಿದ್ರು. ಏನೋ ಪರಿಮಳ ಬರುತ್ತೆ, ಏನಂತ ಗೊತ್ತಿಲ್ಲ ಅಂದ್ರು. ಅದನ್ನು ಸರ್‌ಗೆ ತೋರಿಸಿದ್ರೆ, ಏನಿದು-patient smelled and sensed but couldn’t recognize the given item! ಹೀಗೆ ಏನೇನೋ ಪ್ರಾಬ್ಲೆಮ್!!!
“ಏನೋ ಗೊತ್ತಿದ್ದಷ್ಟು ಬರ್ಕೊಂಡು ಸರ್ ಮೇಮ್‍ಗೆ ತೋರಿಸಿದರೆ, ಅವರು ಹೀಗೆನಾ ಹಾಗೆನಾ ಅಂತ ಗೇಲಿ ಮಾಡಿದ್ರು.. ಗೊತ್ತಿದ್ದನ್ನೂ ತಪ್ಪು ಬರೆದುಬಿಟ್ಟೆಂತ ಗೊತ್ತಾಗಿ ನಂಗೆ ತಡೆಯೊಕ್ಕಾಗಲಿಲ್ಲ.. ಅಲ್ಲೇ ಕುಸಿದು ಕುಳಿತು ಮುಖ ಮುಚ್ಚಿ ಶುರುಮಾಡ್ಬಿಟ್ಟೆ! ಅವರು ಸಮಾಧಾನ ಮಾಡಿದಷ್ಟು ಗಂಗೆ ಇಳಿತಿದ್ಲು.. ಕೊನೆಗೆ vivaಗೂ ಬಿಕ್ಕುತ್ತಾ ಉತ್ರ ಕೊಟ್ಟೆ. Today was my worst day Amma! How could I've done this! ಇಡೀ ರಾತ್ರಿ ಓದಿದ್ದು ವೇಸ್ಟ್! “
“ಇದೆಲ್ಲಾ ಇದ್ದಿದ್ದೇ, ಈಗ ಕಾಫಿ ಮಾಡ್ತೇನೆ. ಕುಡ್ದು ಮಲಗು. ಮತ್ತೆ ಏಳು ಗಂಟೆಗೆ ಎದ್ದು ನಾಳಿನ ಪರೀಕ್ಷೆಗೆ ಓದು. ಅನುಭವ ಕಲಿಸುತ್ತದೆ. ಇವತ್ತಿಗಿಂತ ನಾಳೆ ಬೆಟರ್ ಮಾಡಬಹುದು. ಇವತ್ತಿನ neurologyಗಿಂತ ನಾಳಿನ orthopedics ಚೆನ್ನಾಗಿ ಮಾಡು!”
ಅಲ್ವಾ ನೀವೇ ಹೇಳಿ, ಅಷ್ಟೇ ತಾನೇ ನಾ ಹೇಳ್ಬಹುದು!
No comments:
Post a Comment