ಬರೀ ಗೂಢ..
ನಿಗೂಢ..
ಎಂಥದೀ ಬದುಕು
ಅಯ್ಯೋ..
ನಗಿಸಿದರೆ
ಕೆಲವೊಮ್ಮೆ
ಅಳಿಸುವುದು
ಮಗದೊಮ್ಮೆ||
ಎಚ್ಚರವಿಲ್ಲವೀ
ಮನಕೆ ಕೆಲವೊಮ್ಮೆ
ಕಂಡ ಕನಸುಗಳ ಹಿಂದೆ
ಓಡೋಡಿ
ಕನಸುಗಳ ಹಾದಿಯೇ ಮುಂದೋಡಿತು
ಕನಸುಗಳ
ಹಿಂದಿಕ್ಕಿತು ಒಂದು ದಿನ||
ಸಿಂಗರಿಸಿದರವರು
ಮನದಲ್ಲೊಂದು ಉತ್ಸವ
ನೋವು-ನಲಿವನೂ
ಹಂಚಿಕೊಂಡರು
ಆರಿಸಿದರು ಅವರೇ ಮೌನ
ಮತ್ತೆ
ನಡೆದರು ಎತ್ತಲೋ
ಒಂಟಿಯಾಗಿ||
No comments:
Post a Comment