ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

11 October, 2013

ಶಾಯರಿ ಭಾವಾನುವಾದ-4

ರೆಪ್ಪೆಗಳ ಹಿಂದಡಗಿಸಿದ್ದೆ ಹನಿಗಳನ್ನು
ನಗಲು ಬಯಸಿದೆನಾದರೂ ಅರಿವಿಲ್ಲದೆ
ನಿನ್ನ ನೋಡಿ ರೆಪ್ಪೆಯಂಚಿಗೆ ಸರಿದವು
ಅರಿವಾಯಿತೋ ಇಲ್ಲವೋ ನಿನ-
ಗದರ ಎಂಬರಿವೂ ನನಗಿಲ್ಲ
ನೀನತ್ತ ತೆರಳಿದ ಬಳಿಕ  
ಮತ್ತೆ ಕಾಡಿತು ಹಳೆಯ
ಆ ಮಧುರ ದಿನಗಳ ನೆನಪು
ಒಲವಿನ ನೆನಪಲಿ ಕಣ್ಣೀರ
ಕೋಡಿ ಹರಿಯಿತು
ನಿನಗಾಗಿ ಅವನಲಿ
ಪ್ರಾರ್ಥಿಸಿತು ಮನಸು
ಸುಖ ಸಂಭ್ರಮ
ಸದಾ ನಿನ್ನ ಪಾಲಿಗಿರಲಿ
ಎಂದೂ ಹನಿ ಜಾರದಿರಲಿ!

Bighi palkon tale hum ne chupae ansoo, hasna chaha maghar ankh me ae ansoo, tum ko malum shaed ho ki na ho, tere jane pe bhohat hum ne bahae ansoo, jo tere sangh bite the vo din yaad bhohat ae, hum ne injame muhabat pe bahae ansoo, tu sada khush rahe,abad rahe, khuda lare ki teri ankh me kabhi ek bhi na ae ansoo..


3 comments:

ಮನದಾಳದಿಂದ............ said...

ತುಂಬಾ ಚನ್ನಾಗಿದೆ........

ಭಾವಪೂರ್ಣ ಭಾವಾನುವಾದ...........

Sheela Nayak said...

ನಮಸ್ತೆ ಪ್ರವೀಣ,

ನಿಮಗೆ ಮೆಚ್ಚಿಗೆಯಾಯಿತೆಂದು ತಿಳಿದು ಆನಂದವಾಯಿತು!

Unknown said...

ಸೂಪರ ಮೇಡಂ.

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...