ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

13 October, 2013

ಮಾತು-ಮೌನ..

-
ಮಾತು ಬೆಳ್ಳಿ,  ಮೌನ ಬಂಗಾರ ಅನ್ನುತ್ತದೆ ಲೋಕ;
ನಾನನ್ನುವೆನು,
ಮೌನ ಅಹಿತ, ಮಾತು ಹಿತ||
ಮೌನ ನೋವು, ಮಾತು ನಲಿವು||
ಮೌನ ಅಮವಾಸ್ಯೆ, ಮಾತು ಬೆಳದಿಂಗಳು||
ಮೌನ ಗುಡುಗು ಮಿಂಚು, ಮಾತು ಹೂಮಳೆ||
ಮೌನ ಗಾಢಾಂಧಕಾರ, ಮಾತು ಉಜ್ವಲ ಪ್ರಭೆ||
ಮೌನ ತಾಂಡವ, ಮಾತು ಮಣಿಪುರಿ (ನೃತ್ಯ)||

ಮೌನ ತಿರಸ್ಕಾರಮಾತು ಸ್ವೀಕಾರ||

2 comments:

ಶ್ರೀವತ್ಸ ಕಂಚೀಮನೆ. said...

ನಾನೂ ಅದನ್ನೇ ಹೇಳುತ್ತೇನೆ...

Sheela Nayak said...

ಬಚಾವ್ ನನ್ನ ಮಾತನ್ನು ಒಪ್ಪುವವರೂ ಇದ್ದಾರೆ! ಥಾಂಕ್ಸ್ ಶ್ರೀವತ್ಸ ಪುಟ್ಟ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...