ಒಂದು ಇನ್ ಬಾಕ್ಸ್ ಸಂಭಾಷಣೆ..
----------------------------
ಅವಳು: ವ್ಹಾ! ಶೀಲಾ!!! ಏನು ಮೆಚ್ಚುಗೆಗಳು ಬರ್ತವೆ
ಈಗೀಗ ನಿಂಗೆ!
ನಾನು: ಏನು, ನೀನು ನನ್ನ ಪೋಸ್ಟ್‌ಗಳನ್ನೆಲ್ಲ
ನೋಡ್ತಿಯಾ?
ಅವಳು: ಅದೇ ನ್ಯೂಸ್ ಫೀಡ್‍ನಲ್ಲಿ ಬರ್ತವೆಯಲ್ಲ.. ಆಗ
ಮಾತ್ರ!
ನಾನು: (ಅಳಕುತ್ತ) ನಿಜ ಹೇಳು ನಿನಗೆ ನನ್ನ ಬರಹಗಳು
ಇಷ್ಟವಾಗ್ತದಾ? ನೀನು ಲೈಕ್ ಹಾಕೋದೇ ಇಲ್ಲ!
ಅವಳು: ಹ್ಹ ಹ್ಹ.. ನಿಜ ಹೇಳ್ಲಾ! ನಿಂಗೆ ನಾನು ಯಾರಂತ
ಗೊತ್ತಲ್ವಾ! ಅವು ಬಾಲಿಷ ಅಂತ ಕಾಣ್ತವೆ! ಅದಕ್ಕೆ ನಂಗೆ ಆಶ್ಚರ್ಯ ವಾಯಿತು! ಅಲ್ಲ, ಫೋಟೊ ಏನು ಒಂಚೂರು ಆಗ್ಬಹುದು.. ಆದರೆ, ಆ
ಕತೆಗಳು.. ನಗೆ ಬರ್ತದೆ!
ನಾನು: ಏ, ನಾನು ಕತೆ ಕಟ್ಟಿಲ್ಲ! ಅದೆಲ್ಲ ನಿಜವಾಗಿ
ನಡೆದದ್ದು ಕಣೇ!
ಅವಳು: ಸರಿ, ಅದೆಲ್ಲ
ಬರೆದು ನೀನು ಬರಹಗಾರ್ತಿ ಅಂತ ತಿಳ್ಕೊಳ್ತಿದ್ದಿಯಾ! First of all, ನಿನ್ನ ಮನೆಯಲ್ಲಿ ನಿತ್ಯ ನಡೆಯುವುದನ್ನೆಲ್ಲ ಏಕೆ
ಬರೆಯಬೇಕು? ಅದನ್ನೇಕೆ ಹಂಚಿಕೊಳ್ಳಬೇಕು.. ಅರ್ಥವಾಗ್ತಿಲ್ಲ!
ನಾನು: ನೋಡು, ಓದಲಿ
ಎಂದು ನಾನು ಹಾಕುವುದಿಲ್ಲ.. ಓದಿದರೆ ಖುಷಿ ಖಂಡಿತ ಇದೆ. ಓದದೇ ಇರುವ ನನ್ನ ಮಿತ್ರರೂ ಇದ್ದಾರೆ
ನೆನಪುಂಟಾ ಆ ಹಾಡು,
ನೀನೂ ನಾನೂ ನನ್ನ ಮಗನಿಗೆ ಹೇಳ್ಕೊಟ್ಟಿದ್ವಿ,
ಎದೆ ತುಂಬಿ ಹಾಡಿದೆನು
ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ
ನೀವು..
ಎಲ್ಲ ಕೇಳಲಿ ಎಂದು ನಾನು
ಹಾಡುವುದಿಲ್ಲ..
ಹಾಡುವುದು ಅನಿವಾರ್ಯ
ಕರ್ಮ ನನಗೆ
ಕೇಳುವವರಿಹರೆಂದು ಬಲ್ಲೆ
ನಾ ಅದರಿಂದ
ಹಾಡುವೆನೆ ಮೈದುಂಬಿ
ಎಂದಿನಂತೆ
ಯಾರು ಕಿವಿ ಮುಚ್ಚಿದರೂ
ನನಗಿಲ್ಲ ಚಿಂತೆ..
ಇನ್ನು ಒಂದು ಹೇಳ್ತೇನೆ
ಕೇಳು, ನಿಂಗೆ ಕಿರಿ ಕಿರಿ ಅನಿಸಿದರೂ ಪರವಾಗಿಲ್ಲ. ನೀನು ಇಷ್ಟೆಲ್ಲ ಆಕ್ಷೇಪ ಎತ್ತಿದ ಮೇಲೆ
ಅದನ್ನೂ ಕೇಳ್ಕೊಂಡು ಹೋಗು.
ಹೌದು, ಈ ಲೈಕ್‍ಗಳೆಲ್ಲ
ನನಗೇನು ಎಲ್ಲರಿಗೂ ಪ್ರಿಯವೇ.. ಮತ್ತೆ ಅದು commentಗೂ ಅಪ್ಲೈ ಆಗುತ್ತೆ. ನಿನಗೇನು ಆಫೀಸಿ ಹೋಗ್ತಿ.. ಅಲ್ಲಿ ಏನೇನೋ ಗೀಚ್ತಿ,
ನಿನ್ನ ಬಾಸು ಶಹಭಾಸ್ ಕೊಡ್ತಾರೆ.. ಮತ್ತೆ ನಿನ್ನ ಚೇಲಗಳು ಹ್ಮೂಗುಟ್ತವೆ!
ಆದರೆ, ನಮ್ಮಂತವರಿಗೆ,
ಅದೇ ನಾಲ್ಕು ಗೋಡೆಗಳ ಮಧ್ಯೆ ಇರುವವರಿಗೆ, ಅತ್ತ
ಒಳ್ಳೆ ಬರಹಗಾರರೂ ಅಲ್ಲ, ಇತ್ತ ಅಷ್ಟೇನು ಕೆಟ್ಟದೂ ಅಲ್ಲವೆನ್ನುವವರ ಮಾತುಗಳಿಗೆ ಬೆಲೆ ಎಲ್ಲಿ! ಬರುವ
ಲೈಕ್‍ಗಳನ್ನೆಲ್ಲ ನೋಡ್ತೇನೆ..
ನನ್ನವರು, ನನ್ನ ಅತೀ ಪ್ರಿಯ ಸ್ನೇಹಿತರು ಇರುವರೇ ಎಂದು
ನೋಡುತ್ತೇನೆ.. ಅಂತಹ ಲೈಕುಗಳೇ ನಿಜ ಬೋನಸ್ ಅಂಕಗಳು... ಇನ್ನು ಉಳಿದವರ ಬಗ್ಗೆ ಗೊತ್ತಿಲ್ಲದೆ
ನಾನು ಅದಕ್ಕೆ ಬೆಲೆ ಕೊಡುವಂತಿಲ್ಲ! ಸರಿ, ಇನ್ನೇನೂ ಉಳಿದಿಲ್ಲ.. ಬಾಯೈ
No comments:
Post a Comment