ಒಂದು ಸಂಭಾಷಣೆ..
----------------
“ಅಮ್ಮಾ, ಅದ್ಯಾಕೆ ನಂಗೆ ಅಳೆದು ಸುರಿದು ಮಾತನಾಡಲು
ಬರೊಲ್ಲ? ನೇರವಾಗಿ ಮನದಲ್ಲಿದ್ದುದನ್ನು ಮಾತನಾಡಿ ಕೆಟ್ಟವಳೆನಿಸಿಕೊಳ್ಳುತ್ತೇನೆ! Feeling very bad!”
ಮಗಳು ಹೇಳಿದಳು.
“ಅರೇ, ನೂಲಿನಂತೆ ಸೀರೆ ಅನ್ನೊಲ್ವಾ, ನೀನೇನು ಮಾಡಲು
ಸಾಧ್ಯ! ನಿನ್ನ ಅಮ್ಮನ ಬುದ್ಧಿ ನಿಂಗೆ ಬಂದ್ರೆ! ಏನಿದ್ರೂ ನೇರವಾಗಿ ಮನದಲ್ಲಿದ್ದುದನ್ನು
ತಿಳಿಸದೇ ಇದ್ರೆ ಅದು ಹೊಟ್ಟೆಯೊಳಗೇ ಉಳಿದುಕೊಂಡ್ರೆ ಅದೂ ಕಷ್ಟ! ಸ್ನೇಹ ಉಳಿಸಿಕೊಳ್ಳಲು
ಮನದಲ್ಲಿದುದನ್ನು ಮಾಚಿದ್ರೆ ಅದು ಸ್ನೇಹಕ್ಕೆ ದ್ರೋಹ! ಅವರದನ್ನು ಅರ್ಥಮಾಡಿಕೊಳ್ಳದಿದ್ದರೆ ಅದು
ನಿನ್ನ ದುರದೃಷ್ಟ!
ಇಲ್ಲ ಅಂದ್ರೆ, ಈಗ ನಾನೀಗ ಕಲ್ತ ಹಾಗೆ ಅಳೆದು ಸುರಿದು
ಮಾತನಾಡು... ಹೇಳ್ತಾರಲ್ಲ ಮಾತು ಮುತ್ತು, ಮೌನ
ಬಂಗಾರ.. ಮಾತನಾಡುವ ಕಲೆ ಗೊತ್ತಿಲ್ವಾ, ಮೌನವಾಗಿ ಇದ್ದುಬಿಡು. ಅದಕ್ಕಿಂತ ಹೆಚ್ಚು ನಂಗೆ
ಗೊತ್ತಿಲ್ಲ. ಈ ಎರಡು ವರ್ಷದಲ್ಲಿ ನಿನಗೆ ಎಷ್ಟೊಂದು ವಿಭಿನ್ನ ಮನಗಳ ಪರಿಚಯವಾಗಿದೆಯಲ್ವಾ!
ಕಲಿಯುತ್ತ ಹೋಗು.. ಬದುಕಿನಲ್ಲಿ ಬಂದು ಹೋಗುವ ಪಾತ್ರಗಳೇ ಪಾಠ ಕಲಿಸುತ್ತವೆ!”
No comments:
Post a Comment