ಸ್ನೇಹ, ಚರ್ಚೆ,
ಕತೆ.. ಒಂದು ರೀತಿ ಕಾಕ್ ಟೈಲ್ ಈ ಕತೆ!
---------------------------------------------
“ ’Women are like fruits.
Every one has its unique colour, shape, aroma and taste. The problem is .. men
like fruit salad!’
ಇದು ಬಹುಶಃ ನೀವು
ಈಗಾಗಲೇ ಸುಮಾರು ಸಲ ಓದಿರಬಹುದು.. ಅನೇಕ ವರ್ಷಗಳಿಂದ ಸರ್ಕ್ಯುಲೇಟ್ ಆಗ್ತಿದೆಯಂತೆ. ನಾನು
ಓದಿದ್ದು ಹಿಂದಿನ ವರ್ಷ! ಅದೂ ಒಬ್ಬ ಪುರುಷ ಮಿತ್ರರಿಂದಲೇ ಬಂದಿತ್ತು! ನಿಮ್ಮ ಅಭಿಪ್ರಾಯ ಏನೆಂದು
ಹೇಳ್ತಿರಾ ಅಣ್ಣ!”
ಹೌದು, ಬಹುಶಃ
ಅವರೊಬ್ಬರ ಬಳಿಯಲ್ಲಿ ಮಾತ್ರ ನಾನು ಯಾವುದೇ ಅಡೆತಡೆಗಳಿಲ್ಲದೆ ಮುಕ್ತವಾಗಿ ಆರೋಗ್ಯಕರ ಚರ್ಚೆ
ನಡೆಸಬಲ್ಲೆ. ತಮ್ಮ ಬಗ್ಗೆ ಖುಲ್ಲಂ ಖುಲ್ಲಾ ಆಗಿ ಹೇಳ್ಕೊಳ್ಳುವ ಅವರು ಅಷ್ಟೇ ಮೃದುವಾಗಿ
ನನ್ನಲ್ಲಿನ ತಪ್ಪನ್ನು ಎತ್ತಿ ತೋರಿಸಬಲ್ಲರು. ಬರೇ ಅಕ್ಷರ ತಪ್ಪುಗಳಿಗೆ ಅವರ ವಿರೋಧ ಹೊರತು ನನ್ನ
ಭಾವಗಳ ಹೊಮ್ಮುವ ಶಬ್ದಗಳಿಗೆ ಅವರ ಯಾವ ಕಮೆಂಟೂ ಇರಲ್ಲ. ಚಿತ್ರ, ಕವನ, ಕತೆ, ಫೋಟೊಗ್ರಾಫಿ, ಸಾಮಾಜಿಕ
ಕಳಕಳಿ, ಜತೆಗೆ ನಮ್ಮ ಸುತ್ತಮುತ್ತಲಿರುವ ಕಲಾಕಾರರಿಗೆ ಸಮಭಾವದ ಪ್ರೋತ್ಸಾಹ, ಸಮಾಜದ ಆಗುಹೋಗುಗಳ
ಮೇಲೆ ನೋಟವಿದ್ದರೂ ರಾಜಕೀಯ ಕೆಸರಾಟದಿಂದ ದೂರ.. ಯಾವುದೇ ಪಕ್ಷ, ವ್ಯಕ್ತಿಗಳ ಬಗ್ಗೆ ಯಾವುದೇ
ಕೆಟ್ಟ ಶಬ್ದಗಳ ಬಳಕೆಯಿಂದ ದೂರವಿದ್ದು ಹೆಚ್ಚಿನ ಗಮನ ಕಲಿಯುವುದು ಮತ್ತು ಹಂಚುವುದರಲ್ಲಿ
ಆಸಕ್ತಿ..
ಹೀಗೆ ಸಮ ಚಟವನ್ನಿ,
ಹವ್ಯಾಸವನ್ನಿ.. ಅದೊಂದು ನಿಧಾನವಾಗಿ ಬೆಸುಗೆ ಹಾಕಿ ಒಂದೇ ಕುಟುಂಬದ ಸದಸ್ಯರೆಂಬ ಭಾವ ತಂದದ್ದು
ನಿಜ. ಇಬ್ಬರು ತಮ್ಮಂದಿರಿರ ಅಕ್ಕಳಾದ ನನಗೆ ಅಕ್ಕ, ಅಣ್ಣ ಇಲ್ಲದ ಕೊರತೆ ಕಾಡುತಿತ್ತು. ಮನಸ್ಸು
ಅವರನ್ನು ಅಣ್ಣನೆಂದೇ ಸ್ವೀಕರಿಸಿತ್ತು.. ಅವರಲ್ಲಿ ಕೇಳಿದಕ್ಕೆ, ಕೊನೆಯ ಮಗನಾದ ಅವರಿಗೂ ಎಲ್ಲೋ
ಅಣ್ಣ ಸ್ಥಾನ ದೊರೆತಾಗ ಬೇಡವೆನ್ನಲಿಕ್ಕಾಗಲಿಲ್ಲ.
ನಾಲ್ಕು ದಿನ ಹೀಗೇ
ಏನೋ ಮನಸ್ಸಿನ ಕಿರಿ ಕಿರಿಯಿಂದಾಗಲಿ, ದೇಹಾಲಸ್ಯದಿಂದಾಗಲಿ ಮುಖ ಪುಸ್ತಕದಲ್ಲಿ ಕಾಣಿಸದಿದ್ದರೆ- “ಏನು
ಆರಾಮಿದ್ದಿರಲ್ಲಾ? “ ಪಿಂಗ್ ಮಾಡುತ್ತಿದ್ದರು.
ಮಗನ ಮನೆಯ
ವಿಲಾವರಿಗೆ ಬೆಂಗಳೂರಿಗೆ ಬಂದವಳಿಗೆ ಈ ಮಹಾನಗರದ ಧಾವಂತದ ಬದುಕನ್ನು ಕಂಡು ದಿಗಿಲಾಗಿತ್ತು.
“ಊಟಕ್ಕೇನು
ಮಾಡ್ತಿದ್ದಿರಿ ಅಮ್ಮ ಮಗಳು?”
ಹೀಗೆ ಇದ್ದ
ಪ್ರತೀದಿನವೂ ಫೋನು ಮಾಡಿ ಗಂಜಿ ಮತ್ತು ಸಲಾಡ್‍ನಲ್ಲಿ ನಮ್ಮ ಭೂರಿಭೋಜನವಾಗ್ತಿತ್ತು ಅಂತ ಬೇಜಾರು ಮಾಡ್ತಿದ್ರು..(
ಅಟ್‍ಲೀಸ್ಟ್ ಹಾಗಂತ ನಾನು ಅನಿಸಿಕೊಂಡು ಖುಷಿ ಪಡ್ತಿದ್ದೆ.)
ಹೊಸ ಮಂಚ, ಬೆಡ್
ತೆಗೆದುಕೊಳ್ಳುವುದು ಬೇಡ, ನಮ್ಮಲ್ಲೊಂದು ಇದೆ ಅಂದದು ಮಾತ್ರವಲ್ಲದೆ ಮಗನ ಮನೆಗದನ್ನು ತಲುಪಿಸಿ
ನನ್ನ ಪರ್ಸ್ ಭಾರ ಕಮ್ಮಿಯಾಗದಂತೆ ನೋಡಿಕೊಂಡ್ರು. ಮನೆಗೆ ಊಟಕ್ಕೆ ಕರೆದಾಗ ಬೇಡ ಸುಮ್ನೆ, ನಿಮ್ಮನ್ನು
ಕಾಮತ್ ನಿವಾಸಿಗೆ ಮಕ್ಕಳು ಸಮೇತ ಬಂದು ಭೇಟಿಯಾಗ್ತೇನೆ ಅಂದರೂ ಕೇಳಲಿಲ್ಲ!
ಸೊಪ್ಪುತಿನ್ನುವವಳ
ಮಕ್ಕಳು ಹಾಗಿಲ್ಲ ಅಂತ ಗೊತ್ತಾಗಿ ಸುಗ್ರಾಸ ಭೋಜನ.. ನನ್ನ ಮಗಳು ಚಿಕನ್ ಪ್ರಿಯೆ, ಮೂರು ದಿನದಿಂದ
ಅಮ್ಮನಿಂದ ಚಪ್ಪೆ ಊಟವಿತ್ತು.. ಆ ದಿನ ಅನ್ನಪೂರ್ಣೇ
ಲಲಿತ ವೈನಿಯವರ ಉಪಚಾರ, ಸ್ನೇಹ ಸ್ವಾತಿಯರ ಸ್ನೇಹಭರಿತ ನೋಟ, ಅಣ್ಣನವರ ತಿಳಿ ಹಾಸ್ಯ.. ಮನತುಂಬಿ
ಬಂತು. ನನ್ನ ಪರಿಚಯ ಎಷ್ಟೋ ಕಾಲದಿಂದದ್ದ ಹಾಗೆ ವೈನಿಯವರ ಮಾತುಕತೆ! ಪೂರ್ವಜನ್ಮದ ಫಲವಲ್ಲವೆ
ಇದು! ಇಂದು ಅವರ ಮನೆಯ ಮೀಯಾ, ಬರ್ನೀ ನನ್ನ extended family! ಮನಕ್ಕೆ ಸಿಕ್ಕಿದ ಸಂತಸವನ್ನು ಇಲ್ಲಿ ಕೆಲವೇ ಪದಗಳಲ್ಲಿ
ಹೇಳುವಷ್ಟು ತಾಕತ್ತೂ ಇಲ್ಲ ನನಗೆ!
ನಮ್ಮ ಮಧ್ಯದಲ್ಲಿ
ಥಾಂಕ್ಸ್, ಸಾರಿ ಮೊದಲಾದ ಶಬ್ದಗಳು ಬರುತ್ತಿರಲಿಲ್ಲ. ನಾನು ನಾನಾಗಿ ನನ್ನ
ಮನಸ್ಸಿನಲ್ಲಿದ್ದುದನ್ನು ನೇರವಾಗಿ ಹೇಳಿಬಿಡುತ್ತಿದ್ದೆ. ಇತ್ತೀಚಿನ ಅವರ ಕತೆ ಅಷ್ಟು ಮೆಚ್ಚದವಳು
ಬಹುಶಃ ನಾನು ಮಾತ್ರವೆಂದು ತೋರುತ್ತದೆ.
ಅವರ ಕತೆಗಳನ್ನು ನನ್ನದೇ ದೃಷ್ಟಿಯಲ್ಲಿ ನೇರ ವಿಮರ್ಶೆ
ಮಾಡ್ತಿದ್ದೆ, ನಂಗ್ಯಾವ ಸಂಕೋಚ ಇರ್ತಿರಲಿಲ್ಲ. ಅವರೂ ಅಷ್ಟೇ..
ಸ್ವಲ್ಪ ಸಿರಿಯೆಸ್
ಸ್ವಭಾವದಳಾದ ನಾನು ಈಗ ಪ್ರತಿಯೊಂದರಲ್ಲೂ ಹಾಸ್ಯ ನೋಡುವಷ್ಟು ಬದಲಾಗಿದ್ದೇನೆ. ಈಗ ಯಾರೂ ನನ್ನ
ಯಾವ ಸ್ಟೇಟಸ್‍ಗೂ ತಮಾಷೆಯ ಕಮೆಂಟು ಒಗೆದರೆ ಅದನ್ನು ಖುಷಿಯಿಂದ ಸ್ವೀಕರಿಸುವಂತಹ ಬದಲಾವಣೆ
ಬಂದುದು ಅವರ ಸಂಗದಿಂದ ಎಂದು ನಂಗೀಗ ಗ್ಯಾರಂಟಿ ಆಗಿದೆ!
ಹೆಚ್ಚು ಕಡಿಮೆ
ಒಂದ್ಹದಿನೈದು ದಿನಕೊಮ್ಮೆ ಚರ್ಚೆ ನಡೆಸ್ತೇವೆ. ಮೊನ್ನೆ ಈ ಮೇಲಿನ ಮೆಸೇಜು ಪುನಃ ನಂಗೆ
ಕಾಣಸಿಕ್ಕಿ ಮತ್ತೆ ದೆವ್ವ ಬಡಿದ ಹಾಗೆ ಅಯಿತು. ಈ ಸಲ ಚರ್ಚೆಗೆ ಹೊಸ ವಿಷಯ ಸಿಕ್ಕಿತು.. ಪುರುಷರ
ದೌರ್ಬಲ್ಯ ತೋರಿಸಿದಂತಾಯಿತು ಅಂತ ಅವರಿಗೆ ಕಳುಹಿಸಿ ಒಂದಿಷ್ಟು ಸಮರ್ಥನೆ, ನಿರಾಕರಣೆಯ ಉತ್ತರ
ನಿರೀಕ್ಷಿಸುತ್ತಿದ್ದವಳಿಗೆ ಬಂದ ಉತ್ತರ,
“ಅದು ಹೌದು!”
-
ಇಲ್ಲಿಗೆ ನಮ್ಮ
ಚರ್ಚೆ ಸಮಾಪ್ತಿಯಾತೆಂದು ತಿಳಿದರೆ ಅದು ತಪ್ಪು.. ಮುಂದಿನ ಭಾಗದಲ್ಲಿ ಮುಂದುವರಿಯುತ್ತದೆ! J
No comments:
Post a Comment