ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

08 August, 2013

ಮುಂಜಾವು ತರುವ ಅನುಭೂತಿ!

ನೀ ನನ್ನೊಳಗೋ? ನಾ ನಿನ್ನೊಳಗೋ?
ಇಲ್ಲ, ನಾವಿಬ್ಬರು ಅವನೊಳಗೋ?
ನಾ ಮೋಹದೊಳಗೋ? 
ಇಲ್ಲ, ಮೋಹ ನನ್ನೊಳಗೋ?
ಹ್ಮುಂ, ಮೋಹ ಆಸೆ ಆಕಾಂಕ್ಷೆ ಎಲ್ಲವು ನೀನಗೆಗಿತ್ತದಲ್ಲವೋ!

ಕಾಡುವ ಭಾವಗಳು ನನ್ನವೋ? 
ಇಲ್ಲ, ನೀ ನನ್ನ ಕಾಡಲೆಂದೇ ನೀಡುವ ಭಾವಗಳೋ?
ಗೋಡೆಗಳ ಮೇಲೆ ತೂಗಿಸಿ ತೋರಿ ತೋರಿ ಮೆರೆಯುವ ಚಿತ್ತಾರಗಳು
ನನ್ನೀ ಬೆರಳುಗಳ ಇಂದ್ರಜಾಲವೋ?
ಇಲ್ಲ, ನೀ ನನ್ನೊಳು ಸೇರಿ ಮೂಡಿಸುವ ಮಳೆಬಿಲ್ಲಿನ ಬಿಂಬವೋ?

ಎದೆ ತುಂಬಿ ಜಲಪಾತವಾಗಿ ಧುಮುಕಲು ಹೊರಟಿರುವ ಭಾವಗಳ
ಅಕ್ಷರ ಮಾಲೆ ನಾ ಪೋಣಿಸಿದ್ದು ನಿನಗಾಗಿಯೋ?
ನನ್ನ ಮೆಚ್ಚಿ ಹೊಗಳುವವರಾಗಿಯೋ?
ಅಲ್ಲಲ್ಲ, ಎಲ್ಲವೂ ನನ್ನಾತ್ಮದ ಉಸಿರಾಟಕ್ಕಾಗಿ!

ತನ್ನಿಳಿಯಳ ಕರೆಗೆ ನಿತ್ಯ ಕ್ಷಣಕ್ಕೊಮ್ಮೆ ಬದಲಾಯಿಸುವ
ರಂಗು ಚೆಲ್ಲುತ್ತಾ ಮೇಲೇರಿ ಬರುವವನು ಭಾನುವೋ?.
ಇಲ್ಲ, ಕಾರ್ಗತ್ತಲು ಕವಿದ ಬದುಕಿಗೆ ಹೊಸ ಭರವಸೆಯ
ಬೆಳಕನ್ನು ನಿತ್ಯವೀಯುತಾ ಹರುಷ ತುಂಬುವ ನನ್ನ ಮುಂಜಾವೋ?




-
ಅನಂಗನ ಮೋಹದ ಜಾಲಕೆ ಸಿಲುಕಿ, ಅನಿಲ್ ಗೆ ಮಾಯೆಯ ಮೋಹ ಕಾಡಿತೋ..
ಇಲ್ಲ ಅವರು ಮುಂಜಾವಿಗರನ್ನು ಕಾಡಿಸಿ
ನಮ್ಮೊಳಗಿನ ಮೋಹದ ಮುಸುಕನ್ನು ತೆರೆಯಲೆತ್ನಿಸಿದರೋ ಎಂದುಕೊಳ್ಳುತ್ತಲೇ ಇರುವಾಗ ಮೂಡಿತು ನನ್ನೊಳು ಹೊಸ ಮುಂಜಾವು.. ಅಲ್ಲಲ್ಲ ನಾನು ಮತ್ತೆ ಹುಟ್ಟಿದೆ ಇವತ್ತಿನ್ನ ಮುಂಜಾವಿನಲಿ!
ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ 
ನೀ ದೇಹದೊಳಗೋ, ನಿನ್ನೊಳು ದೇಹವೋ? 

ಬಯಲು ಆಲಯದೊಳಗೋ, ಆಲಯವು ಬಯಲೊಳಗೋ? 
ಬಯಲು ಆಲಯವೆರಡೂ, ನಯನದೊಳಗೋ? 
ನಯನ ಬುಧ್ಧಿಯ ಒಳಗೋ, ಬುಧ್ಧಿ ನಯನದ ಒಳಗೋ? 
ನಯನ ಬುಧ್ಧಿಗಳೆರಡೂ ನಿನ್ನೊಳಗೋ, ಕೃಷ್ಣಾ? 

ಸವಿಯು ಸಕ್ಕರೆಯೊಳಗೋ, ಸಕ್ಕರೆಯು ಸವಿಯೊಳಗೋ? 
ಸವಿಯು ಸಕ್ಕರೆಯರಡೂ ಜಿಹ್ವೆಯೊಳಗೋ? 
ಜಿಹ್ವೆ ಮನಸಿನ ಒಳಗೋ, ಮನಸು ಜಿಹ್ವೆಯ ಒಳಗೋ? 
ಜಿಹ್ವೆ ಮನಸುಗಳೆರಡೂ ನಿನ್ನೊಳಗೋ, ಕೃಷ್ಣಾ? 

ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ 
ನೀ ದೇಹದೊಳಗೋ, ನಿನ್ನೊಳು ದೇಹವೋ? 
ನೀ ಸುರುಳಿಯೊಳಗೋ, ನಿನ್ನೊಳು ಸುರುಳಿಯೋ? 
ನೀ ಮುಂಜಾವಿನೊಳಗೋ? ನಿನ್ನೊಳು ಮುಂಜಾವೋ

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...