-
ತೀನಿ ದಿವಸು..
ಮುಂಜಾವು ತೊಜ್ಜುಕ
ನಾ..
ಅಹಲ್ಯಾ, ವೀಣಕ್ಕಾ,
ಪ್ರಶಾಂತ್ ಮಾಮು....
ಹಂಗೆಲೆ ಮುಂಜಾವಕ
ಮಿಗೆಲೆ ರಾಗು ಘಲೀನಿ.. ಛೇ!
ಜಲೈರಿ ಹ್ಹಾವ್
ಕಸ್ಸಕೊರು? ಮುಂಜಾವನ ಮಹ್ಳೆರಿ ಮಾತ್ರ ಬರೈತಲಿ ಹ್ಹಾವ್!
ಅಮ್ಮ, ದೋಸ್ತಿ,
ಕೃಷ್ಣು, ಟೀಚರ್,.. ಪುರಾ ಅವತಾರು ಜಲ್ಲೊ..
ಅತ್ತ ಕಸ್ಸ ಜತ್ತಲಬ್ಬಾ?
ಅಟ್ಟೊನು
ನಿದ್ದಲಿಲಿಕ..ಸಮ್ ನೀದ ನಾ..
ಅನಿಕಯಿ ಕಳೊಕು.. ಅಂಗಣಂತು
ತುಲಸಿಕಟ್ಟೆ ಎದುರು ರಬ್ಬಿಲಿಕ ವ್ಹಾರೆನ ತಂಡುನು ವೆಲ್ಲೆ.. ಕೈಯಿ ಮಹ್ಣಾತಾವೆ?
ವೈರಿ.. ಮೋಡ ಘರಕ!
ಕಸ್ಸ ಚಂದ
ಶೃಂಗರ್ಲಾ!
ಪೆಪೆ..ಪೇ,, ವಾದನ!
ಎದುರುಕಣ್ಸಾಣಿಕ
ಅಮ್ಗೆಲೆ ಮುಂಜಾವ ಬಳಗ ಕನ್ನಡಿ ಕಳಶು ದೋರ್ನು.. ಪ್ರತಿಮಾ, ಗೀತಾ.. ರಬಲೆಂಚಿ
ವಕ್ಕಲ ಮಾಕ್ಶಿ
ಫಾಟಿ ಘಾಲ್ನು..
ಫಂತಿಕ ಗುಲಾಬಿ,
ಸುಗಂಧ ರಾಜ ಮಾಳ,, ಬಂಗಾರಚೆ ಗೊಂಡೊ..
ಟಿಕ್ಲಿ ಕಸೂತಿ
ಕೆಲ್ಲೆಲೆ.. ಧವ ಪಟ್ಟೊ ಚೊಳಿವ್ಹೈರಿ!
ಕಾಸ್ ಮಾರ್ಲೆಲೆ..
ಕಾಂಜಿವರಮ್ ಕಪ್ಪಡ!
ಎದುರು ಫಳೈಲೆರಿ..
ಈ ಅಮ್ಗೆಲೆ ಶೀಲನ್ಹವೇ! (ಹ್ಹಾವ್ ನಯ್ಹಿ!)
ಅರೇ, ರೆಪ್ಪೆ ವ್ಹೈರಿ
ರೆಪ್ಪೆ..ಗಲ್ಲಕ ಗುಲಾಬಿ,, ವ್ಹೊಟ್ಟಾಕ ರಕ್ತರಂಗು..
ಥಳ್ ಥಳ್ ಚೆ
ನಮೂನವ್ಹಾರೆ ಬಂಗರ..
ಮೋಹನ ಕಂಠಿ, ಮೊಗರೆ
ಮಾಳ, ಹವಳ ಕಂಠಿ, ಕೊತ್ತಂಬರಿ ಸೋರು..
ಹತ್ತಕ ಮೊತ್ಯಾ,
ಹವಳಾಂಚೆ..ವಜ್ರಾಂಚೆ..ನಮೂನ್ ವ್ಹಾರ ಕಂಕಣ!
ಅಯ್ಲೋ.. ವ್ಹರತ್
ಅಯ್ಲೋ..
ದೃಷ್ಟಿ ವ್ಹೈರಿ
ಉಕ್ಕಳೆರೀ..
ಕೋಣ?
ಅರೇ ಮನೋಹರು ಘೋಡೆ
ರಥರಿ! ಮತ್ತೆಕ ಪೇಟ..ಗಳೆಕ್ ಚಕ್ರಸೋರು..ಶಿಲ್ಕಚೇ ಧೋತಿ..ಕಸೂತಿಚೆ ಜುಬ್ಬಾ..
ಮಂಟವ ಹಳ್ಳೆ
ವ್ಹರತು ವ್ಹಕ್ಲೆಕ!
ಮೋಡ ಘರಂತು
ಪೆಪೆ..ಪೇ,,ಉತ್ತುಂಗಕ ಚಳ್ಳೆ..
ಸಾಕ್ಷಾತ್ ವಿಷ್ಣು
ಅನಿ ಲಕ್ಷ್ಮಿ ಜೋಡಿ!
ಆಯ್ಚೆ ಮುಂಜಾವು
ಮನೋಹರ್ ಅನಿ ತಂಗೆಲೆ ಪತ್ನಿ ಶೀಲಾ ಅರ್ಪಿತು!
ಕಳೆದ ಮೂರು
ದಿನಗಳಿಂದಲೂ ಮುಂಜಾವು ಜತೆ ಮಾತೇ ಇಲ್ಲ... ಆಕೆ ಮಾತನಾಡದೇ ನಾನೇನು ಬರೆಯಲಿ! ಕೆಲವು ದಿನಗಳಿಂದ (ಕಾರಣವೇ ಗೊತ್ತಿಲ್ಲ) ಶೀಲಾ
ತಲೆಯಲ್ಲಿ ತಿರಗುತ್ತಿದ್ದರು.. (ಮನೋಹರರ ಧರ್ಮ ಪತ್ನಿ) ಅದರಿಂದಲೋ ಏನೋ ನಿನ್ನೆ ರಾತ್ರಿ ನನ್ನ
ಕನಸಲ್ಲೂ ಬಂದಿದ್ದರು.. ಅದೂ ನವವಧುವಿನಂತೆ ಶೃಂಗರಿಸಿಕೊಂಡಿದ್ದರು! ಬಹುಶಃ ಇತ್ತೀಚೆಗೆ ನಾಯಕ್ ದಂಪತಿಗಳ ಫೋಟೊ ನೋಡಿ ಮೆಚ್ಚಿದ್ದೂ ಕಾರಣವಾಗಿರಬಹುದು..
ಇವತ್ತೇನಿದ್ದರೂ ಬರೆಯಲೇಬೇಕು ಅಂತ ಅದ್ಯೇಕಪ್ಪ ಮುಂಜಾವು ಮಾತನಾಡಲು ಬರಲಿಲ್ಲ ಅಂತ ಚಿಂತಿಸಿ
ಸರಿಯಾಗಿ ನಿದ್ದೆಯಿಲ್ಲದೆ ಕಳೆದೆ ನಿನ್ನೆಯ ರಾತ್ರಿ!
ಇವತ್ತಿನ ಮುಂಜಾವಿನ
ಅನುವಾದ!
ಮೂರು ದಿನಗಳು...
ಮುಂಜಾವು ಕಾಣಲು
ಇಲ್ಲ...
ಅಹಲ್ಯಾ, ವೀಣಕ್ಕಾ,
ಪ್ರಶಾಂತ ಮಾಮ...
ನನ್ನ ರಾಗವಿಲ್ಲ
ಇವರ ಮುಂಜಾವಿಗೆ.. ಛೇ!
ನಾನೇನು ಮಾಡಲಿ?
ಮುಂಜಾವು ಹೇಳಿದರೆ ಮಾತ್ರ ಬರೆಯುವವಳು ನಾನಲ್ಲ!
ಅಮ್ಮ, ಸಖಿ,
ಕೃಷ್ಣ, ಗುರುಗಳು.. ಎಲ್ಲ ಅವತಾರ ತೊಟ್ಟಳವಳು..
ಇನ್ಯೇನು ಆಗುವಳೋ
ಏನೋ?
ನೆನೆದೇ
ಮಲಗಿದವಳಿಗೆ ಸರಿ ನಿದ್ದೆಯೆಲ್ಲಿ...
ಇನ್ನೂ ಗವ್ ಅನ್ನುವ
ಕತ್ತಲೆ.. ಅಂಗಣದಲ್ಲಿ ತುಳಸೀಕಟ್ಟೆಯ ಎದುರು ನಿಂತವಳನ್ನು ಗಾಳಿ ಒಯ್ಯಿತು..ಎಲ್ಲನ್ನುವಿರಾ!
ಮೇಲೆ.. ಮುಗಿಲ
ಮನೆಗೆ!
ಆಹಾ! ಏನು ಶೃಂಗಾರ!
ಪೆಪೆ..ಪೇ...
ನಾಗವಾದನ!
ಸ್ವಾಗತಿಸಲು ಕಲಶ
ಕನ್ನಡಿ ಹಿಡಿದು ಪ್ರತಿಮಾ, ಗೀತಾ.. ಜತೆಗೆ ಮುಂಜಾವಿಗಲೆಲ್ಲರೂ!
ವಧು ಬೆನ್ನು
ಹಾಕಿದ್ದಾಳೆ..
ಉದ್ದನೆಯ ಜಡೆಗೆ
ಗುಲಾಬಿ ಸುಗಂಧರಾಜ ಮಾಲೆ.. ಅಲ್ಲಲ್ಲಿ ಬಂಗಾರದ ಗೊಂಡೆ..
ಕೊಂಕಣಿ ಸಂಪ್ರದಾಯದ
ಟಿಕ್ಲಿ ಕಸೂತಿಯ ಬಿಳಿಪಟ್ಟೆ ಹೊದ್ದ ವಧು..
ಕಚ್ಚೆಹಾಕಿದ
ಕಾಂಜಿವರಂ ಒಂಬತ್ತು ಮೊಳದ ಸೀರೆ..
ನೋಡಿದರೆ.. ಇವಳು
ನಮ್ಮ ಶೀಲ ಅಲ್ಲವೇ! (ನಾನಲ್ಲ)
ಅರೇ, ಕಣ್ಣೆವೆಗಳು
ಮಲಗಿವೆ ಒಂದರಮೇಲೊಂದು.. ಗಲ್ಲ ರಂಗೇರಿದೆ.. ತುಟಿಗೆ ರಕ್ತವರ್ಣದ ರಂಗು..
ಥಳ್ ಥಳ ಹೊಳೆಯುವ
ವಿವಿಧ ಹೊನ್ನು..
ಮೋಹನ ಕಂಠಿ,
ಮಲ್ಲಿಗೆಯ ಸರ, ಹವಳದ ಕಂಠಿ, ಕೊತ್ತಂಬರಿ ಸರ..
ಕೈಗೆ ಮುತ್ತು,
ಹವಳ, ವಜ್ರದ.. ಬಳೆಗಳು..
ವರ ಬಂದ, ವರ ಬಂದ..
ಗಡಿಬಿಡಿ..
ತಲೆಯೆತ್ತಿ
ನೋಡಿದರೆ..
ಅರೇ! ಯಾರಿದು?
ಮನೋಹರ, ಅಶ್ವಗಳು
ಎಳೆಯುತ್ತಿರುವ ರಥದಲ್ಲಿ.. ತಲೆಗೆ ಪೇಟ, ಕತ್ತಿಗೆ ಚಕ್ರ ಸರ, ಸಿಲ್ಕಿನ ಧೋತಿ.. ಕಸೂತಿಯ
ಜುಬ್ಬಾ..
ಮಂಟಪಕ್ಕೆ ವರ
ವಧು..
ಮುಗಿಲ ಮನೆ ತುಂಬಾ
ಗಲ ಗಲ.. ಪೆಪೆ.. ಪೇ... ನಾದ ಉತ್ತುಂಗಕ್ಕೆ..
ಸಾಕ್ಷಾತ್ ವಿಷ್ಣು
ಮತ್ತು ಲಕ್ಷ್ಮಿ!
ಇವತ್ತಿನ ಮುಂಜಾವು
ಮನೋಹರ ಮತ್ತವರ ಪತ್ನಿ ಶೀಲಾ ಅವರಿಗೆ ಅರ್ಪಿತ!
ವಿಷಯ
ಸಿದ್ಧವಾಯಿತಾದರೂ ಮನೋಹರ್ ಇವತ್ತು ವಿವಿಧತೆಯಲ್ಲಿ ಐಕ್ಯತೆ ಸಬ್ಜೆಕ್ಟ್ ಕೊಟ್ಟರು.. ಹಾಗಾಗಿ
ಆಲೋಚಿಸಿ ಮೊದಲ ಬಾರಿಗೆ ನಮ್ಮ ಮಾತೃ ಭಾಷೆಯಲ್ಲಿ ಬರೆದೆ. ಇನ್ನು ನೀವುಂಟು ನಿಮ್ಮ
ಅಭಿಪ್ರಾಯವುಂಟು.. ಏನಂತಿರಾ ಮುಂಜಾವಿಗರೇ?
No comments:
Post a Comment