ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

12 August, 2013

ಕಲ್ ಹೋ ನ ಹೋ!

|| ಕಲ್ ಹೋ ನ ಹೋ||

ಬದುಕು ಕ್ಷಣಕ್ಕೊಮ್ಮೆ ಬದಲಾಗುತ್ತಲೇ ಇರುವುದು..
ತಣ್ಣನೆಯ ನೆರಳು ಕೆಲವೊಮ್ಮೆ, ಹಲವಾರು ಸಲ ಬಿರುಬಿಸಿಲು
ಬರುವ ಕ್ಷಣವೆಲ್ಲವನೂ ಅನುಭವಿಸಬೇಕು ಮನಸಾರೆ

ಈ ಕ್ಷಣದ ನಲಿವು ನಾಳೆ ಮತ್ತೆ ಬರಲಾರದು
ಮತ್ತೆ ಸಿಗುವುದೇ ಅಂತಹ ತೀವ್ರ ಒಲವು

ಸಂಧಿಸುವೆನೇ ಮತ್ತೆ ನನ್ನೊಲವನ್ನು ಇನ್ನೊಮ್ಮೆ ಅಲ್ಲಿ
ಇರುವುದೇ ಇಂತಹ ಅನುರಾಗವು ಇನ್ನೆಲ್ಲಿಯಾದರೂ
ತುಂಬಿ ತುಳುಕುವುದು ಸುರಲಾಲಿತ್ಯ ಆ ಒಲವಿನಲಿ

ಕೈಪಿಡಿ, ಬರಸೆಳೆ, ಎದೆಗಪ್ಪಿಕೋ...
ನಾಳೆ ಮತ್ತೊಮ್ಮೆ ತೋರಲಾರನು ಮತ್ತಾ ಒಲವ
ಅನುಭವಿಸಿಬಿಡು ಈ ಕ್ಷಣವ ಮತ್ತೆ ಬರಲಾರವೆಂಬಂತೆ..
ಮತ್ತೆ ಬರಲಾರವೆಂಬಂತೆ..


No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...