“GM J”
ಮಗನಿಂದ ವಾಟ್ಸ್
ಆಪ್ ನಲ್ಲಿ ಮೆಸೇಜು!
“ನಾನು ಯಾರಪ್ಪಾ
ನಿನಗೆ?”
ನನ್ನ
ಪ್ರತ್ಯುತ್ತರ!
“Gud mrng Amma J”
ತಪ್ಪರಿವಾಗಿತ್ತವನಿಗೆ!
ಜನವರಿ ತಿಂಗಳಲ್ಲಿ
ಅಫಘಾತವಾದ ನಂತರ ಅವನು ನನಗೆ ಪೂರ್ವಾಹ್ನ ಮತ್ತು ರಾತ್ರಿ ಸಂದೇಶ ಕಳುಹಿಸುವಂತೆ ಹೇಳಿದ್ದೆ!
ಅದರಂತೆ ಅವನು ಕಳುಹಿಸಿದ ಮೊದಲ ಸಂದೇಶದಲ್ಲಿ ’ಅಮ್ಮ’ ಇರಲಿಲ್ಲ!
ಅಮ್ಮ ಇರದ
ಸಂದೇಶವೆಂದೂ ನನಗಲ್ಲ.. ಎಂಬ ಸ್ಪಷ್ಟ ಸಂದೇಶ ಕೊಟ್ಟಿದ್ದೇನೆ. ಅದನ್ನು ಇಂದಿಗೂ ಮರೆತಿಲ್ಲ ಅವನು! ಪ್ರತೀ ಮೆಸೇಜು
’ಅಮ್ಮ’ದಲ್ಲಿ ಪ್ರಾರಂಭ ಅಥವಾ ಮುಗಿಯುತ್ತದೆ! ನನ್ನೆದುರೇ ನಿಂತು ಕರೆಯುತ್ತಿದ್ದಾನೆಂಬ ಭಾವ
ನನಗೆ!
ಮಗಳಿಗೂ
ಕಾಲೇಜಿನಲ್ಲಿರುವಾಗ ಇದ್ದಕ್ಕಿದ್ದಂತೇ ಅಮ್ಮನ ನೆನಪಾಗುತ್ತದೆ..
“mom J” ಅಲ್ಲಿಂದ ಹೊರಟು ನನ್ನ
ಮೊಬೈಲನ್ನು ಮನವನ್ನೂ ಬೆಳಗಿಸುತ್ತದೆ!
ಅಪರೂಪಕ್ಕೆ ಬರುವ
ಗೆಳತಿಯ ಸಂದೇಶಗಳೂ... sheeelaaa.. ಎಂದು ಉದ್ದಕ್ಕೂ
ಎಳೆದು ಮುಗಿಯುವಾಗ ಮತ್ತೆ ಹಳೆಯ ಕಾಲೇಜಿನ ದಿನಗಳು ಹಸಿಯಾಗುತ್ತವೆ.. ಮೈಮನಸ್ಸು ಅರಳುತ್ತದೆ!
ನನ್ನವರ ಪ್ರೀತಿಯ
ಕರೆಯಲ್ಲೇ ನನಗೆ ಸಗ್ಗ ತೋರುತ್ತದೆ!
20-08-2013
20-08-2013
No comments:
Post a Comment