ಪ್ರೀತಿ ಅಂದರೆ ಇದೆಯೇನು!
--------------------
“ಶೀಲಾ... ಬೇಗ ಬರ್ತಿಯಾ...!”
ಕಾಲೇಜಿಗೆ ಹೋಗಲು ಸಿದ್ಧಳಾಗುತ್ತಿದ್ದ ನಾನು ಅಮ್ಮನ
ಗಾಬರಿಯ ಸ್ವರ ಕೇಳಿ ಹೊರ ಓಡಿ ಬಂದೆ!
“ಸಂಜನಾ ಏನು ಮಾಡಿದರೂ ಅಳು ನಿಲ್ಲಿಸ್ತಿಲ್ಲ! ಬೇಗ ಬಾ..
“
ಮೂರು ಮಕ್ಕಳನ್ನು ಹೆತ್ತು, ಅವರ ಅಳು, ಲೂಟಿ,
ಹಠವೆಲ್ಲವನ್ನೂ ಅಷ್ಟು ಚೆನ್ನಾಗಿ ನಿಭಾಯಿಸಿದ ಅಮ್ಮನೇ ಹೀಗೆ ಕೈ ಕಾಲು ಬಿದ್ದು ಹೋದ ಹಾಗೆ
ಆಡುವುದನ್ನು ಕಂಡು ನನಗೆ ಅಚ್ಚರಿ!
ಕಣ್ಣುಮೂಗಿನಿಂದ ಇಳಿಸುತ್ತಾ... ಸ್ವರವೆತ್ತಿ ಅಳುತ್ತಿದ್ದ
ನನ್ನ ಮುದ್ದುವನ್ನು ಕಂಡು ನನಗೂ ಗಾಬರಿಯಾಯಿತು!
“ಗೊಂಡಿ.. ಯಾಕಮ್ಮಾ.. !”
ಎರಡೂ ಕೈ ಮುಂದೆ ಮಾಡಿ ನನ್ನ ತೆಕ್ಕೆಗೆ ಬಂದಳು! ಅಪ್ಪಿ
ಹಿಡಿದವಳಿಗೆ ಹಿತ್ತಲಲ್ಲಿ ಹಾರಾಡುತ್ತಿದ್ದ ಚೆಟ್ಟೆಗಳನ್ನು ತೋರಿಸಿದಾಗ ಶಾಂತವಾದಳಾದರೂ ಎಂಜಲು
ನುಂಗದೇ ಬಾಯಿಯಲ್ಲಿಟ್ಟುಕೊಂಡಿದ್ದಳು!
ಮನೆಯೊಳಗೆ ಹೋಗಲು ಒಪ್ಪದವಳನ್ನು ನನ್ನ ಮನೆಗೆ
ಕರೆದುತಂದರೆ ಏನೂ ಪ್ರತಿಭಟನೆಯೇ ಇಲ್ಲ!
ಮತ್ತೆ ಅವಳ ತಾಯಿಯ ಕೈಗೆ ಒಪ್ಪಿಸಲು ಹೋದರೆ ಮತ್ತೆ
ತಾರಕಕ್ಕೆ ಸ್ವರ!
ಮತ್ತೆ ಹಿತ್ತಲು ಸುತ್ತಾಟ!
ಕೊನೆಗೂ ನನ್ನ ಮಡಿಲಲ್ಲೇ ಮಲಗಿ ನಿದ್ದೆ ಹೋದಳು! ( ನನ್ನ
ದಪ್ಪ ಸ್ವರದ ಜೋ ಜೋ ಕೃಷ್ಣ ಹಾಡು ಕೇಳುತ್ತಾ.. )
ಅಮ್ಮನ ಕಣ್ಣಿನಿಂದ ಜಲಪಾತ!
“ಏನು ಮೋಡಿ ಮಾಡಿದೆಯೇ ನೀನು ಇವಳಿಗೆ! ಅಲ್ಲ, ಸಂದೀಪನ
ಮಗನೂ ಆ ದಿನ ಬಚ್ಚಲು ಕೋಣೆಯ ಹೊರಗೆ ನಿಂತು.. I want sheelakka.. ಅಂತ ಅಳುತ್ತಿದ್ದ ದೃಶ್ಯ ಮತ್ತೆ ನೆನಪಾಯಿತು ಕಣೇ!”
“ಅಮ್ಮ ಅವು ಇನ್ನೂ ಚಿಕ್ಕವು.. ನನ್ನ ಹೃದಯದೊಳಗಿನ
ಪ್ರೀತಿಯ ಅನುಭೂತಿ ಅವಕ್ಕೆ ನೇರವಾಗಿ ತಟ್ಟಿದೆ.. ಅಷ್ಟೇ! Simple!”
ಅಷ್ಟೇ ಹೇಳಲು ಸಾಧ್ಯವಾಯಿತು ನನಗೆ!
No comments:
Post a Comment