-
ಯುಗ ಯುಗಗಳಿಂದಲೂ
ಧರ್ಮ ಅಧರ್ಮ
ಬೆಳಕು ಕತ್ತಲೆ
ಸತ್ಯ ಅಸತ್ಯ
ನ್ಯಾಯ ಅನ್ಯಾಯ
ಜಾತಿ ವಿಜಾತಿ
ಸ್ತ್ರೀ ಪುರುಷ
ತಿಕ್ಕಾಟ...
ಪ್ರಕೃತಿಯಲಿ ಎಷ್ಟೊಂದು ವೈರುಧ್ಯ..
ನಲಿವಿನ ಸುಖ ಇನ್ನೂ ಅರಗಿಲ್ಲ..
ಹಿಂದೆಯೇ ನೋವಿನ ಅನುಭೂತಿ..
ಯಾಕೆ ಮುಂಜಾವೆ ಯಾಕೆ?
ಹನಿಗೂಡಿದ ಕಣ್ಣಲ್ಲೇ ಇನ್ನೂ ಬೆಳಕು ಮೂಡದ ಆಗಸದೆಡೆ
ಪ್ರಶ್ನೆ ತೂರಿದೆ..
ದಪ್ಪನೆ ಬಳಿದ ಕಾಡಿಗೆಯಿಂದ ಮತ್ತಷ್ಟು ಪ್ರಜ್ವಲಿಸುವ
ದೃಷ್ಟಿ..
ಬೆನ್ನ ತುಂಬಾ ಬಿಚ್ಚಿದ ಮುಡಿ..
ನೋವು, ಕೋಪ, ಅಸಹಾಯಕತೆಯ ಎತ್ತಿ ತೋರುವ ವದನ..
ಹಿಡಿತಕ್ಕಿಟ್ಟುಕೊಳ್ಳಲಾಗದೆ ಹೊರಬರಲು ತವಕಿಸುತ್ತಿರುವ
ಭಾವಗಳು..
ಅದರುತ್ತಿರುವ ತುಟಿಗಳು..
ಮುಂಜಾವಿನ ರೂಪ ವರ್ಷ ಋತುವಿನ ರೌದ್ರರಮಣೀಯ
ಶರಧಿಯ ಆಗಸದೆತ್ತರ ಚಿಮ್ಮುವ ತೆರೆಗಳಂತೆ ಆಕರ್ಷಕ..
“ಹೆಣ್ಣೇ, ಕೇಳು..
ಜಗವನ್ನೇ ಗೆಲ್ಲಬಲ್ಲ ವೀರ ಪತಿಯರೈವರಿದ್ದೂ
ಸಕಲ ಶಾಸ್ತ್ರಪರಾಂಗತರಾದ ಭೀಷ್ಮ ವಿಧುರಾದಿ
ಹಿರಿಯರಿದ್ದೂ
ತುಂಬಿದ ಸಭೆಯಲಿ ದ್ರೌಪದಿಯಂತ ಅಸಮಾನ್ಯ ಸ್ತ್ರೀಯೇ ತನ್ನ
ಮಾನ ಕಾಪಾಡಲು ಹೆಣಗಿದಳು...
ಕ್ಷಣ ಮಾತ್ರಕೆ ಚಂಚಲಳಾಗಿ ಪತಿಯ ರೂಪದಲ್ಲಿದ್ದ ಇಂದ್ರಿನ
ಮೋಹಿಸಿದ
ಅಹಲ್ಯೆ ಕಲ್ಲಾದಳು..
ಅಪರಾಧಿಯಲ್ಲದಿದ್ದರೂ ನಿರಪರಾಧಿ ಎಂದು ರೂಪಿಸಿಕೊಳ್ಳಲು
ಹೆಣಗಾಡಿ
ಸೋತು ಭೂಮಿ ತಾಯಿಯ ಮಡಲಿಗೇ ಮರಳಿದಳು ಸೀತೆ..
ತನ್ನ ಪತಿಯ ನೂರಾರು ಪತ್ನಿರ ಮಧ್ಯೆ ತನ್ನ
ಸ್ಥಾನವೇನೆಂದು ಪ್ರತೀ ರಾಣಿ ಪಟ್ಟದ ಸ್ತ್ರೀಯರ ಉತ್ತರವಿಲ್ಲದ
ಪ್ರಶ್ನೆ..
ಬರೇ ದೇಹಗಳು.. ರಾಜಕೀಯ ಪಗಡೆಗಳಾಗಿ ಅಲ್ಲಿಂದ ಇಲ್ಲಿಗೆ
ಉರುಳುತ್ತ ಉಸಿರಾಡುತ್ತಿದ್ದ ಹೆಣ್ಣುಗಳು..
ಇತಿಹಾಸದ ಪುಟಗಳು ಮುಚ್ಚಿ ಹಾಕಿದ ಸ್ತ್ರೀ ಮನಗಳ ರೋಧನಗಳ
ಪ್ರತ್ಯಕ್ಷ ಸಾಕ್ಷಿ ನಾನು..
ಯುಗ ಬದಲಾದರೂ ಅದೇ ಪಾಡು..
ಮುಖವಾಡಗಳ ಹಿಂದೆ ಬಚ್ಚಿಟ್ಟಿರುವ ಕಾಮುಕತೆ..
ಸ್ತ್ರೀ ಬರೇ ಭೋಗದ ವಸ್ತು..
ಸಮುದ್ರ ವಸನೆ ದೇವಿ..
ಪಾಡುತ್ತಾ ಕವಿ ತನ್ನ ಸೃಜನಶೀಲತೆ ತೋರುವನೇ,
ಇಲ್ಲಾ ರಸಿಕತೆಯನೇ..
ಒಂಟಿ ಹೆಣ್ಣನ್ನು ಮುಕ್ಕಿತಿನ್ನುವುದರಲ್ಲಿಯೂ..
ಪ್ರಕೃತಿ ಕೊಟ್ಟ ಬಲ ತೋರ್ಪಡಿಸುವಲ್ಲಿ ಹಿಂದೆ
ಬೀಳದಿರುವಲ್ಲಿಯೂ...
ತನ್ನ ಅಂಕು ಡೊಂಕು ದೇಹವನ್ನೇ ಅಡವಿಗಿಟ್ಟು ಮೆರೆವರೂ..
ತನ್ನದೇ ಪಡಿಯಚ್ಚು, ತನ್ನದೇ ಭಾವ.. ಇನ್ನೂ ಕಣ್ಣು ಬಿಟ್ಟಿಲ್ಲ..
ಹೊಸಕಿ ಹಾಕುವವರೂ..
ಹಲವು ಕನಸ ಹೊತ್ತು ಹೊಸ್ತಿಲು ದಾಟಿ ಬಂದವಳ
ಭಾವಕೆ ಬೆಂಕಿ ಇಕ್ಕುವವರೂ..
ಒಂಟಿ ಭಾವಕೆ, ಕಪ್ಪು ಬಿಳುಪು ಕನಸುಗಳಿಗೆ
ರಂಗನ್ನಿತ್ತು..
ಜತೆಯಾಗಿ ಹಾಡು ಹಾಡುತ್ತ..
ಇದ್ದಕ್ಕಿದ್ದಂತೆ ಅತ್ತೆತ್ತಲೋ ಆಕರ್ಷಿತರಾಗಿ
ಮಾಯವಾಗುವವರೂ...
ಕೈಗೆಟುಕದಿದ್ದರೆ ಹುಳಿ.. ಹುಳಿ.. ನೀ ಅನ್ನುತ್ತಾ
ದ್ವೇಷ ಸಾಧಿಸುವವರೂ..
ಬೆನ್ನುತಟ್ಟುತ್ತಲೇ ಮತ್ತೆಲ್ಲೋ ಕೈ ಆಡಿಸುವವರೂ..
ಇಲ್ಲ ಕಣೇ, ಇನ್ನೂ ದ್ವೇಷ ಅಸೂಯೆ ಅಸಹಾಯಕತೆಯ
ಕಬಂದಬಾಹುವಿನ ಹಿಡಿತ
ಬಿಡಿಸಕೊಳ್ಳದೇ ಹೆಣ್ಣು ಎಂದಿಗೂ ಉದ್ಧಾರವಾಗಳು..
ಹೆಣ್ಣಿಗೆ ಹೆಣ್ಣೇ ಶತ್ರುವಾಗಿ ಕಾಡುವ ತನಕ ಇತಿಹಾಸ
ಮರುಕಳಿಸುತ್ತಲೇ..
ಇಲ್ಲ.. ಇಲ್ಲ.. ನಾವು ಬದಲಾಗೋಣ,
ಮುಂಜಾವಿಗೂ ಶುಭ್ರ, ಹೊನ್ನ ಮುಂಜಾವನ್ನು ಮೂಡಿಸೋಣ!
ಕೈಗೂಡಿಸಿ ಮುಂಜಾವಿಗರೇ..
ಯುಗಯುಗದಿಂದಲೂ ಸ್ತ್ರೀ ಜಾತಿಯ ಕಾಡುವ ಅಮಾನವೀಯತೆ
ಕೃತ್ಯಗಳಿಗೆ ಮುಕ್ತಿವೀಯೋಣ..
ಸ್ತ್ರೀ ಶಕ್ತಿಯ ಪುನರುಜ್ಜೀವಗೊಳಿಸೋಣ!
ನಾನಿನ್ನೂ ಆಶಾವಾದಿ, ನೀವು?
-
ನಳನಳಿಸುವ ವದನವ ಪೊತ್ತು ಮುಂಜಾನೆಯ ಪ್ರಸಾದ ಹಂಚುತ್ತಾ ಅಸುರ ಶಕ್ತಿಗಳಿಗೆ ಮೋಕ್ಷ ಕೊಟ್ಟಿರುವ ಪರಮಾತ್ಮನು ಮುಖವಾಡಗಳ ಮರೆಯಲ್ಲಿ
ಮೆರೆಯುತ್ತಿರುವ ಕಲಿಯುಗದ ಅಮಾನವೀಯರ ಲಂಪಟಕ್ಕೆ ಮೋಕ್ಷ ತೋರಿ.. ಅನಿಷರ ಲೋಕದ ಬೆಳಕು ನಮ್ಮ
ಮುಂಜಾನೆಗೂ ಸಿಗುವುದು ಯಾವಾಗ ಎಂದು ಕೇಳಿ... ನಾನದನ್ನು ನನ್ನ ಮುಂಜಾನೆಯೆಡೆ ತೂರಿದಾಗ..
ನಳಿನಿ ಪ್ರಸಾದ್ ಅವರ ಬರಹ!
ಹಿರಣ್ಯನಿಗೆ ಮುಸ್ಸಂಜೆಯ
ಹೊಸ್ತಿಲಲ್ಲಿ.....
ಕಲ್ಲಾಗಿದ್ದ ಅಹಲ್ಯೆಗೆ ಅಂಗುಲಿಯ
ಸ್ಪರ್ಶದಲ್ಲಿ..
ಶಬರಿಗೆ ಸುಕ್ಕುಗಟ್ಟಿದ
ಎಂಜಲು ಬುಗರಿ ಹಣ್ಣುಗಳಲ್ಲಿ.
ದಶಶಿರನಿಗೆ
ಅಳಿಲ ಸೇತು ಬಂಧದಲ್ಲಿ..
ಕಂಸನಿಗೆ ಕಾರಾಗೃಹದ
ಗರ್ಭದಲ್ಲಿ...
ಬಕಾಸುರನಿಗೆ ಬಲಭೀಮನ
ಬಂಡಿ ಅನ್ನದಲ್ಲಿ.....
ಶಕುನಿಗೆ ದ್ಯೂತದ
ದಾಳದಲ್ಲಿ..
ಭೀಷ್ಮರಿಗೆ ಉತ್ತರಾಯಣದ
ಶರಶಯ್ಯೆಯಲ್ಲಿ...
ಪಾರ್ಥನಿಗೆ ಸಾರಥಿಯ
ವಿಶ್ವರೂಪದಲ್ಲಿ...
ರಾಧೇಯನಿಗೆ ಪಂಕದಲಿ ಹೂತ
ಚಕ್ರದಡಿಯಲ್ಲಿ..
ಭಸ್ಮಾಸುರನಿಗೆ ಮೋಹಿನಿಯ
ನೃತ್ಯದಲ್ಲಿ..
'ಮುಂಜಾವು'!
ವಸುಧೆಯೊಳು
ಸೃಷ್ಟಿ - ಲಯ ಗಳ
ನಾಂದಿಯ ಬ್ರಹ್ಮ..
ಆದರೆ ..
ಈ ಮುಂಜಾವನ್ನು,
ಸತ್ತ ಮಾತಿನ ಗೋರಿಗೆ ಬಣ್ಣ ಬಳಿಯುವ
ನಪುಂಸಕರಿಂದ ..
ನೆತ್ತರು ನೆಕ್ಕಿ ಬದುಕುಳಿಯುವ
ಜಿಗಣೆಗಳಿಂದ..
ಮಹಜರಿಗೆ ಮುನ್ನವೇ ಗಹಗಹಿಸುವ
ನರಪಿಶಾಚಿಗಳಿಂದ..
ಈ ಡಾಂಭಿಕತೆ,ದಳ್ಳುರಿಯ
ಕಾರ್ಮೋಡದಿಂದ
'ಮುಕ್ತ'ಗೊಳಿಸಲಿ ಹೇಗೆ ?
ಮುಂಜಾವಿಗೂ ಒಂದು" ಮುಂಜಾವು"
ದೊರೆಯಲೆಂದೆನ್ನ ಹರಕೆ-ಹಾರೈಕೆ...!
ಹೊಸ್ತಿಲಲ್ಲಿ.....
ಕಲ್ಲಾಗಿದ್ದ ಅಹಲ್ಯೆಗೆ ಅಂಗುಲಿಯ
ಸ್ಪರ್ಶದಲ್ಲಿ..
ಶಬರಿಗೆ ಸುಕ್ಕುಗಟ್ಟಿದ
ಎಂಜಲು ಬುಗರಿ ಹಣ್ಣುಗಳಲ್ಲಿ.
ದಶಶಿರನಿಗೆ
ಅಳಿಲ ಸೇತು ಬಂಧದಲ್ಲಿ..
ಕಂಸನಿಗೆ ಕಾರಾಗೃಹದ
ಗರ್ಭದಲ್ಲಿ...
ಬಕಾಸುರನಿಗೆ ಬಲಭೀಮನ
ಬಂಡಿ ಅನ್ನದಲ್ಲಿ.....
ಶಕುನಿಗೆ ದ್ಯೂತದ
ದಾಳದಲ್ಲಿ..
ಭೀಷ್ಮರಿಗೆ ಉತ್ತರಾಯಣದ
ಶರಶಯ್ಯೆಯಲ್ಲಿ...
ಪಾರ್ಥನಿಗೆ ಸಾರಥಿಯ
ವಿಶ್ವರೂಪದಲ್ಲಿ...
ರಾಧೇಯನಿಗೆ ಪಂಕದಲಿ ಹೂತ
ಚಕ್ರದಡಿಯಲ್ಲಿ..
ಭಸ್ಮಾಸುರನಿಗೆ ಮೋಹಿನಿಯ
ನೃತ್ಯದಲ್ಲಿ..
'ಮುಂಜಾವು'!
ವಸುಧೆಯೊಳು
ಸೃಷ್ಟಿ - ಲಯ ಗಳ
ನಾಂದಿಯ ಬ್ರಹ್ಮ..
ಆದರೆ ..
ಈ ಮುಂಜಾವನ್ನು,
ಸತ್ತ ಮಾತಿನ ಗೋರಿಗೆ ಬಣ್ಣ ಬಳಿಯುವ
ನಪುಂಸಕರಿಂದ ..
ನೆತ್ತರು ನೆಕ್ಕಿ ಬದುಕುಳಿಯುವ
ಜಿಗಣೆಗಳಿಂದ..
ಮಹಜರಿಗೆ ಮುನ್ನವೇ ಗಹಗಹಿಸುವ
ನರಪಿಶಾಚಿಗಳಿಂದ..
ಈ ಡಾಂಭಿಕತೆ,ದಳ್ಳುರಿಯ
ಕಾರ್ಮೋಡದಿಂದ
'ಮುಕ್ತ'ಗೊಳಿಸಲಿ ಹೇಗೆ ?
ಮುಂಜಾವಿಗೂ ಒಂದು" ಮುಂಜಾವು"
ದೊರೆಯಲೆಂದೆನ್ನ ಹರಕೆ-ಹಾರೈಕೆ...!
No comments:
Post a Comment