ಬರಡು ಎದೆಯದು
ಬಿತ್ತಿ ಉತ್ತಿದರೂ
ನೀರು ಹರಿಸಿದರೂ
ಬೆಳೆ ಬೆಳೆಯದೆಂದು
ನಿರ್ಲಕ್ಷ
ತೋರುತ್ತಿದ್ದರಂದು..
ಮರುಳು
ಹಾರಿಹೋಯಿತೋ..
ಸಣ್ಣಗೆ ಬೀಸಿದ
ತಂಗಾಳಿಗೆ
ಧಮನಿಗಳಲಿ
ಬಿಸಿರಕ್ತ ಚಿಮ್ಮಿತೋ..
ತಡವೇ ಇಲ್ಲ..
ಬೀಜ ನೆಟ್ಟರು..
ನೀರು ಹೊಯ್ದರು..
ಹಸಿರು ಎತ್ತಿತು
ತಲೆ..
ಚಿಮ್ಮಿತು ಜೀವಸೆಲೆ..
ಪೈರು ಕೊಯ್ಯುವರಿಲ್ಲದೇ
ಮತ್ತೆ ಒಣಗಿ
ಬಾಡಿತು
ಮತ್ತೆ
ಮರುಭೂಮಿಯಾಗಲಿದೆಯೋ
ಆ ಎದೆಯಿಂದು!
No comments:
Post a Comment