ಉಳಿದಿತ್ತೇನೋ ಇನ್ನೂ
ಎದೆಬಡಿತ ಒಂದಿಷ್ಟು
ನನ್ನಲ್ಲಿ
ಹೊಸ ಬಡಿತ
ಕೇಳುತ್ತಿದೆ
ಉಸಿರಾಡುತ್ತಿದ್ದೇನೆ
ಇನ್ನೂ
ಅರಿತೆ ನಾನದರಿಂದ
ಏನೋ ಭರವಸೆ ಈ
ಕ್ಷಣದಲ್ಲಿ
ಎಲ್ಲಿತ್ತು ನನ್ನೀ ಕ್ಷಣವು
ಇಲ್ಲಿಯವರೆಗೆ||
ನನ್ನೆದುರಿಗಿದೆ
ಸ್ಪರ್ಶಿಸಲೇ
ಒಂಚೂರು
ಉಸಿರಾಡಲೇ.. ಇಲ್ಲಾ
ನಿಲ್ಲಿಸಲೇ..
ಮುಟ್ಟಲೇ ನನ್ನೀ
ಖುಷಿಯನು
ಇಲ್ಲಾ ಅಳಲೇ...
ಉಸಿರಾಡಲೇ.. ಇಲ್ಲಾ
ನಿಲ್ಲಿಸಲೇ..||
ಹಾ.. ಇನ್ನೂ ಎಲ್ಲೋ
ಉಳಿದಿದೆ
ಒಂದಿಷ್ಟು ಬಡಿತ
ನನ್ನಲ್ಲಿ||
ಹಾ.. ಬಿರುಬಿಸಿಲಲಿ
ಒಣಗುತ್ತಿದ್ದ ಕಾಯ
ಒಂದಿಂಚು ಕದಲಿತು ಹಸಿರಿನ ಗಾಳಿಗೆ
ಪುಸಲಾಯಿಸಿ ಒಲಿಸಿದ
ಮುನಿದ ಮಗುವಿನ ನಗೆಯಂತಿತ್ತೇನೋ
ಅನಿಸುತಿದೆ ಮನಸಿಗೆ
ಹೀಗೆ ಇನ್ನೇನೋ
ವರುಷಗಳ ಹಿಂದಿನ
ಗಾಯಕೆ
ಮದ್ದು ಹಾಕಿದ
ಹಾಗೆನೋ
ಏನೇನೋ ಅನುಭೂತಿ
ಈ ಕ್ಷಣದಲ್ಲಿ
ಎಲ್ಲಿತ್ತು ನನ್ನೀ
ಕ್ಷಣ ಇಲ್ಲಿಯವರೆಗೆ!
ಉಸಿರಾಡಲೇ.. ಇಲ್ಲಾ
ನಿಲ್ಲಿಸಲೇ..
ಮುಟ್ಟಲೇ ಖುಷಿಯನು
ಇಲ್ಲಾ ಅಳಲೇ..
ಉಸಿರಾಡಲೇ.. ಇಲ್ಲಾ
ನಿಲ್ಲಿಸಲೇ.. ||
ತುಂಡಾಗಿ
ಹಾರಾಡುತ್ತಿದ್ದ ಗಾಳಿಪತಂಗದಂತಿತ್ತಲ್ಲ
ನನ್ನೀ ಜೀವನವು
ನನ್ನದಾಗಿದ್ದದಿಂದು ನಾಳೆ ಇಲ್ಲವಾಗಬಹುದು
ಕತೆಯಾಗಿತ್ತು
ಪ್ರತಿದಿನವೂ ನನ್ನದು
ಕರೆಯುತಿದೆ ಹೊಸ
ಭಾಂದವ್ಯ ಮತ್ತೆ ಹಿಂದಿನಿಂದ
ಕಾಡುತಿದೆ ಆದರೂ ಮತ್ಯಾಕೆ
ಬರುವ ನಾಳೆಗಳ
ಚಿಂತೆ||
ಏನೋ ಸೆಳೆತ ಈ
ಘಳಿಗೆಯಲಿ
ಎಲ್ಲಿತ್ತು ನನ್ನೀ
ಕ್ಷಣವು ಇಲ್ಲಿಯತನಕ
ಮುಂದಿದೆ..
ಮುಟ್ಟಲೇ ಒಂದಿಷ್ಟು
ಉಸಿರಾಡಲೇ.. ಇಲ್ಲಾ
ನಿಲ್ಲಿಸಲೇ..
ಮುಟ್ಟಲೇ
ಖುಷಿಯನ್ನು
ಇಲ್ಲಾ ಅಳಲೇ..
ಉಸಿರಾಡಲೇ.. ಇಲ್ಲಾ
ನಿಲ್ಲಿಸಲೇ||
No comments:
Post a Comment