ಮುಚ್ಚಿದ ಕಂಗಳಿಂದಿಳಿದು ಒದ್ದೆಯಾದ ಕೆನ್ನೆಗಳ ಒರಸಲಾಗಲಿಲ್ಲ.
ಮುಂಗಾರು ಮಳೆಯ ಆರ್ದ್ರತೆಗೆ ಬೆಚ್ಚಗಿನ ಭಾವ ಕೊಡಲಾಗಲಿಲ್ಲ..
ಬಲಹೀನ ಬೆರಳುಗಳೆಡೆಯಿಂದ ಜಾರುತಿರುವ ಕುಂಚಗಳ ತಡೆಯಲಾಗಲಿಲ್ಲ..
ಸುಡುತಿರುವ ಹೃದಯದ ಬೆಂಕಿ ಆರಿಸಲಾಗಲಿಲ್ಲ..
ಸುಡುತಿರುವ ಹೃದಯದ ಬೆಂಕಿ ಆರಿಸಲಾಗಲಿಲ್ಲ..
ಮುಷ್ಕರ ಹೂಡಿವೆ ಮೈಮನವೆಲ್ಲ
ಕಾಲನ ಕೊನೆಯ ಕರೆಯೇ ಎಲ್ಲದಕೂ ಪರಿಹಾರ!
No comments:
Post a Comment