ಹೂ ಬರೆಯಿತು.. ಕವಿತೆ!
--------------------
ತೆರೆದ ಪಕಳೆಯಲಿ ಆ ದಿನ
ನೀಲ ದುಂಬಿ ಪವಡಿಸಿತ್ತು
--------------------
ತೆರೆದ ಪಕಳೆಯಲಿ ಆ ದಿನ
ನೀಲ ದುಂಬಿ ಪವಡಿಸಿತ್ತು
ಮುಷ್ಟಿಯಲಿ
ಮುಚ್ಚಲೆತ್ನಿಸಲಿಲ್ಲ..
ಮೆಚ್ಚಿತೇನೋ..
ಮೆಚ್ಚಿತೇನೋ..
ಮೈಮೇಲೆಲ್ಲಾ
ಮುತ್ತಿಕ್ಕಿತು
ಮನಸೋತು ಮಧುವಿತ್ತೆನೇ
ಇಲ್ಲೇ
ಸುಳಿದಾಡುತಿತ್ತಲ್ಲ..
ಈಗೆಲ್ಲಿ?
ಈಗೆಲ್ಲಿ?
ಹುಡುಕಾಟಬೇಡ..
ಅಂಗಲಾಚಬೇಡ..
ಅಂಗಲಾಚಬೇಡ..
ಗಾಳಿಯಲಿ ತೇಲಿಬಂದ ಕಂಪು ಸೆಳೆಯಿತೇನೋ!
ದಳಬಿಡಿಸಿ ಕೂರಬಾರದೆಂದು
ಇನ್ನಾದರೂ ಪಾಠ
ಕಲಿತುಕೋ!
No comments:
Post a Comment