ಅವನ, ಇವನ, ಅವಳ, ಇವಳ, ನಿನ್ನ
ಆಪಾದನೆಗಳ ಪರ್ವತ ಮನದಂಗಳದಲ್ಲಿ
ಹಿಂದಿನ ನೋವೆಲ್ಲಾ ಮುಗಿಲಾಗಿ
ಮತ್ತೆ ತೇಲಿ ಬಂತೇ
ತಣ್ಣನೆಯ ನಿಟ್ಟುಸಿರು ಹೊಮ್ಮಿತ್ತು
ತಾಗಿದೇ ಕ್ಷಣ ಮೇಘಸ್ಫೋಟ
ಪಕ್ಷವೊಂದು ಪೂರಾ ಎಡಬಿಡದೆ
ಸುರಿಯಿತಲ್ಲಿ ಧಾರಾಕಾರ ವರ್ಷ
ನೋವೂ-ನಲಿವೂ ಕೊಚ್ಚಿಹೋಯಿತು
ಒಲವಿನ ಗರ್ಭಗುಡಿ ಪೊತ್ತ
ಜರ್ಜರಿತ ಕಾಯದ ಹೊರತು
ಉಳಿದಿಲ್ಲವೀಗ ಏನೂ ಅಲ್ಲಿ!
No comments:
Post a Comment