ಮುಸ್ಸಂಜೆ ಬರಹ!
1.
ಬಣ್ಣದ ಓಕುಳಿ ಚೆಲ್ಲಿ
ಬಣ್ಣದ ಓಕುಳಿ ಚೆಲ್ಲಿ
ಮುಗುಳ್ನಗುತ್ತಲೇ ತೆರೆಮರೆಗೆ
ಸರಿಯುತ್ತಿರುವ ರವಿಯ
ಬೀಳ್ಕೊಟ್ಟ
ಹೊಸ ವರುಷದ
ಮೊದಲ ಮುಸ್ಸಂಜೆ!
************
2.
ಶಿರದಿ ನವಿಲ ಗರಿಯ ಧರಿಸಿ
ಶಿರದಿ ನವಿಲ ಗರಿಯ ಧರಿಸಿ
"ಗಿಲ್" "ಗಿಲ್" ಗೆಜ್ಜೆ ನಿನಾದದೊಂದಿಗೆ
ಮುರಳಿಯ ಗಾನವನ್ನು ಮೇಳೈಸುತ್ತಾ
ಗೋಧೂಳಿಯ ನಡುವೆ ತನ್ನ ಗೆಳೆಯ
ಗೋವಳರೊಡಗೂಡಿ ಬರುತ್ತಿರುವ
ಗೋಪಾಲನಿಗಾಗಿ ಹೊಸ್ತಿಲ ಬಳಿ
ಕಾದ ಯಶೋಧೆಯು ನಾನಾದಂತೆ
ಕನಸ ತಂದ ಮುಸ್ಸಂಜೆಯಿದು!
******************
3.
ನನ್ನೆಲ್ಲ ಮನದ ಮಾತುಗಳ ಆಲಿಸಲೆಂದೇ
ನನ್ನೆಲ್ಲ ಮನದ ಮಾತುಗಳ ಆಲಿಸಲೆಂದೇ
ನೀಲಾಗಸದಲ್ಲಿ ಹರಡಿರುವ ಬೆಳ್ಳಿಚುಕ್ಕಿಗಳ
ತೋರುವ ಮುಸ್ಸಂಜೆಗೆ ಸುಸ್ವಾಗತ!
****************************
4.
ಹೊಸ್ತಿಲ ಬಳಿ ನಿಂತು
ಹೊಸ್ತಿಲ ಬಳಿ ನಿಂತು
ನಲ್ಲನ ನೆನಪುಗಳಲ್ಲಿ
ಕಳೆದು
ಹೋದವಳಿಗೆ
ಸೊಳ್ಳೆ
ಕಚ್ಚಿದಾಗ
ದುರ್ವಾಸ
ಮುನಿಗಳ
ನೆನಪು
ತಂದ
ಈ ಮುಸ್ಸಂಜೆ!
ಶಕುಂತಲೆ ದುಶ್ಯಂತನ ನೆನಪಿನಲ್ಲಿ ಕಳೆದುಹೋದದುರಿಂದ ತಾನೆ ದುರ್ವಾಸರ ಶಾಪ ಪಡೆದಳು! ಇಲ್ಲಿ ಈ ನಲ್ಲೆ ಶಾಪದ ರೂಪದಲ್ಲಿ ಮಲೇರಿಯಾ ಪಡೆಯುವಳೇನೋ..:-)
********************************
5.
ಝಗಮಗಿಸುವ ಹರಳುಗಳಿಂದ ನೇಯ್ದ
ಝಗಮಗಿಸುವ ಹರಳುಗಳಿಂದ ನೇಯ್ದ
ತನ್ನ
ಸೆರಗನ್ನು ನಿಶೆ ಬಾನ
ತುಂಬಾ
ಚೆಲ್ಲಿ ಮೆರೆದಾಗ
ಮೆಲ್ಲನದ
ಸರಿಸಿ ಇಣುಕುವ
ಚಂದಿರನ
ತೋರುವ ಮುಸ್ಸಂಜೆ!
*******************************
6.
ಬಿಸಿಲ ತಾಪದಿಂದ ನಲುಗಿದ ವಸುಂಧರೆಗೆ
ಬಿಸಿಲ ತಾಪದಿಂದ ನಲುಗಿದ ವಸುಂಧರೆಗೆ
ಮಿಣಿ
ಮಿಣಿ ಮಿಂಚುವ ಹರಳುಗಳಿಂದ
ನೇಯ್ದ
ಕಡುನೀಲಿ ಚಾದರವನ್ನು ಹೊದಿಸಿ
ಜೋಜೋ
ಲಾಲಿ ಹಾಡುತಿಹ ಮುಸ್ಸಂಜೆ!
***************************************
7.
ನಭದಲಿ ಹೊಳೆಯುತಿರುವ ಹುಣ್ಣಿಮೆಯ
ನಭದಲಿ ಹೊಳೆಯುತಿರುವ ಹುಣ್ಣಿಮೆಯ
ಚಂದಿರನ
ಬಿಂಬವ ತೋರುತ್ತಾ
ಬಾಲ
ರಾಮಚಂದಿರನಿಗೆ ತುತ್ತು
ಉಣಿಸುತಿರುವ
ಕೌಸಲ್ಯೆ ನಾನಾದೆನೆಂದು
ಕ್ಷಣ ಕಾಲ
ಕನಸು ಕಂಡ
ಮುಸ್ಸಂಜೆ!
*****************************************
-
-
8.
ಕ್ಷಿತಿಜದೆಡೆ ಜಾರುತ್ತಿರುವ ರವಿಯ ಬೀಳ್ಕೊಟ್ಟು
ಕ್ಷಿತಿಜದೆಡೆ ಜಾರುತ್ತಿರುವ ರವಿಯ ಬೀಳ್ಕೊಟ್ಟು
ತನ್ನತನವ
ಮೆರೆಯಲು ಹವಣಿಸುತಿರುವ
ಚಂದಮನಿಗೆ
ತೆರೆದ ಬಾಹುಗಳಿಂದ
ಮುಗುಳ್ನಗುತ್ತಾ
ಸ್ವಾಗತ ಕೋರುವ ಮುಸ್ಸಂಜೆ!
*****************************************
9.
"ದೂದ ಪೀರೆ ಮಝ ಮದನ ಗೋಪಾಲ"
"ದೂದ ಪೀರೆ ಮಝ ಮದನ ಗೋಪಾಲ"
ಹಾಡಿ
ಬಾಲಗೋವಳನಿಗೆ ನೇವೈದ್ಯ ಮಾಡಿದ
ಸಿಹಿಹಾಲಿಗಾಗಿ
ತಮ್ಮಂದಿರೊಡನೆ ಸ್ಪರ್ಧಿಸಿ
ಕೊನೆಯ
ಗುಟುಕು ಸೇವಿಸಿ ಧನ್ಯತೆ
ಪಡೆಯುತ್ತಿದ್ದ
ನೆನಪು ಮರುಕಳಿಸಿದ ಮುಸ್ಸಂಜೆ!
*************************************************
10.
ಭಾವಗಳ ಗಂಟು ಬಿಚ್ಚಿ,
ಭಾವಗಳ ಗಂಟು ಬಿಚ್ಚಿ,
ಒಲವಿಗೊಂದು ಓಲೆ
ಬರೆಯುವ ಹೊತ್ತು
ಈ
ಮುಸ್ಸಂಜೆ!
*************
11.
"ಕಣ್ಣಾ ಮುಚ್ಚೇ ಕಾಡೇ ಗೂಡೇ...
"ಕಣ್ಣಾ ಮುಚ್ಚೇ ಕಾಡೇ ಗೂಡೇ...
ಬಿಟ್ಟೇ
ಬಿಟ್ಟೆ...
ಕುವ್ಹಾ...ಕೂ...."
ಚುಕ್ಕಿ
ಚಂದ್ರಮ
ಗ್ರಹಗಳು
ಜತೆಗೂಡಿ
ಕಣ್ಣುಮುಚ್ಚಾಲೆ
ಆಡುತ್ತಿರುವ
ಮುಸ್ಸಂಜೆ!
**********************************
12.
ಸಣ್ಣನೆ ಬೀಸುವ
ಸಣ್ಣನೆ ಬೀಸುವ
ತಂಗಾಳಿಗೆ
ಜೋಕಾಲಿಯಾಡುವ
ತೆಂಗಿನ
ಗರಿಗಳ
ಎಡೆಯಿಂದ
ನುಸುಳಿ, ಗವಾಕ್ಷಿಯಿಂದ
ಒಳನುಗ್ಗಿ
ಕ್ಷಣಕೊಂದು
ಬದಲಾಗುವ
ಕಪ್ಪು-ಬಿಳುಪು
ಚಿತ್ತಾರವ
ಕೋಣೆಯೊಳು
ಚೆಲ್ಲಿ
ಮುದಕೊಡುವನು
ಶಶಿ ಈ
ಮುಸ್ಸಂಜೆ!
******************************
13.
ನಲ್ಲನ ಬರವನ್ನೇ ಕಾಯುತ್ತಿರುವ
ನಲ್ಲನ ಬರವನ್ನೇ ಕಾಯುತ್ತಿರುವ
ನಲ್ಲೆಯ ಗಲ್ಲಕ್ಕೆ ರಂಗನ್ನು ಮೆತ್ತಿ
ನಲ್ಲನಿಗೆ ಮತ್ತೇರಿಸುವ ಮುಸ್ಸಂಜೆ!
*****************************
14.
ದಿನದ ಪಾಳಿ ಮುಗಿಸಿ
ದಿನದ ಪಾಳಿ ಮುಗಿಸಿ
ರಂಗಮಂಟಪದ ಪರದೆಯ ಜಾರಿಸಿ
ಅತ್ತ ರವಿ ಸರಿದನು!
ಇತ್ತ ಝಗಮಗಿಸುವ ಬೆಳಕಿನಲ್ಲಿ
ಹೊಸ ಆಟ ತೋರಲು
ತೆರೆ ಮೇಲೇರಿಸಲು ಕಾದಿರುವ
ನಿಶೆಗೆ ಸ್ವಾಗತ ಕೋರುತಿಹಳು
ಸಂಧ್ಯೆ!
***********************************
15.
ಬೆಳ್ ಬೆಳದಿಂಗಳು
ಬೆಳ್ ಬೆಳದಿಂಗಳು
ಮಿನುಗುವ
ಚುಕ್ಕಿ
ಮಲ್ಲಿಗೆಯ
ಕಂಪು
ಸಾಕಲ್ಲವೆ; ಅದೋ
ಕೇಳುತ್ತಿದೆಯೇ
ಮುಸ್ಸಂಜೆ,
ನನ್ನೆದೆಯೊಳಗಿನ
ಭಾವ
ಗೆಜ್ಜೆಯ
ನಾದ!
*************************
16.
ದಿನದ ಧಾವಂತದ ಓಟಕೊಂದು ಅಲ್ಪ ವಿರಾಮವಿತ್ತು
ದಿನದ ಧಾವಂತದ ಓಟಕೊಂದು ಅಲ್ಪ ವಿರಾಮವಿತ್ತು
ಈ ಹೊಂಬೆಳಕಿನ ಮುಸ್ಸಂಜೆಯಲ್ಲಿ
ಬಾಲ್ಯದ ಸವಿನೆನಪಿನ ಸಿಹಿ ಮೆಲ್ಲುತ್ತಾ
ಚಾ ಕುಡಿಯುವ ಸಂಜೆ!
***************************
17.
ಮನದ ಕೊಳದೊಳು ಇಣುಕಿ
ಮನದ ಕೊಳದೊಳು ಇಣುಕಿ
ತನ್ನ
ಬಿಂಬವನಲ್ಲಿ ಚೆಲ್ಲಿ
ಹೆಪ್ಪುಗಟ್ಟಿದ
ಭಾವವ ಕರಗಿಸಿ
ಖುಷಿ
ತರುವ ಶಶಿ!
ಮುಸ್ಸಂಜೆ
ಮೂಡಿತೀ ಪರಿಯಲಿ!
***********************************
18.
ಅಲ್ಲೂ ಕತ್ತಲು
ಅಲ್ಲೂ ಕತ್ತಲು
ಇಲ್ಲೂ
ಕತ್ತಲು
ಅಲ್ಲಿ
ಶಶಿಯ ಉದಯ
ಇಲ್ಲಿ
ಒಲವಿನ ಉದಯ
ನಮ್ಮ
ಬದುಕಿಗೆ
ಮುಸ್ಸಂಜೆಯ
ಕಾಣಿಕೆ!
*************************
19.
ತವರು ಮನೆಯಿಂದ ಕೇಳಿ ಬಂದ ತಾಳದ ನಾದ
ತವರು ಮನೆಯಿಂದ ಕೇಳಿ ಬಂದ ತಾಳದ ನಾದ
ನೆರೆಮನೆಯಿಂದ
ತೇಲಿ ಬಂದ ಅಗರುಬತ್ತಿಯ ಗಂಧ
ಮೇಲಿನರಮನೆಯಿಂದ
ಚೆಲ್ಲುವ ತಿಂಗಳ ಬೆಳಕು
ಅನುರಾಗ
ಹೊಮ್ಮಿಸುತ್ತಿರುವ ಬಾನ ತಾರೆಯರು
ಆಹಾ!
ಎಂತಹ ಸೊಬಗಿನ ಮುಸ್ಸಂಜೆಯಿದು!
***************************************
20.
ಹಗಲೆಲ್ಲಾ ಅವನ ಸಂದೇಶಗಳ ನಿರೀಕ್ಷೆಯಲ್ಲೇಕಳೆಯಿತು...
ಹಗಲೆಲ್ಲಾ ಅವನ ಸಂದೇಶಗಳ ನಿರೀಕ್ಷೆಯಲ್ಲೇಕಳೆಯಿತು...
ಹ್ಞೂಂ, ಸುಳಿವೇ
ಇಲ್ಲ...
ಜತೆ
ಕೊಟ್ಟ ಭಾನು ಬೆನ್ನು ಹಾಕಿ ನಡೆದೇ ಬಿಟ್ಟ...
ಸುಕುಮಾರಿ, ನಾನಿರುವಿನೇ
ನಿನ್ನ ಜತೆ...
ಅನ್ನುತಲೇ
ತೇರನೇರಿ ಕುಳಿತು ನಲ್ಲೆಯ
ಮಾತುಗಳಿಗೆ
ಕಿವಿಯಾದ ಶಶಿ...
ಮುಸ್ಸಂಜೆಯಲಿ
ಹೊಮ್ಮಿತು ವಿರಹ ಮನದ ಕಾವ್ಯ!
*****************************************
21.
ನಕ್ಷತ್ರಗಳ ಪಡೆಯ ನಡುವೆ ಹೊಳೆಯುವ ಬಿದಿಗೆ ಚಂದಿರನೇ,
ನಕ್ಷತ್ರಗಳ ಪಡೆಯ ನಡುವೆ ಹೊಳೆಯುವ ಬಿದಿಗೆ ಚಂದಿರನೇ,
ಒಯ್ಯೋ
ನನ್ನೀ ಕಾವ್ಯವ ಅತ್ತ ಅವಳೆಡೆ..
ಕಾದಿರುವಳು
ಆಕೆ ದಿನವಿಡೀ...
ಅದೇಕೋ
ಇಂದೇ ಮಲಗಿದೆ ಅಡ್ಡ ಜಂಗಮವಾಣಿ...
ಒಂದಿಷ್ಟು
ಪುಣ್ಯ ಕಟ್ಟಿಕೋ...
ನನ್ನೆದೆಯ
ಭಾವವೇ ಹರಿದಿದೆ...
ಒಲುಮೆಯ
ಕಾವ್ಯದ ಓಲೆಯಾಗಿ...
ಕಣ್ಣಾಡಿಸಬೇಡ...
ನಗಬೇಡ...
ನಾ
ಕಾಳಿದಾಸನೂ ಅಲ್ಲ,
ನಾ
ಕೆ.ಎಸ್ ನರಸಿಂಹ ಸ್ವಾಮಿಯೂ ಅಲ್ಲ...
ನಾ ಕೇವಲ
ಹುಚ್ಚ...
ನನ್ನೊಲುಮೆಯ
ದಾಸ...
ಅದರರಿವಿದೆ
ಅವಳಿಗೆ..
ನನಗಷ್ಟು
ಸಾಕು...
ಇನ್ನೇನು
ಬೇಕು
ವಿರಹಿ
ಪ್ರೇಮಿಗೆ!
ಈ
ಮುಸ್ಸಂಜೆಯಲಿ ಮೂಡಿದ ವ್ಯಾಲಂಟೈನ್ ಗೀತೆ!
**********************************************
22.
ದಿನದ ಪಾಳಿ ಮುಗಿಸಿ
ದಿನದ ಪಾಳಿ ಮುಗಿಸಿ
ರಂಗಮಂಟಪದ
ಪರದೆಯ ಜಾರಿಸಿ
ಅತ್ತ ರವಿ
ಸರಿದನು!
ಇತ್ತ
ಝಗಮಗಿಸುವ ಬೆಳಕಿನಲ್ಲಿ
ಹೊಸ ಆಟ
ತೋರಲು
ತೆರೆ
ಮೇಲೇರಿಸಲು ಕಾದಿರುವ
ನಿಶೆಗೆ
ಸ್ವಾಗತ ಕೋರುತಿಹಳು
ಸಂಧ್ಯೆ!
********************************************
23.
ಸ್ಫೂರ್ತಿ ಪಡೆಯಲೆಂದು ನೆಟ್ಟೆ ದೃಷ್ಟಿ ಬಾನಿನತ್ತ...
ಸ್ಫೂರ್ತಿ ಪಡೆಯಲೆಂದು ನೆಟ್ಟೆ ದೃಷ್ಟಿ ಬಾನಿನತ್ತ...
ಮಿಣುಕು ತಾರೆಯರ ನಡುವೆ ಕಾಣಿಸಿತು ಅವನ ಬಿಂಬ...
ನವಿರಾದ ಕಂಪನ ನನ್ನೊಳಗೆ...
ಮನ ಬಿಚ್ಚಿ ನಾ ಹಾಡಿದೆ...
ಮಾಮರದಿ ಕುಹೂ ಕುಹೂ ಗಾನವೂ ಮಾರ್ದನಿಸಿತು...
ಅಪೂರ್ವ ಅನುಭೂತಿಯನಿತ್ತು ಮುದವಿತ್ತ ಮುಸ್ಸಂಜೆ!
****************************************
24.
ವಸಂತನ ಆಗಮನದ ಸಂಭ್ರಮವೆಲ್ಲೆಡೆ
ವಸಂತನ ಆಗಮನದ ಸಂಭ್ರಮವೆಲ್ಲೆಡೆ
ಹೊಸ ಚಿಗುರು ಸುತ್ತಮುತ್ತ
ಹಕ್ಕಿಗಳ ಚಿಲಿಪಿಲಿ ಗಾನ
ಹೊಸ ಲಹರಿ ಎದೆಯೊಳಗೆ
ಪೂರ್ಣ ಚಂದಮನ ನೋಟ
ಕಡು ನೀಲಿ ಆಗಸದಲಿ
ತಂಪೆರೆಯಿತು ಆರ್ದ ಮನಕೆ
ಹೊಸ ಪಲ್ಲವಿ ಹಾಡಿತು
ನಲ್ಲೆಯ ಮನ ಈ
ಮುಸ್ಸಂಜೆಯಲಿ!
******************************
25.
||ಮಾಮರದ ಮೇಲೊಂದು ಕೋಗಿಲೆ||
||ಮಾಮರದ ಮೇಲೊಂದು ಕೋಗಿಲೆ||
||ನದಿತೀರದ
ಕಲ್ಲ ಮೇಲೊಂದು ಕೊಳಲು||
||ಆ ಕಾಮನ
ಬಿಲ್ಲ ಮೇಲೊಂದು ನಲ್ಲನ ಬಿಂಬ||
||ಈ
ನಲ್ಲೆಯ ನಾಸಿಕದ ಮೇಲೊಂದು ನತ್ತು||
||ಕಡುನೀಲಿ
ನಭದ ಮೇಲೊಂದು ಬೆಳ್ಳಿ ಬಟ್ಟಲು||
||ಈ ಹುಣ್ಣಿಮೆ ರಾತ್ರಿಯಲೊಂದು
ರಾಸಕ್ರೀಡೆ||
||ಈ ಮುಸ್ಸಂಜೆಯಲೊಂದು ಮಧುರ ರಸ
ಕಾವ್ಯ||
************************
26.
ಕತ್ತಲೆಯ ಗರ್ಭವನು ಸೀಳಿ ಕುಲು ಕುಲು ನಗುವ ಚುಕ್ಕಿಗಳು
ಮೋಡದ ಮರೆಯಲಿ ಅಡಗಿ ನಲ್ಲೆಯ
ಓಲೆಯನೋದುವ ಚಂದಿರ
ಗೂಡಿಗೆ ಮರಳಿದ ಹಕ್ಕಿಗಳ ಮೌನ
ಜೋಗುಳ
ಮುಂಗುರುಳ ಜತೆ ಆಟವಾಡುತ್ತ
ನಲ್ಲನ ಸಂದೇಶ ಪಿಸುಗುಟ್ಟುವ ತಂಗಾಳಿ
ಅಪ್ಪಿ ಹಿಡಿದ ಮುದ್ದು ಸೊಸೆಯ
ಎಂಜಲಿನ ಅಭಿಷೇಕ ಗಲ್ಲಕ್ಕೆ
ಆಹಾ! ಸವಿ ಸವಿ ಮುಸ್ಸಂಜೆ!
**********************************
27.ಹಲವು ಹಂಬಲಗಳ ತರುವ ಶಶಿಯ
ತೋರುವ ಮುಸ್ಸಂಜೆ!
___________________________________
ತಲೆಯೆತ್ತದೆ ನಡೆದವಳ ಕೆಣಕಿ ಪ್ರಶ್ನಿಸಿದ...
"ಅದೇನೆ ಇಂದು ಬರೆಯಲು ಸ್ಫೂರ್ತಿ
ಬೇಡವೆ! ಇಂದೇಕೆ ನೋಟವಿಲ್ಲವಿತ್ತ?"
"ನನ್ನಲ್ಲಿ ಹುಟ್ಟಿಸುವೆ ನೀ
ಹಲವು ಹಂಬಲಗಳನು..
ನಿನ್ನ ತೋರುತಾ ರಾಮನಿಗೆ
ಉಣಿಸುವ ಕೌಸಲ್ಯೆಯಾಗುವಾಸೆ,
ಬೆಳದಿಂಗಳಲ್ಲಿ ರಾಧೆಯಾಗಿ
ಕೃಷ್ಣನೊಡನೆ ಯಮುನಾತೀರದಲಿ ಕೋಲಾಟವಾಡುವಾಸೆ,
ಕೈಲಾಸಗಿರಿಯಲಿ ಶೈಲಜೆಯಾಗಿ
ಪರಮೇಶನ ಸೇವೆಮಾಡುವಾಸೆ,
ಹಕ್ಕಿಯಾಗಿ ಹಾರಿ ನಿನ್ನೂರಿಗೆ
ಬರುವಾಸೆ,
ನಿನ್ನ ಮೋಹಕ ಬೆಳಕನ್ನು ಪುಟ್ಟ
ಕ್ಯಾನ್ವಾಸಿನಲ್ಲಿ ಬಂಧಿಸುವಾಸೆ,
ಮಿಂಚುವ ಚುಕ್ಕಿಯಾಗಿ ಆಗಸದಲಿ
ಮೆರೆಯಬೇಕೆಂಬಾಸೆ... "
ಹಂಬಲಗಳ ಪಟ್ಟಿಯನ್ನು ಕೇಳುತ
ಸೋತ ಚಂದಿರ!
ಅವನಿಗೆ ಪಟ್ಟಿಯ ಕೊಡುತ ನಾನೂ
ಸೋತ ಮುಸ್ಸಂಜೆ!
********************************
28.
ಗೆಜ್ಜೆಯ ಸದ್ದು ಮಾಡುತ್ತಾ
ಬಂದ ಸಂಧ್ಯೆ ಕಣ್ಮುಚ್ಚಿ
ಒಯ್ದಳು ನಲ್ಲನಿರುವ
ಚಂದ್ರಲೋಕಕೆ
ತೂಗುಯ್ಯಾಲೆಯಲಿ ಪವಡಿಸಿದ ಅವನ
ಬಾಹುಬಂಧನದಲಿ ಅಡಗಿದೆ ನಾ
ಪಾವನವಾಯಿತು ನನ್ನೀ ಮುಸ್ಸಂಜೆ!
***********************************
1 comment:
wah shiela... adbhuta sanjegalu mattalli huttidda bhaavagalu, avannu hotta maatugalu.. salute!
Post a Comment