-
“ರಂಗನಾಯಕ!
ರಾಜೀವಲೋಚನ! ರಮಣನೇ! ಬೆಳಗಾಯಿತು, ಏಳು”
ಹಾಡುತ್ತಾ ದಧಿಯ
ಕಡೆವ ಯಶೋಧೆಯಾಗುವ ಬಯಕೆ!
ಆ ಮಿಂಚುವ ನೀಳ ಕೇಶರಾಶಿಯನ್ನು
ಕಟ್ಟಿ, ನವಿಲುಗರಿಯ ಬಿಗಿದು, ಘಮಘಮಿಸುವ ತುಳಸೀ ಮಾಲೆ ಕೊರಳಿಗೆ ಹಾಕಿ, ಪೀತ ರಂಗಿನ
ಪೀತಾಂಬರವನ್ನು ಉಡಿಸಿ, ಕೊಳಲನ್ನು ಉಡಿಗೆ ಬಿಗಿದು, ಬುತ್ತಿಯನ್ನೀವ ಯಶೋಧೆಯಾಗುವ ಬಯಕೆ!
ಹ್ಮೂಂ,
ಇಡೇರಲಸಾಧ್ಯವಾದ ಬಯಕೆಗಳನ್ನೆಲ್ಲಾ ಮತ್ತೆ ಹೃದಯದ ಮೂಲೆಗೆಸೆದು ನಿತ್ಯ ಕರ್ಮಕೆ ಮರಳುವ ಮುಂಜಾನೆ!
No comments:
Post a Comment