ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
25 June, 2013
ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ.
ನಿಮ್ಮ ಕಂದನೆಂದು ಕಾಣಿರಿ, ನನ್ನೀ ಮುದ್ದು ಕಂದನ!
ತನ್ನ ಕನಸುಗಳನ್ನು ಸಾಕಾರಗೊಳಿಸಲು ಸಿಲಿಕಾನ್ ನಗರಿಗೆ
ಬರುತ್ತಿದ್ದಾನೆ ನನ್ನ ಕುವರ.
ನನ್ನೊಡೆಯನ ಅನುಗ್ರಹದೊಂದಿಗೆ ತಮ್ಮೆಲ್ಲರ ಶುಭ
ಹಾರೈಕೆಗಳೂ ಅವನ ಜತೆಯಲ್ಲಿರುವುದು ಎಂದು ನಂಬುತ್ತೇನೆ.
No comments:
Post a Comment