ಅವನಿತ್ತ ಕನಸುಗಳೆಲ್ಲ ಪಾರಿಜಾತದಂತೆ ಅರಳಿ ನಗುತ್ತಿದ್ದವು
ದಿಂಬಿನಡಿಯಿಂದ
ತೆವಳಿ ಬೆಳಕ ಕಾಣುವ ತವಕದಲ್ಲಿದ್ದವು
ವಸಂತನ ಕರೆಗೆ ಓಗೊಟ್ಟು ಹಾದಿಯಲಿ ಹರಡಿ ಕಾದಿದ್ದವು
ಕನಸಿತ್ತವನ ಗಂಧ ಹೊತ್ತು ತಂದ ತಂಗಾಳಿಗೆ ಮುತ್ತಿಟ್ಟವು
ಬೆಚ್ಚನೆಯ ಮುತ್ತಿನಲಿ ಉಸಿರಾಡಲು ಬಯಸಿದ ಅವುಗಳು
ನೋಟಕೂ ಕಾಣಿಸದವನ ಹೆಜ್ಜೆ ಸದ್ದಿಗೆ ಕೊನೆಯುಸಿರೆಳೆದವು.
No comments:
Post a Comment