ಕತ್ತಲೆಯ ಗರ್ಭವನು ಸೀಳಿ ಕುಲು ಕುಲು ನಗುತ ಕಣ್ಣು ಮಿಟುಕಿಸುವ ಚುಕ್ಕಿಗಳು,
ಮೋಡದ ಮರೆಯಲಿ ಅಡಗಿ ನಲ್ಲೆಯ ಓಲೆಯನೋದಿ ಕೆಂಪೇರುವ ಚಂದಿರ,
ಗೂಡಿಗೆ ಮರಳಿ ಮೌನ ಜೋಗುಳ ಹಾಡುತ ತರುಗಳ ತಬ್ಬಿ ಮಲಗುವ ಪಕ್ಕಿಗಳು,
ಮುಂಗುರುಳ ಜತೆ ಆಟವಾಡುತ್ತ ಅವನ ಸಂದೇಶ ಪಿಸುಗುಟ್ಟುತ ಮುದವೀವ ತಂಗಾಳಿ,
ಅಂಗೈಯಲಿ ಮುಸುಮುಸು ನಗುತ ಕಂಪಿನ ನಶೆಯೇರಿಸುವ ಸಂಪಿಗೆ,
ಭಾವಲೋಕದಲಿ ನಲಿದಾಡಿಸಿ ಮಡಿಲಲಿ ಮಲಗಿಸಿ ಲಾಲಿ ಹಾಡುವ ನಲ್ಲಿರುಳು!

No comments:
Post a Comment